ನವದೆಹಲಿ: ಇನ್ಮುಂದೆ 100 ರೂ.ನ ನೋಟು ಹರಿಯುವುದು ಇಲ್ಲ ಹಾಗೂ ತುಂಡಾಗುವುದು ಇಲ್ಲ. ಶೀಘ್ರವೇ ನಿಮ್ಮ ಬಳಿಯೂ ಕೂಡ ಇಂತಹ ಒಂದು 100 ರೂ. ಮುಖಬೆಲೆಯ ನೋಟು ಇರಲಿದೆ. ನಿಮ್ಮ ಜೇಬಿನಲ್ಲಿ ಎಷ್ಟು ದಿನ ಬೇಕಾದರೂ ನೀವು ಇದನ್ನು ಇಡಬಹುದು. ಎಷ್ಟು ಮಡಿಕೆ ಬಿದ್ದರೂ ಸಹಿತ ಈ ನೋಟು ತುಂಡಾಗುವುದಿಲ್ಲ. ನೋಡಲು ಈ ನೋಟು ಸದ್ಯ ಚಾಲ್ತಿಯಲ್ಲಿ ಇರುವ 100ರೂ. ನೋಟಿನಂತೆಯೇ ಇದೆ. ಆದರೆ, ಇದರಲ್ಲಿ ಒಂದು ವಿಶೇಷ ವೈಶಿಷ್ಟ್ಯ ಇದೆ. ಈ ವೈಶಿಷ್ಟ್ಯದ ಕಾರಣ ಇದನ್ನು ನೀವು ಹೇಗೆ ಬೇಕಾದರೂ ಕೂಡ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬಹುದು. ಶೀಘ್ರದಲ್ಲಿಯೇ ಈ ಬದನೆ ಬಣ್ಣದ ಹೊಸ ನೋಟು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ರೀತಿಯ ಒಟ್ಟು 1 ಕೋಟಿ ನೋಟುಗಳನ್ನು ಬಿಡುಗಡೆಗೆ ಸಿದ್ಧತೆ ನಡೆಸಿದೆ.


COMMERCIAL BREAK
SCROLL TO CONTINUE READING

ಈ ನೋಟುಗಳಿಗೆ ವಾರ್ನಿಸ್ ಹಚ್ಚಲಾಗಿದೆ
ಸದ್ಯ ಮಾರುಕಟ್ಟೆಯಲ್ಲಿ ಬದನೆ ಬಣ್ಣದ ರೂ.100 ಮುಖಬೆಲೆಯ ನೋಟು ಚಾಲ್ತಿಯಲ್ಲಿ ಇದೆ. ಇಂತಹುದರಲ್ಲಿ ಹೊಸ ನೋಟು ಯಾಕೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಕೂಡ ಹುಟ್ಟಿರಬಹುದು. ಆದರೆ, RBI ಈ ಹೊಸ ನೋಟಿನಲ್ಲಿ ಒಂದು ಹೊಸ ವೈಶಿಷ್ಟ್ಯವನ್ನು ಜೋಡಿಸಿದೆ. ಈ ವೈಶಿಷ್ಟ್ಯ ಹೊಂದಿರುವ ನೋಟುಗಳನ್ನು ದೇಶದ ಒಟ್ಟು ಐದು ನಗರಗಳಲ್ಲಿ ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಬಿಡುಗಡೆಗೊಳಿಸಲು ನಿರ್ಧಾರಿಸಿದೆ. RBI ವಾರ್ನಿಸ್ ಹಚ್ಚಲಾಗಿರುವ ಈ ನೋಟುಗಳನ್ನು ಜಾರಿಗೊಳಿಸಲಿದೆ. ಈ ನೋಟು ಕೂಡ ಬದನೆ ಬಣ್ಣದ ನೋಟು ಆಗಿರಲಿದೆ.


ತುಂಡಾಗುವುದಿಲ್ಲ ಹರಿಯುವುದಿಲ್ಲ
ಹೊಸ 100 ರೂ. ಮುಖಬೆಲೆಯ ಹೊಸ ನೋಟು ನೀರಿನಲ್ಲಿ ನೆನೆಯುವುದು ಇಲ್ಲ, ಹರಿಯುವುದು ಇಲ್ಲ. ಈ ನೂತನ ನೋಟಿನ ಮೇಲೆ ನೀರಿನ ಪರಿಣಾಮ ಉಂಟಾಗುವುದಿಲ್ಲ. ಏಕೆಂದರೆ ಈ ನೋಟಿಗೆ ತಯಾರಿಗೆ ವಾರ್ನಿಸ್ ಪೇಂಟ್ ಬಳಸಲಾಗಿದೆ. ಕಟ್ಟಿಗೆಗೆ ಬಳಸಲಾಗುವ ವಾರ್ನಿಸ್ ಬಣ್ಣವೇ ಇದಾಗಿದ್ದು, ಇಂತಹ ನೋಟುಗಳ ಮುದ್ರಣ RBI ಶೀಘ್ರವೇ ಪ್ರಾರಂಭಿಸಲಿದೆ ಎನ್ನಲಾಗಿದೆ.


