Viral Vido : ಅಬ್ಬಬ್ಬಾ..! ಎಮ್ಮೆಗೆ ಹೆದರಿ ಓಡಿ ಹೋದ ಸಿಂಹಗಳ ಹಿಂಡು

Animal Fight Viral Video : ಈ ಬಲಿಷ್ಠ ಪ್ರಾಣಿಗಳು ದುರ್ಬಲವಾಗಿರುವ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಅವುಗಳ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ಈ ರೀತಿಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಕಾಣ ಸಿಗುತ್ತವೆ.

Written by - Ranjitha R K | Last Updated : Apr 8, 2022, 01:08 PM IST
  • ವೈರಲ್ ಆಯಿತು ಪ್ರಾಣಿಗಳ ವಿಡಿಯೋ
  • ಎಮ್ಮೆಗೆ ಹೆದರಿ ಓಡಿದ ಸಿಂಹ
  • ಸಿಂಹದ ಮೇಲೆ ಪ್ರತಿದಾಳಿಗೆ ಮುಂದಾದ ಎಮ್ಮೆ
Viral Vido : ಅಬ್ಬಬ್ಬಾ..! ಎಮ್ಮೆಗೆ ಹೆದರಿ ಓಡಿ ಹೋದ ಸಿಂಹಗಳ ಹಿಂಡು  title=
Viral video (photo instagram

ಬೆಂಗಳೂರು : Animal Fight Viral Video : ಸಾಮಾಜಿಕ ಮಾಧ್ಯಮದಲ್ಲಿ  ಪ್ರಾಣಿಗಳಿಗೆ ಸಂಬಂಧಿಸಿದ ವೀಡಿಯೊಗಳು ಬಂದ ತಕ್ಷಣ ಎಲ್ಲರ ಗಮನ ಸೆಳೆಯುತ್ತವೆ. ಕೆಲವೊಮ್ಮೆ ಎರಡು ಪ್ರಾಣಿಗಳು ಪರಸ್ಪರ ಪ್ರೀತಿಯಿಂದ ಮುದ್ದಾಡುವ ವಿಡಿಯೋಗಳನ್ನು ಇಲ್ಲಿ ಕಾಣಬಹುದು. ಇನ್ನು ಕೆಲವೊಮ್ಮೆ ಪ್ರಾಣಿಗಳ ಭಯಾನಕ ಕಾದಾಟದ ವಿಡಿಯೋಗಳು ಕೂಡಾ ಕಾಣಸಿಗುತ್ತವೆ. ಸಾಮಾನ್ಯವಾಗಿ ಹುಲಿ, ಚಿರತೆ, ಸಿಂಹದಂತಹ ಪ್ರಾಣಿಗಳು ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡುವ ವಿಡಿಯೋಗಳನ್ನು ಕಾಣಬಹುದು. 

ಈ ಬಲಿಷ್ಠ ಪ್ರಾಣಿಗಳು ದುರ್ಬಲವಾಗಿರುವ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಅವುಗಳ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ಈ ರೀತಿಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಕಾಣ ಸಿಗುತ್ತವೆ. ಆದರೆ ಯಾವತ್ತಾದರೂ ಎಮ್ಮೆಗೆ ಹೆದರಿ ಸಿಂಹ ಓಡಿ ಹೋಗುವ ಬಗ್ಗೆ ಕೇಳಿದ್ದೀರಾ? ಅಂದ ಹಾಗೆ ಇಲ್ಲಿ ಓಡಿ ಹೋಗಿರುವುದು ಬರೀ ಒಂದು ಸಿಂಹವಲ್ಲ, ಸಿಂಹಗಳ ಹಿಂಡು. ಹೌದು, ಎಮ್ಮೆಗೆ ಹೆದರಿ ಸಿಂಹಗಳ ಹಿಂಡು ಸ್ಥಳದಿಂದ ಕಾಲ್ಕಿತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. 

ಇದನ್ನೂ ಓದಿ : Viral Video: ಒಂದಲ್ಲ, 3 ಕೋಬ್ರಾ ಹಾವುಗಳ ಜೊತೆಗೆ ಯುವಕನ ಸ್ಟಂಟ್, ಮುಂದೇನಾಯ್ತು ನೀವೇ ನೋಡಿ

ಎಮ್ಮೆಗಳಿಗೆ ಹೆದರಿದ ಕಾಡಿನ ರಾಜ : 
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಸಿಂಹ ಮತ್ತು ಎಮ್ಮೆಗಳಿಗೆ ಸಂಬಂಧಿಸಿವೆ. ಇಲ್ಲಿ ಸಿಂಹ ