ಪ್ರತಿಭಾನ್ವಿತ ತಂಡದ `ಶುಭಮಂಗಳ` ಟೀಸರ್ ರಿಲೀಸ್...
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ನಿರ್ದೇಶನದ ಶುಭಮಂಗಳ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ಈ ಎವರ್ ಗ್ರೀನ್ ಸಿನಿಮಾವನ್ನು ಯಾರಾದ್ರೂ ಮರೆಯುದುಂಟೇ.? ಇದೇ ಟೈಟಲ್ ಇಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾ ಸೆಟ್ಟೇರಿರೋದು ಹಳೆ ವಿಷಯ.
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ನಿರ್ದೇಶನದ ಶುಭಮಂಗಳ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ಈ ಎವರ್ ಗ್ರೀನ್ ಸಿನಿಮಾವನ್ನು ಯಾರಾದ್ರೂ ಮರೆಯುದುಂಟೇ.? ಇದೇ ಟೈಟಲ್ ಇಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾ ಸೆಟ್ಟೇರಿರೋದು ಹಳೆ ವಿಷಯ. ಇದೀಗ ಶುಭಮಂಗಳ ಸಿನಿಮಾ ಅಂಗಳದಿಂದ ಸಖತ್ ಮಜವಾಗಿರುವ ಟೀಸರ್ ತುಣುಕು ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಕನ್ನಡದ ಜನಪ್ರಿಯ ಕಿರುತೆರೆ ಜೋಡಿಗೆ ಈಗ ಕಂಕಣ ಭಾಗ್ಯ...!
ಈ ಹಿಂದೆ ಸಿಲ್ಕ್ ಬೋರ್ಡ್, ಮಹಾ ಸಂಪರ್ಕ ಸೇರಿದಂತೆ 20ಕ್ಕೂ ಹೆಚ್ಚು ಕಿರುಚಿತ್ರಗಳ ನಿರ್ಮಾತೃ ಸಂತೋಷ್ ಗೋಪಾಲ್ ನಿರ್ದೇಶನದಲ್ಲಿ ತಯಾರಾಗಿರುವ ಶುಭಮಂಗಳ ಸಿನಿಮಾದಲ್ಲಿ ಒಂದು ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಕೊಂಡು ಸಿನಿಮಾ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಸಿನಿಮಾ ಇದಾಗಿದ್ದು, ಸಿದ್ಧಾರ್ಥ್ ಮಾಧ್ಯಮಿಕ, ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಅರುಣ್ ಬಲಾಜಿ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.
ಯಂಗ್ ಟೈಗರ್ ಬರ್ತ್ ಡೇಗೆ ಡಬ್ಬಲ್ ಧಮಾಕಾ, ತಾರಕ್ ಹುಟ್ಟುಹಬ್ಬದ ದಿನವೇ ಜೀ5 OTTಗೆ RRR ಎಂಟ್ರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.