Smriti Irani On Ram Mandir: 'ಒಂದೊಮ್ಮೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡರೆ, ಕೇಜ್ರಿವಾಲ್ ಅವರಿಗೆ ಮತ್ತೆ ಅಜ್ಜಿ ಕನಸು ಬೀಳಲಿದೆ'

Smriti Irani On Ram Mandir: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಭಾನುವಾರ ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

Written by - Nitin Tabib | Last Updated : Jun 18, 2023, 09:04 PM IST
  • ಮತ್ತೊಂದೆಡೆ, ದೆಹಲಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮಾತನಾಡಿ, ಇಂದು ದೆಹಲಿಯಲ್ಲಿ ಕರ್ತವ್ಯ ಪಥವನ್ನು ನೋಡಲು ದಿನಕ್ಕೆ 60-70 ಸಾವಿರ ಜನರು ಭೇಟಿ ನೀಡುತಿದ್ದಾರೆ,
  • ಅದನ್ನು ಪ್ರಧಾನಿ ನಿರ್ಮಿಸಿದ್ದಾರೆ. ಸಿಎಂ ಕೇಜ್ರಿವಾಲ್ ಅವರ ಮನೆಯಲ್ಲಿ 8 ಲಕ್ಷ ರೂ.ಗಳ ಪರದೆಗಳನ್ನು ಅಳವಡಿಸಲಾಗಿದೆ,
  • ಅವರ ಮನೆಯಲ್ಲಿ 15 ಸ್ನಾನಗೃಹಗಳಿವೆ. ಕೇಜ್ರಿವಾಲ್ ಅವರು ಮದ್ಯದ ಹಗರಣವನ್ನು ಮಾಡಿದ್ದಾರೆ ಮತ್ತು 52 ಕೋಟಿ ಮೌಲ್ಯದ ಅರಮನೆಯನ್ನು ನಿರ್ಮಿಸಿದ್ದಾರೆ ಎಂದು ಸಚ್‌ದೇವ ಆರೋಪಿಸಿದ್ದಾರೆ.
Smriti Irani On Ram Mandir: 'ಒಂದೊಮ್ಮೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡರೆ, ಕೇಜ್ರಿವಾಲ್ ಅವರಿಗೆ ಮತ್ತೆ ಅಜ್ಜಿ ಕನಸು ಬೀಳಲಿದೆ' title=

Smriti Irani On Ram Mandir: ಕೇಂದ್ರ ಸಚಿವ ಇರಾನಿ ಅವರು ಇಂದು ಅಂದರೆ ಭಾನುವಾರ ದೆಹಲಿಯಲ್ಲಿ ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಶ್ಚಿಮ ದೆಹಲಿಯ ಉತ್ತಮ್ ನಗರದಲ್ಲಿ ಸಭೆ ಆಯೋಜಿಸಲಾಗಿದ್ದು, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಮತ್ತು ಇತರ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ನೀರು, ವಿದ್ಯುತ್ ಸಿಗುತ್ತಿಲ್ಲ ಎಂಬ ಆರೋಪ
ಈ ಸಭೆಯಲ್ಲಿ ಮಾತನಾಡಿದ ಅಮೇಥಿಯ ಲೋಕಸಭಾ ಸಂಸದೆ ಇರಾನಿ, ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಮರಾಜ್ಯ ಸ್ಥಾಪಿಸಿದ್ದು ಬಿಜೆಪಿ, ಆದರೆ ದೆಹಲಿ ಮುಖ್ಯಮಂತ್ರಿಗೆ ದಿಕ್ಕಾರ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪ ಮಾಡಿದ ಅವರು, ದೆಹಲಿಯಲ್ಲಿ ಜನರಿಗೆ ನೀರು ಅಥವಾ ವಿದ್ಯುತ್ ಸಿಗುತ್ತಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿದ ಸ್ಮೃತಿ ಇರಾನಿ,  ಟೀ ಮಾರುವವ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು. ಆದರೆ ಭಾರತದ ಜನತೆ ಕಾಂಗ್ರೆಸ್ ನ ಈ ಅಹಂಕಾರವನ್ನು ನುಚ್ಚುನೂರು ಮಾಡಿದ್ದಾರೆ ಎಂದು ಸ್ಮೃತಿ ಹೇಳಿದ್ದಾರೆ.

