`Hindu ಯುವತಿಯನ್ನು ಚುಡಾಯಿಸಿದರೆ, ನಿಮ್ಮ ಸಮುದಾಯದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗುವುದು`
Crime News - ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ವಿಡಿಯೋವೊಂದು ಭಾರಿ ವೈರಲ್ (Viral Video) ಆಗುತ್ತಿದೆ. ಈ ವಿಡಿಯೋದಲ್ಲಿ ಹಿಂದೂ ಸಂತನೋರ್ವ ಮಸೀದಿಯೊಂದರ ಹೊರಗೆ ಆಕ್ಷೇಪಾರ್ಹ ಭಾಷೆಯನ್ನು (Derogatory Comments) ಬಳಸುತ್ತಿರುವುದನ್ನು ನೀವು ನೋಡಬಹುದು. ವೈರಲ್ ವಿಡಿಯೋದಲ್ಲಿ ಸಂತ ಲೌಡ್ ಸ್ಪೀಕರ್ ನಲ್ಲಿ ಈ ಆಕ್ಷೇಪಾರ್ಹ ಭಾಷೆಯನ್ನು (Abusive Language) ಬಳಸುತ್ತಿದ್ದಾನೆ.
ಸೀತಾಪುರ್ - ಉತ್ತರ ಪ್ರದೇಶದ (Uttar Pradesh) ಸೀತಾಪುರ್ (Sithapur) ಜಿಲ್ಲೆಯ ಮಸೀದಿಯೊಂದರ ಹೊರಗೆ ಹಿಂದೂ ಸಂತನೋರ್ವನ ದ್ವೇಷಪೂರಿತ ಭಾಷಣ ಮಾಡುತ್ತಿರುವ ವೀಡಿಯೊ ಭಾರಿ ವೈರಲ್ ಆಗುತ್ತಿದ್ದು, ಇದೀಗ ಆಕ್ರೋಶಕ್ಕೆ ಕಾರಣವಾಗಿದೆ, ವಿಶೇಷ ಎಂದರೆ ಸಂತಹ ಈ ಆಕ್ಷೇಪಾರ್ಹ ಭಾಷಣದ ಆರು ದಿನಗಳ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೀಗ ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಪ್ರಸ್ತುತ ಭಾರಿ ವೈರಲ್ (Viral Video) ಆಗುತ್ತಿದೆ. ಈ ವಿಡಿಯೋದಲ್ಲಿ ಹಿಂದೂ ಸಂತನೋರ್ವ ಮಸೀದಿಯೊಂದರ ಹೊರಗೆ ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿರುವುದನ್ನು ನೀವು ನೋಡಬಹುದು. ವೈರಲ್ ವಿಡಿಯೋದಲ್ಲಿ ಸಂತ ಲೌಡ್ ಸ್ಪೀಕರ್ ನಲ್ಲಿ ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಶನಿವಾರ ಈ ಕುರಿತು ಟ್ವಿಟ್ಟರ್ ನಲ್ಲಿ ಹೇಳಿಕೆ ನೀಡಿರುವ ಪೊಲೀಸರು, ಸಂಬಂಧಿತ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಲಾಗಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಆಕ್ಷೇಪಾರ್ಹ ಭಾಷೆಯನ್ನು ಬಳಸಲಾಗಿರುವ ಈ ಎರಡು ನಿಮಿಷಗಳ ಕಾಲಾವಧಿಯ ವಿಡಿಯೋ ಅನ್ನು ಏಪ್ರಿಲ್ 2 ರಂದು ರೆಕಾರ್ಡ್ ಮಾಡಲಾಗಿದೆ. ವಿಡಿಯೋದಲ್ಲಿ ಖೈರಾಬಾದ್ ಪಟ್ಟಣದ ಮಹರ್ಷಿ ಶ್ರೀ ಲಕ್ಷ್ಮಣ್ ದಾಸ್ ಉದಾಸೀನ ಆಶ್ರಮದ (Maharshi Shri Lakshman Das Udasin) ಮಹಂತ್ ಬಜರಂಗ್ ಮುನಿ ದಾಸ್ (Mahant Bajarang Muni Das) ಹಿಂದೂ ಹೊಸವರ್ಷ ಹಾಗೂ ನವರಾತ್ರಿಯ ಸಂದರ್ಭದಲ್ಲಿ ನಡೆದ ಮೆರವಣಿಗೆಯ ಸಂದರ್ಭದಲ್ಲಿ ಈ ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎನ್ನಲಾಗಿದೆ.
