ನವದೆಹಲಿ:ಕರೋನಾ ಕಾಲದಲ್ಲಿ ಮೊಬೈಲ್ ಸಿಮ್ ಅಥವಾ ಕಾರ್ಡ್ ಬದಲಾಯಿಸಲು ಇನ್ನು ಮುಂದೆ ಕಂಪನಿಗಳ ಮಳಿಗೆಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಗ್ರಾಹಕರು ತಮ್ಮ ಮನೆಯಲ್ಲಿ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ ಸಿಮ್ ಕಾರ್ಡ್ ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರ ಕರಡು ಸಿದ್ಧಪಡಿಸಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ದೂರಸಂಪರ್ಕ ಸಚಿವಾಲಯವು ಮೊಬೈಲ್ ಗ್ರಾಹಕರಿಗೆ ಸಂಪರ್ಕವಿಲ್ಲದ ಪರಿಶೀಲನೆಯನ್ನು ನಡೆಸಲು ಅನುಮತಿ ನೀಡುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಆಪ್ ಹಾಗೂ OTPಗಳ ಮೂಲಕ ಪರಿಶೀಲನೆ
ಇದರಿಂದ ಕೇವಲ ಸಿಮ್ ಗ್ರಾಹಕರ ಪರಿಶೀಲನೆ ಮಾತ್ರ ನಡೆಯದೆ, ಸಿಮ್ ಕಾರ್ಡ್ ಕೂಡ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಯೋಜನೆಯನ್ನು ರೂಪಿಸಲಾಗಿದೆ. ವೆರಿಫಿಕೆಶನ್ ಗಾಗಿ ಗ್ರಾಹಕರು ತಮ್ಮ ದಾಖಲೆಗಳನ್ನು ಆನ್ಲೈನ್ ನಲ್ಲಿಯೇ ಸಲ್ಲಿಸಬೇಕು. ನೂತನ ನಿಯಮಗಳ ಪ್ರಕಾರ ಆಪ್ ಹಾಗೂ OTPಗಳ ಸಹಾಯದಿಂದ ಈ ವೆರಿಫಿಕೆಶನ್ ನಡೆಯಲಿದೆ.


ಪ್ರಸ್ತುತ ನೂತನ ಸಿಮ್ ಕಾರ್ಡ್ ಪಡೆಯಲು ಗ್ರಾಹಕರು ಕಂಪನಿಯ ರಿಟೇಲ್ ಔಟ್ ಲೆಟ್ ಗೆ ಭೇಟಿ ನೀಡುವ ಅವಶ್ಯಕತೆ ಇದೆ. ಅಲ್ಲಿ ಗ್ರಾಹಕರು ತಮ್ಮ ಐಡಿ ಪ್ರೂಫ್ ಹಾಗೂ ವಿಳಾಸದ ಕುರಿತು ದಾಖಲೆಗಳನ್ನು ಒದಗಿಸಬೇಕು. ತಮ್ಮ ರಿಟೇಲ್ ಔಟ್ ಲೆಟ್ ಗೆ ಸಿಮ್ ಗಾಗಿ ಭೇಟಿ ನೀಡಿದ ಗ್ರಾಹಕರ ಇನ್ಸ್ಟಂಟ್ ಫೋಟೋವನ್ನು ಕ್ಲಿಕ್ಕಿಸಿ ಕಂಪನಿ ತನ್ನ ಕಸ್ಟಮರ್ ಎಕವಿಸಿಶನ್ ಫಾರ್ಮ್ ಗೆ ಲಗತ್ತಿಸುತ್ತದೆ. ಬಳಿಕ ಫಾರ್ಮ್ ನಲ್ಲಿ ಕೇಳಲಾದ ಮಾಹಿತಿಯನ್ನು  ಭರ್ತಿ ಮಾಡಿ, OTP ನಮೂದಿಸಿದ ಬಳಿಕ ಗ್ರಾಹಕರಿಗೆ ಸಿಮ್ ಸಿಗಲಿದೆ.


ಕೊರೊನಾ ಕಾಲದಲ್ಲಿ  ಟೆಲಿಕಾಂ ಕಂಪನಿಗಳ ಸಂಕಷ್ಟ ಹೆಚ್ಚಾಗಿದೆ. ಲಾಕ್ ಡೌನ್ ಕಾರಣ ಫಿಸಿಕಲ್ ಔಟ್ ಲೇಟಗಳು ಬಂದ್ ಆಗಿವೆ. ಅವು ತಮ್ಮ ಸಂಪೂರ್ಣ ಕ್ಷಮತೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ.  ಸ್ಟೋರ್ ಗಳಲ್ಲಿ ರಿಚಾರ್ಜಿಂಗ್ ಕೂಡ ಕಡಿಮೆಯಾಗಿದೆ. ಇದರ ಪ್ರಭಾವ ಕಂಪನಿಯ ರೆವಿನ್ಯೂ ಮೇಲೆ ಉಂಟಾಗುತ್ತಿದೆ. ಇತ್ತೀಚೆಗಷ್ಟೇ ಇದರಿಂದ ಐಡಿಯಾ, ಏರ್ಟೆಲ್ ಹಾಗೂ ವೊಡಾಫೋನ್ ಕಂಪನಿಗಳ ನಷ್ಟ ಹೆಚ್ಚಾಗಿದೆ.