Sanjay Raut To BJP: ಶಿವಸೇನಾ (ಯುಬಿಟಿ ಬಣ ) ನಾಯಕ ಸಂಜಯ್ ರಾವತ್ ಅವರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. 'ಮುಂಬೈ ವಶಪಡಿಸಿಕೊಳ್ಳುವ ಹೇಳಿಕೆ ನೀವೇಕೆ ನೀಡುತ್ತಿರುವಿರಿ, ಮುಂಬೈ ನಿಮ್ಮ ನಿಮ್ಮಪ್ಪನಿಗೆ ಸೇರಿದ್ದಾ?  ಧೈರ್ಯವಿದ್ದರೆ ಚುನಾವಣೆಗೆ ಸ್ಪರ್ಧಿಸಿ' ಎಂದಿದ್ದಾರೆ, ಪಾಕಿಸ್ತಾನದಲ್ಲಿ ಅಲ್ಲಾ, ಅಮೆರಿಕ, ಆರ್ಮಿ ಎಂಬ ಮೂರು ಎ ಗಳಿದ್ದರೆ, ಭಾರತದಲ್ಲಿ ಸಿ.ಬಿ.ಐ, ಇ.ಡಿ. ಮತ್ತು ಆದಾಯ ತೆರಿಗೆ ನಡೆಯುತ್ತವೆ" ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿರುವ ಎಲ್ಲರೂ ಸುಳ್ಳುಗಾರರು ಎಂದು ರಾವತ್ ನೇರ ನುಡಿಗಳಲ್ಲಿ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕೂ ಮುಂದುವರೆದು ಮಾತನಾಡಿರುವ ಸಂಜಯ್ ರಾವುತ್, "ಸರ್ಕಾರ ನಮ್ಮ ಬಳಿಗೆ ಬರಲಿ, ಮುಂದೊಂದು ದಿನ ಮೋದಿ, ಶಾ ಮತ್ತು ಫಡ್ನವಿಸ್ ನಮ್ಮ ಪಕ್ಷವನ್ನು ಪ್ರವೇಶಿಸುತ್ತಾರೆ, ಆಗ ಉದ್ಧವ್ ಠಾಕ್ರೆ ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ" ಎಂದು ಹೇಳಿದ್ದಾರೆ. ಹುಲಿ ವೇಷ ಧರಿಸಿದ ಕೆಲ ತೋಳಗಳು ಗೋರೆಗಾಂವ್ ಗೆ ಹೋಗಿವೆ, ಆದರೆ ಇಲ್ಲಿ ಅಸಲಿ ಹುಲಿಗಳಿವೆ’ ಎಂದು ವ್ಯಂಗ್ಯವಾಡಿದ್ದಾರೆ.


ಇದನ್ನೂ ಓದಿ-Smriti Irani On Ram Mandir: 'ಒಂದೊಮ್ಮೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡರೆ, ಕೇಜ್ರಿವಾಲ್ ಅವರಿಗೆ ಮತ್ತೆ ಅಜ್ಜಿ ಕನಸು ಬೀಳಲಿದೆ'


ಬಿಪರ್‌ಜಾಯ್ ಬಗ್ಗೆ ಸಂಜಯ್ ರಾವತ್ ಹೇಳಿದ್ದೇನು?
ಬಿಪರ್‌ಜೋಯ್ ಚಂಡಮಾರುತದ ಕುರಿತು ಮಾತನಾಡಿದ ಸಂಜಯ್ ರಾವತ್, "ಬಿಪರ್‌ಜಾಯ್ ದೊಡ್ಡ ಯೋಜನೆ ಎಂದು ಪ್ರಧಾನಿ ಮೋದಿ ಭಾವಿಸಿದ್ದಾರೆ, ಹೀಗಾಗಿ ಅವರು ಅದನ್ನು ಗುಜರಾತ್‌ಗೆ ಕಳುಹಿಸಿದ್ದಾರೆ. ಶಿವಸೇನೆಯು ನಕಲಿ ಮಾಲ್ ಗಳ ರಾಶಿ ಹೊಂದಿದೆ. ನಮ್ಮ ಪಕ್ಷವು ಅಬ್ದುಲ್ ಸತ್ತಾರ್ ಅವರ ಬೋಗಸ್ ಬೀಜವಲ್ಲ. ಬಾಳಾಸಾಹೇಬ್ ಠಾಕ್ರೆಯ ನಿಜವಾದ ಬೀಜ, ನಮ್ಮ ಶಿವಸೇನೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ, ಏಕೆಂದರೆ ನಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ." ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Amit Shah: 'ಸಾವಿರಾರು ಅಮಾಯಕ ಸಿಖ್ ಸಹೋದರ-ಸಹೋದರಿಯರನ್ನು ಹತ್ಯೆಗೈದರು..', 84ರ ಗಲಭೆ ಉಲ್ಲೇಖಿಸಿ ಕಾಗ್ರೆಸ್ ವಿರುದ್ದ್ ಅಮಿತ್ ಶಾ ವಾಗ್ದಾಳಿ


ಕೇಂದ್ರ ಸರ್ಕಾರದ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ
ಜೆ.ಪಿ.ನಡ್ಡಾ, ಅಮಿತ್ ಶಾ ಅವರ ಹೆಸರನ್ನು ಉಲ್ಲೇಖಿಸಿ ಮಾತನಾಡಿರುವ ರಾವುತ್, "ಕೇಂದ್ರದ ಹಲವು ನಾಯಕರು ಆಗಾಗ ಮುಂಬೈಗೆ ಬರುತ್ತಾರೆ, ಈ ಜನರಿಗೆ ಮುಂಬೈ ವಶಪಡಿಸಿಕೊಳ್ಳುತ್ತೇವೆ ಎಂದು ಭಾವಿಸುತ್ತಾರೆ. ನಮ್ಮ ಹೋರಾಟವು ಮಹಾರಾಷ್ಟ್ರದ ದ್ರೋಹಿಗಳ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ ಕೂಡ ಈ ಸರ್ಕಾರವನ್ನು  ವಜಾಗೊಳಿಸಿದೆ, ನ್ಯಾಯಾಲಯ ಮರಣದಂಡನೆಯನ್ನು ಮಾತ್ರ ನೀಡುತ್ತದೆ, ಆದರೆ ಗಲ್ಲಿಗೇರಿಸಲು ಜಲ್ಲಾದನ ಅವಶ್ಯಕತೆ ಇದೆ. ಇನ್ನು ಮುಂದಿನ 50 ದಿನಗಳು ಸರ್ಕಾರವು ಗೌರವ ಸಲ್ಲಿಸುವ ಕೆಲಸವನ್ನು ಮಾಡಬೇಕಾಗಿದೆ" ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.