ವಿಡಿಯೋದಲ್ಲಿ ಆಕ್ಷೇಪಾರ್ಹ ಟಿಪ್ಪಣಿಗಳು
ಈ ವಿಡಿಯೋದಲ್ಲಿ ಬಜರಂಗ್ ಮುನಿ ದಾಸ್ 'ಹಿಂದೂ ಯುವತಿಯನ್ನು ಯಾವುದೇ ಒಂದು ವಿಶೇಷ ಸಮುದಾಯದ ವ್ಯಕ್ತಿ ಚುಡಾಯಿಸಿದರೆ ಅಥವಾ ಛೇಡಿಸಿದರೆ, ತಾವು ಖುದ್ದಾಗಿ ಆ ಸಮುದಾಯದ ಮಹಿಳೆಯ ರೇಪ್ ಮಾಡುವುದಾಗಿ' ಹೇಳಿದ್ದಾರೆ. ಅಷ್ಟೇ ಅಲ್ಲ ತಮ್ಮೀ ಭಾಷಣದಲ್ಲಿ ಸಂತರು ಇತರ ಕೆಲ ಆಕ್ಷೇಪಾರ್ಹ ಕಾಮೆಂಟ್ ಗಳನ್ನು ಕೂಡ ಮಾಡಿದ್ದಾರೆ.
ಇದನ್ನೂ ಓದಿ-Viral Vido : ಅಬ್ಬಬ್ಬಾ..! ಎಮ್ಮೆಗೆ ಹೆದರಿ ಓಡಿ ಹೋದ ಸಿಂಹಗಳ ಹಿಂಡು
ಲೌಡ್ ಸ್ಪೀಕರ್ ಮೂಲಕ ಆಕ್ಷೇಪಾರ್ಹ ಭಾಷೆಯ ಬಳಕೆ
ಸಂತರ ಮೆರವಣಿಗೆ ಮಸೀದಿಯೊಂದರ ಬಳಿ ತಲುಪಿದಾಗ, ಸಂತರು ಲೌಡ್ ಸ್ಪೀಕರ್ ನಲ್ಲಿ ಆ ಆಕ್ಷೇಪಾರ್ಹ ಭಾಷೆಯ ಬಳಕೆ ಮಾಡಲು ಆರಂಭಿಸಿದರು ಎಂದು ಆರೋಪಿಸಲಾಗಿದೆ. 'ಖೈರಾಬಾದ್ ನಲ್ಲಿ ಒಂದೇ ಒಂದು ಹಿಂದೂ ಯುವತಿಯನ್ನು ನೀವು ಚುಡಾಯಿಸಿದರೆ, ನಾನು ನಿಮ್ಮ ಮನೆ ಮಗಳು, ಸೊಸೆಯನ್ನು ಮನೆಯ ಹೊರಗೆ ತಂದು ಅವರ ಮೇಲೆ ಅತ್ಯಾಚಾರ ಎಸಗುವೆ ಎಂಬುದನ್ನು ನಾನು ನಿಮಗೆ ಪ್ರೀತಿಯಿಂದ ಹೇಳಲು ಬಯಸುತ್ತೇನೆ' ಎಂದು ಸಂತರು ಹೇಳಿದ್ದಾರೆ.
ಇದನ್ನೂ ಓದಿ-Supriya-Shashi Tharoor Troll: ಸುಪ್ರಿಯಾ ಜತೆಗಿನ ಸಂಭಾಷಣೆ ಬಗ್ಗೆ ತರೂರ್ ಹೇಳಿದ್ದೇನು ಗೊತ್ತಾ?
ಪ್ರಕರಣದ ಕುರಿತು ಹೇಳಿಕೆ ನೀಡಿರುವ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ (ಉತ್ತರ ವಲಯ) ರಾಜೀವ್ ದೀಕ್ಷಿತ್, ತನಿಖೆಯಲ್ಲಿ ಬಹಿರಂಗವಾದ ಸತ್ಯ ಮತ್ತು ಪುರಾವೆಗಳ ಆಧಾರದ ಮೇಲೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.