ಸರ್ಕಾರ ಕೂಡ ನೀಡಿದೆ ಅನುಮತಿ
ದೇಶದ ಸುಮಾರು ಐದು ಪಟ್ಟಣಗಳಲ್ಲಿ ವಾರ್ನಿಸ್ ನಿಂದ ತಯಾರಿಸಲಾಗಿರುವ ಸುಮಾರು 1 ಕೋಟಿ ನೋಟುಗಳನ್ನು ಬಿಡುಗಡೆ ಮಾಡಲು ಸರ್ಕಾರ, RBIಗೆ ಅನುಮತಿ ನೀಡಿದೆ. ಈ ಕುರಿತು ಮಂಗಳವಾರ ರಾಜ್ಯಸಭೆಯಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ಮಾಹಿತಿ ನೀಡಿದ್ದಾರೆ. ಈ ಕುರಿತು ಉತ್ತರ ನೀಡಿರುವ ಅವರು, ಸಿಮ್ಲಾ, ಜೈಪುರ್, ಭುವನೇಶ್ವರ, ಮೈಸೂರು ಹಾಗೂ ಕೊಚ್ಚಿ ನಗರಗಳಲ್ಲಿ ಪ್ರಾಯೋಗಿಕ ಹಂತವಾಗಿ ಒಟ್ಟು ಒಂದು ಕೋಟಿ ವಾರ್ನಿಸ್ ನೋಟುಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ ಎಂದಿದ್ದಾರೆ. ಈ ರೀತಿಯ ಬ್ಯಾಂಕ್ ನೋಟುಗಳು ದೀರ್ಘಾವಧಿಯವರೆಗೆ ಬಾಳಿಕೆಯಲ್ಲಿ ಇರಲಿವೆ.


ನೋಟಿನ ವಿಶೇಷತೆ ಏನು?


  • ಈ ನೋಟಿನ ಸೈಜ್ ಸದ್ಯ ಚಾಲ್ತಿಯಲ್ಲಿರುವ ರೂ.100 ನೋಟಿನ ಸೈಜ್ ಅನ್ನು ಹೋಲಿಕೆಯಾಗಲಿದೆ.

  • ಈ ನೋಟು ಕೂಡ ಗಾಂಧಿ ಸೀರಿಸ್ ನೋಟು ಆಗಿರಲಿದೆ.

  • ಇದರ ಡಿಸೈನ್ ಕೂಡ ಸದ್ಯ ಚಾಲ್ತಿಯಲ್ಲಿರುವ ನೋಟಿನ ಡಿಸೈನ್ ಗೆ ಹೋಲಿಕೆಯಾಗಲಿದೆ.

  • ವಾರ್ನಿಸ್ ಬಳಸಲಾಗಿರುವ ಈ ನೋಟುಗಳು ಸದ್ಯ ಚಾಲ್ತಿಯಲ್ಲಿರುವ ನೋಟುಗಳಿಗಿಂತ ದುಪ್ಪಟ್ಟು ಬಾಳಿಕೆಗೆ ಬರಲಿವೆ.

  • ಸದ್ಯ ಚಾಲ್ತಿಯಲ್ಲಿರುವ ನೋಟುಗಳ ಸರಾಸರಿ ಬಾಳಿಕೆ ಎರಡೂವರೆಯಿಂದ ಮೂರುವರೆ ವರ್ಷಗಳಾಗಿದೆ. ವಾರ್ನಿಸ್ ಏರಿಸಲಾಗಿರುವ ಹೊಸ ನೋಟುಗಳು ಸರಾಸರಿ ಬಾಳಿಕೆ 7 ವರ್ಷ ಇರಲಿದೆ ಎಂದು ಅಂದಾಜಿಸಲಾಗಿದೆ.


ಶೇ.20ರಷ್ಟು ದುಬಾರಿಯಾಗಲಿದೆ ಈ ಹೊಸ ನೋಟು


  • ಸದ್ಯ ಚಾಲ್ತಿಯಲ್ಲಿರುವ 100 ರೂ.ಮುಖಬೆಲೆಯ 1000 ನೋಟುಗಳ ಮುದ್ರಣಕ್ಕೆ 1570 ರೂ. ವೆಚ್ಚ ತಗುಲುತ್ತದೆ.

  • ವಾರ್ನಿಸ್ ಏರಿಸಲಾಗಿರುವ ಹೊಸ ನೋಟುಗಳ ಮುದ್ರಣಕ್ಕೆ ಶೇ.20 ರಷ್ಟು ಹೆಚ್ಚು ಹಣ ವೆಚ್ಚವಾಗಲಿದೆ.

  • ವಾರ್ನಿಸ್ ಏರಿಸಲಾದ ಕಾರಣ ಇದರ ಮೇಲೆ ನೀರು ಅಥವಾ ಕೆಮಿಕಲ್ ಪ್ರಭಾವ ಬೀರುವುದಿಲ್ಲ.

  • ವಾರ್ನಿಸ್ ಬಳಕೆಯ ಕಾರಣ ಇವುಗಳನ್ನು ನೀವು ಹಲವು ಬಾರಿ ಮಡಿಕೆ ಹಾಕಲು ಸಾಧ್ಯವಿಲ್ಲ.

  • ನೋಟುಗಳನ್ನು ಪುನಃ ಪುನಃ ಮಡಚುವುದರಿಂದ ನೋಟು ಹರಿದುಹೋಗುವ ಸಾಧ್ಯತೆ ಕೂಡ ಶೇ.20ರಷ್ಟು ಕಡಿಮೆಯಾಗಲಿದೆ.