ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಸಿಮಿ, ಇನ್ನೂ ಐದು ವರ್ಷ ನಿಷೇಧ ಮುಂದುವರಿಕೆ
ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಸಂಘಟನೆಯನ್ನು `ಕಾನೂನು ವಿರೋಧಿ ಸಂಘಟನೆ` ಎಂದು ಕೇಂದ್ರ ಸರಕಾರ ಘೋಷಿಸಿದೆ.
ನವದೆಹಲಿ: ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಈಗಲೂ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರಣ ಅದನ್ನು ಕೇಂದ್ರ ಸರಕಾರ ಈ ಸಂಘಟನೆಯ ಮೇಲೆ ಹೇರಿದ್ದ ನಿಷೇಧವನ್ನು ಇನ್ನೂ ಐದು ವರ್ಷಕ್ಕೆ ಮುಂದುವರಿಸಲಾಗುವುದು ಎಂದು ಹೇಳಿದೆ.
ಕೇಂದ್ರ ಸರ್ಕಾರದ ಗೃಹ ಇಲಾಖೆ ಈ ಪ್ರಕಟಣೆ ಹೊರಡಿಸಿದ್ದು, ಈ ಕಾನೂನು ವಿರೋಧಿ ಸಂಘಟನೆಗೆ ಸಮಾಜದ ಸಾಮರಸ್ಯವನ್ನು ಕದಡುವ ಸಾಮರ್ಥ್ಯವಿದೆ ಮತ್ತು ಅದರ ಚಟುವಟಿಕೆಗಳು ದೇಶದ ಸುರಕ್ಷತೆಗೆ ಮಾರಕವಾಗಿವೆ ಎಂದು ತಿಳಿಸಿದೆ. ಸಿಮಿ ಸಂಘಟನೆ ದೇಶಾದ್ಯಂತ ಅನೇಕ ಉಗ್ರ ಕೃತ್ಯಗಳಲ್ಲಿ ಶಾಮೀಗಿದ್ದುದು ಬಹಿರಂಗವಾಗಿತ್ತು.
ಸಿಮಿ ನಡೆಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ಕೂಡಲೇ ನಿಂತ್ರಿಸುವುದು ಅಗತ್ಯವಾಗಿದೆ. ತಲೆಮರೆಸಿಕೊಂಡಿರುವ ಅದರ ಸದಸ್ಯರು ಮತ್ತೆ ಸಂಘಟಿತರಾಗುವುದನ್ನು ತಡೆಯಬೇಕಾಗಿದೆ; ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಿಮಿ ಸಂಘಟನೆ ದೇಶದ ಮತ ನಿರಪೇಕ್ಷ ಸ್ವರೂಪವನ್ನು ಹಾಳು ಗೆಡಹುವ ಮತ್ತು ಜನರಲ್ಲಿ ಕೋಮು ದ್ವೇಷವನ್ನು ಹಬ್ಬಿಸುವಲ್ಲಿ ನಿರತವಾಗಿರುವುದರಿಂದ ಅದನ್ನು ಇನ್ನೂ ಐದು ವರ್ಷಗಳ ಅವಧಿಗೆ ನಿಷೇಧಿಸುವ ಅಗತ್ಯವಿದೆ ಎಂದು ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಿದೆ.
ಸಿಮಿ ಸಂಘಟನೆಯನ್ನು ಹಿಂದೆ ಕೂಡ ಹಲವಾರು ಬಾರಿ ನಿಷೇಧಿಸಲಾಗಿದೆ. ಮೊದಲ ಬಾರಿ ಅಮೆರಿಕದ ಮೇಲೆ 2001ರ ಸೆಪ್ಟೆಂಬರ್ 26ರಂದು ಭಯೋತ್ಪಾದಕ ದಾಳಿಯಾದ ನಂತರ ಸಿಮಿಯನ್ನು ಮೊದಲ ಬಾರಿ ನಿಷೇಧಿಸಲಾಗಿತ್ತು. ನಂತರ 2003ರಿಂದ 2005ರವರೆಗೆ ಎರಡನೇ ಬಾರಿ ನಿಷೇಧಿಸಲಾಗಿತ್ತು. ನಂತರ ಮೂರನೇ ಬಾರಿ 2006ರ ಫೆಬ್ರವರಿ 8ರಂದು ಸಿಮಿಯನ್ನು ಬ್ಯಾನ್ ಮಾಡಲಾಗಿತ್ತು. 2008ರಲ್ಲಿ ಈ ನಿಷೇಧವನ್ನು ದೆಹಲಿ ಹೈಕೋರ್ಟ್ ತೆರವುಗೊಳಿಸಿತ್ತು. ಆದರೆ, ಅದರ ಮರುದಿನವೇ ಆ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು.
ಸಿಮಿ ಯನ್ನು ಏಪ್ರಿಲ್ 25, 1977 ರಂದು ಉತ್ತರಪ್ರದೇಶದ ಆಲಿಗಢ್ನಲ್ಲಿ ಸ್ಥಾಪಿಸಲಾಯಿತು ಮತ್ತು ಈ ಸಂಘಟನೆಯು ಭಾರತವನ್ನು ಇಸ್ಲಾಮಿಕ್ ರಾಜ್ಯಕ್ಕೆ ಪರಿವರ್ತಿಸುವುದರ ಮೂಲಕ ಭಾರತವನ್ನು ಮುಕ್ತಗೊಳಿಸುವ ಕಾರ್ಯಸೂಚಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಮೊದಲು 2001 ರಲ್ಲಿ ಅಕ್ರಮ ಸಂಘಟನೆ ಎಂದು ಘೋಷಿಸಲಾಯಿತು ಮತ್ತು ಅಂದಿನಿಂದಲೂ ಹಲವಾರು ಬಾರಿ ಇದನ್ನು ನಿಷೇಧಿಸಲಾಗಿದೆ. ಕೊನೆಯ ಬಾರಿಗೆ ಫೆಬ್ರವರಿ 1, 2014 ರಂದು ಯುಪಿಎ ಸರಕಾರವು ಐದು ವರ್ಷಗಳ ಕಾಲ ಅದನ್ನು ನಿಷೇಧಿಸಿತು.