ನವದೆಹಲಿ: ಸಾಮಾನ್ಯವಾಗಿ ಎಲ್ಲರೂ ವಾಟ್ಸಪ್ ನಲ್ಲಿ ಫೋಟೋಗಳು, ವೀಡಿಯೋಗಳು, ಮೆಸೇಜ್'ಗಳನ್ನು ಶೇರ್ ಮಾಡ್ತಾನೇ ಇರ್ತೀವಿ. ಇದು ನಿಜವಾಗ್ಲೂ ಒಳ್ಳೆ ಎಕ್ಸ್'ಪೀರಿಯನ್ಸ್ ನೀಡುತ್ತೆ. ಆದರೆ, ಈ ವಾಟ್ಸಪ್ ಮೆಸೇಜೇ ಇಂದು ಕಂಪನಿಗೆ ಕಂಟಕವಾಗುತ್ತೆ ಅಂದ್ರೆ ನಂಬ್ತೀರಾ??? ನಂಬಲೇಬೇಕು, ಯಾಕಂದ್ರೆ ಕೇವಲ ಒಂದೇ ಒಂದು ವಾಟ್ಸಪ್ ಮೆಸೇಜಿನಿಂದಾಗಿ ಇನ್ಫಿಬೀಮ್ ಅವೆನ್ಯೂಸ್ ಲಿಮಿಟೆಡ್ ಶೇ.71ರಷ್ಟು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಈ ಕಾಮರ್ಸ್ ಕಂಪನಿಯ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಈ ಸಂದೇಶ ಉದ್ಯಮಿಗಳ ನಡುವೆ ಶೇರ್ ಆದ ಬಳಿಕ ಕಂಪನಿ ತನ್ನ ಶೇರುಗಳನ್ನು ಕಳೆದುಕೊಂಡಿದೆ.


COMMERCIAL BREAK
SCROLL TO CONTINUE READING

ಡೋಲಟ್ ಕ್ಯಾಪಿಟಲ್ ಮಾರುಕಟ್ಟೆ ಲಿಮಿಟೆಡ್ ಅನಲಿಸ್ಟ್ ಭಾವಿನ್ ಮೆಹ್ತಾ ಅವರು ಶೇರುದಾರರೊಂದಿಗೆ ಸಭೆ ನಡೆಸುವ ಮುನ್ನ, ಬ್ರೋಕರೇಜ್ ಅಕ್ವೇರಿಯಸ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ಗೆ ವಾಟ್'ಸ್ಸಾಪ್ನಲ್ಲಿ ಈ ಸಂದೇಶವನ್ನು ಶೇರ್ ಮಾಡಲು ಹೇಳಿದ್ದರು. Iquarius ನ ವಿಶ್ಲೇಷಕರು ಕೆಲವು ತಿಂಗಳ ಹಿಂದೆ ಕೆಲವು ಗ್ರಾಹಕರಿಗೆ ಈ ಸಂದೇಶ ಕಳುಹಿಸಿದ್ದರು. ಅದೇ ಸಂದೇಶ ಗುರುವಾರ ವಾಟ್ಸಪ್'ನಲ್ಲಿ ಶೇರ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೇಶ ಕಳುಹಿಸುವವರನ್ನು ಗುರುತಿಸಲು ನಿರಾಕರಿಸಿದ್ದು, ಇದಕ್ಕೆ ಯಾರೂ ಹೊಣೆಗಾರರಲ್ಲ ಎಂದು ಕೆಲವರು ಹೇಳಿದ್ದಾರೆ ಎನ್ನಲಾಗಿದೆ. 


ಶುಕ್ರವಾರ ಶೇರು ಮಾರುಕಟ್ಟೆಯಲ್ಲಿ ಕಂಪನಿಯ ಶೇರುಗಳ ಮೌಲ್ಯ ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಶೇರುಗಳ ಬಗ್ಗೆ ಯಾವುದೇ ಮಾಹಿತಿ ಅಥವಾ ಪ್ರಕಟಣೆ ಹೊರಡಿಸುವ ಅಗತ್ಯವಿಲ್ಲ ಎಂದು ಹೇಳಿದೆ. ವಾಟ್ಸಪ್ ಸಂದೇಶದ ಪ್ರಕಾರ, ಕಂಪನಿಯು ತನ್ನ ಘಟಕಗಳಿಗೆ ಬಡ್ಡಿ ರಹಿತ ಮತ್ತು ಯಾವುದೇ ಸೆಕ್ಯುರಿಟಿ ಇಲ್ಲದೆ ಸಾಲ ನೀಡಿದೆ ಎಂದು ಆರೋಪಿಸಲಾಗಿದೆ. ಕಂಪನಿಯ ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 31ರವರೆಗೆ ಇತರ ವಾಣಿಜ್ಯ ಸಂಸ್ಥೆಗಳಿಗೆ ಇನ್ಫಿಬೀಮ್ ಕಂಪನಿಯು 135 ಕೋಟಿ ರೂ.ಗಳಿಗೆ ಬಡ್ಡಿ ರಹಿತ ಸಾಲ ನೀಡಿದೆ ಎನ್ನಲಾಗಿದೆ.