ನವದೆಹಲಿ: ಇಂದೋರ್ ನ ಹಳ್ಳಿಯೊಂದರಲ್ಲಿ 21 ವರ್ಷದ ಯುವತಿ ಬೇರೆ ಜಾತಿಯ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದಾಳೆ ಎಂದು ಆಕೆಯ ಕಿರಿಯ ಸಹೋದರ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಹತ್ಯೆಯಾಗಿರುವ ಮಹಿಳೆಯು ಆರು ತಿಂಗಳ ಹಿಂದೆ ಬೇರೆ ಜಾತಿಗೆ ಸೇರಿದ ವ್ಯಕ್ತಿಯನ್ನು ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ರಾಮ್‌ಕುಮಾರ್ ರೈ ಪಿಟಿಐ ಗೆ ತಿಳಿಸಿದ್ದಾರೆ. ಮೃತಳಾಗಿರುವ ಮಹಿಳೆ ಮತ್ತು ಪತಿ ಇಬ್ಬರೂ ರಾವದ್ ಗ್ರಾಮದ ನಿವಾಸಿಗಳು ಎನ್ನಲಾಗಿದೆ.


“ದಂಪತಿಗಳು ಮದುವೆಯಾದ ನಂತರ ಹಳ್ಳಿಯಿಂದ ಹೊರ ಹೋಗಿದ್ದರು, ಆದರೆ ಶನಿವಾರದಂದು ಆಕೆ ಮನೆಗೆ ಮರಳಿದ್ದಳು. ಗಂಡನ ಮನೆಯಲ್ಲಿದ್ದಾಗ ಆಕೆಯ 17 ವರ್ಷದ ಕಿರಿಯ ಸಹೋದರ ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ ”ಎಂದು ರೈ ಹೇಳಿದರು.


ತಕ್ಷಣ ಮಹಿಳೆಯನ್ನು ಇಂದೋರ್ ಮಹಾರಾಜ ಯಶ್ವಂತರಾವ್ ಆಸ್ಪತ್ರೆಗೆ (ಎಂವೈಹೆಚ್) ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈಗ ಆರೋಪಿ ಬೆಟ್ಮಾ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎನ್ನಲಾಗಿದೆ.