Viral Video: ದೈತ್ಯ ಹಾವಿನ ಮೇಲೆ ದಾಳಿ ಇಟ್ಟ ಮೊಸಳೆ.. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ
Snake Video: ಸಾಮಾಜಿಕ ಮಾಧ್ಯಮಗಳಲ್ಲಿ ಕಾಡು ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಅಂತಹುದೇ ಒಂದು ವಿಡಿಯೋದಲ್ಲಿ ದೈತ್ಯ ಹಾವೊಂದರ ಮೇಲೆ ಮೊಸಳೆಯೊಂದು ದಾಳಿ ಇಟ್ಟಿರುವುದನ್ನು ನೀವು ಗಮನಿಸಬಹುದು. ಇದಾದ ಬಳಿಕ ನಡೆಯುವುದು ಮಾತ್ರ ಎದೆ ಝಲ್ ಎನ್ನಿಸುವಂತಿದೆ.
Social Media Trending: ಹಾವನ್ನು ಹೇಗೆ ಭೂಮಿಯ ಮೇಲೆ ಅಪಾಯಕಾರಿ ಜಂತು ಎಂದು ಭಾವಿಸಲಾಗುತ್ತದೆಯೋ ಹಾಗೆಯೇ ಮೊಸಳೆಯು ಕೂಡ ನೀರಿನಲ್ಲಿ ರಾಜನಿದ್ದಂತೆಯೇ. ಈ ಎರಡೂ ಜೀವಿಗಳು ಎಷ್ಟೊಂದು ಪವರ್ ಫುಲ್ ಇರುತ್ತವೆ ಎಂದರೆ, ಬೇರೆ ಪ್ರಾಣಿಗಳು ಇವುಗಳೊಂದಿಗೆ ಕಾದಾಟಕ್ಕಿಳಿಯುವ ಮುನ್ನ ನೂರು ಬಾರಿ ಯೋಚಿಸುತ್ತವೆ. ಆದರೆ, ಈ ಎರಡೂ ಜೀವಿಗಳು ಪರಸ್ಪರ ಕಾದಾಟಕ್ಕೆ ಇಳಿದರೆ ಏನಾಗಲಿದೆ ಎಂಬುದನ್ನು ನೀವೆಂದಾದರು ಯೋಚಿಸಿದ್ದೀರಾ? ಅಥವಾ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಎಂದಾದರು ಊಹಿಸಿದ್ದೀರಾ?
ದೈತ್ಯ ಹಾವಿನ ಮೇಲೆ ದಾಳಿ ಇಟ್ಟ ಹೆಬ್ಬಾವು
ಮೊಸಳೆಯೊಂದು ಮೆಲ್ಲಗೆ ನೀರಿನಿಂದ ಹೊರಬಂದು, ನೆಲದ ಮೇಲೆ ಕುಳಿತಿರುವ ಒಂದು ಹಾವಿನ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂಬುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಈಗ ಹಾವು ಈ ದಾಳಿಯಿಂದ ಪಾರಾಗುವ ಮೂಲಕ ಮೊಸಳೆಗೆ ತಕ್ಕ ಪಾಠ ಕಲಿಸುತ್ತದೆಯೇ ಅಥವಾ ಬಲಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಮೊದಲನೆಯದಾಗಿ ನೀವು ಕೂಡ ಈ ವೈರಲ್ ವಿಡಿಯೋವನ್ನು ನೋಡಿ.
Disha Patani Viral Video: ದಿಶಾ ಪಾಟ್ನಿಯ ಇಂತಹ ಅವತಾರ ನೀವು ಈ ಹಿಂದೆ ಎಂದಿಗೂ ನೋಡಿರಲು ಸಾಧ್ಯವೇ ಇಲ್ಲ
ಆದರೆ, ಹಾವು ಈ ದಾಳಿಗೆ ಸಿದ್ಧವಾಗಿರಲಿಲ್ಲ ಮತ್ತು ಅದರ ಪಾಲಿಗೆ ಈ ದಾಳಿ ಸಂಪೂರ್ಣ ಅನಿರೀಕ್ಷಿತವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮೊಸಳೆಗೆ ಪ್ರತ್ಯುತ್ತರ ನೀಡುವುದು ದೂರದ ವಿಷಯ, ಹಾವು ಮೊಸಳೆಯ ಹಿಡಿತದಿಂದ ಹೊರಬರಲು ಪ್ರಯತ್ನಿಸುವ ಮೊದಲೇ, ಕೆಲವೇ ಸೆಕೆಂಡುಗಳಲ್ಲಿ ಮೊಸಳೆ ಅದನ್ನು ನೀರಿನೊಳಗೆ ಎಳೆದುಕೊಂಡು ಹೋಗುತ್ತದೆ ಮತ್ತು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ನೀರಿನೊಳಗೆ ಸಾಕಷ್ಟು ಅವಾಂತರ ಸೃಷ್ಟಿಸಿದರೂ ಹಾವಿಗೆ ತನ್ನ ಪ್ರಾಣ ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ.
ಇದನ್ನೂ ಓದಿ-Snake Viral Video: ಗೆಳತಿ ನಾಗಿಣಿಗಾಗಿ ಚಪ್ಪಲಿ ಕಳ್ಳತನ ಮಾಡಿ ಎಸ್ಕೇಪ್ ಆದ ನಾಗಪ್ಪ!! ವಿಡಿಯೋ ನೋಡಿ
ವಿಡಿಯೋ ನೋಡಿದ ಜನರು ಬೆಚ್ಚಿಬಿದ್ದರು
ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಅಪಾಯಕಾರಿ ವೀಡಿಯೊ ನೋಡಿ ಹಲವರ ಮೈಮೇಲಿನ ರೋಮಗಳು ನೆಟ್ಟಗಾಗಿವೆ. ಈ ವೀಡಿಯೋ ನೋಡಿದ್ರೆ ಕಾಡಿಗೆ ಒಂದೇ ಒಂದು ನಿಯಮ ಅನ್ವಯಿಸುತ್ತದೆ ಮತ್ತು ಅದು ಶಕ್ತಿವಂತನ ಪಾರಮ್ಯ ಎಂಬುದು ಸ್ಪಷ್ಟವಾಗುತ್ತದೆ. ಈ ಬಾರಿ ಮೊಸಳೆ ತನ್ನ ಶಕ್ತಿಯನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.