ಇದನ್ನೂ ಓದಿ-Chattisgarh: ಒಗ್ಗೂಡಿ ಭಾರತವನ್ನು 'ಹಿಂದೂ ರಾಷ್ಟ್ರ'ವನ್ನಾಗಿಸಲು ಕರೆ ನೀಡಿದ ಕಾಂಗ್ರೆಸ್ ಶಾಸಕಿ, ಪಕ್ಷ ಹೇಳಿದ್ದೇನು ಗೊತ್ತಾ?

ಜಾಹೀರಾತು ನೀಡಿ ಸಿಎಂ ಗಲಾಟೆ ಮಾಡುತ್ತಿದ್ದಾರೆ - ಪ್ರವೇಶ್ ವರ್ಮಾ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸಂಸದ ಪ್ರವೇಶ್ ಸಾಹಿಬ್ ವರ್ಮಾ 'ಸಿಎಂ ಕೇಜ್ರಿವಾಲ್ ದೆಹಲಿಗೆ ಏನೂ ಮಾಡಿಲ್ಲ, ಕೇವಲ 550 ಕೋಟಿ ರೂ.ಗಳ ಜಾಹೀರಾತು ನೀಡಿ ಅಳಲು ತೋಡಿಕೊಳ್ಳುತ್ತಿದ್ದಾರೆ, ಕೇಜ್ರಿವಾಲ್ ತನಗಾಗಿ ಮಾತ್ರ ಮಾಡುತ್ತಾರೆ, 4.5 ಕೋಟಿ ವೆಚ್ಚ ಮಾಡಿ ಮನೆಯ ಟಾಯ್ಲೆಟ್ ಸೀಟ್ ಹಾಕಿಸಿದ್ದಾರೆ, ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ಅವರು ಕೇಜ್ರಿವಾಲ್ ನಿರ್ಮಿಸಿದ ಆಸ್ಪತ್ರೆಗಳಿಗೆ ಹೋಗುವುದಿಲ್ಲ, ಯಾರ ಮನೆಯಲ್ಲಿಯೂ ಶುದ್ಧ ನೀರಿಲ್ಲ, ಆದರೆ ಪ್ರತಿಯೊಬ್ಬರ ಮನೆಗೆ ವಿದ್ಯುತ್ ಬಿಲ್ ಬರುತ್ತದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ-Amit Shah: 'ಸಾವಿರಾರು ಅಮಾಯಕ ಸಿಖ್ ಸಹೋದರ-ಸಹೋದರಿಯರನ್ನು ಹತ್ಯೆಗೈದರು..', 84ರ ಗಲಭೆ ಉಲ್ಲೇಖಿಸಿ ಕಾಗ್ರೆಸ್ ವಿರುದ್ದ್ ಅಮಿತ್ ಶಾ ವಾಗ್ದಾಳಿ

ಕರ್ತವ್ಯ ಪಥ-ನೋಡಲು ನಿತ್ಯ 60-70 ಸಾವಿರ ಜನ ಬರುತ್ತಾರೆ - ಸಚದೇವ
ಮತ್ತೊಂದೆಡೆ, ದೆಹಲಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮಾತನಾಡಿ, ಇಂದು ದೆಹಲಿಯಲ್ಲಿ ಕರ್ತವ್ಯ ಪಥವನ್ನು ನೋಡಲು ದಿನಕ್ಕೆ 60-70 ಸಾವಿರ ಜನರು ಭೇಟಿ ನೀಡುತಿದ್ದಾರೆ, ಅದನ್ನು ಪ್ರಧಾನಿ ನಿರ್ಮಿಸಿದ್ದಾರೆ. ಸಿಎಂ ಕೇಜ್ರಿವಾಲ್ ಅವರ ಮನೆಯಲ್ಲಿ 8 ಲಕ್ಷ ರೂ.ಗಳ ಪರದೆಗಳನ್ನು ಅಳವಡಿಸಲಾಗಿದೆ, ಅವರ ಮನೆಯಲ್ಲಿ 15 ಸ್ನಾನಗೃಹಗಳಿವೆ. ಕೇಜ್ರಿವಾಲ್ ಅವರು ಮದ್ಯದ ಹಗರಣವನ್ನು ಮಾಡಿದ್ದಾರೆ ಮತ್ತು 52 ಕೋಟಿ ಮೌಲ್ಯದ ಅರಮನೆಯನ್ನು ನಿರ್ಮಿಸಿದ್ದಾರೆ ಎಂದು ಸಚ್‌ದೇವ ಆರೋಪಿಸಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News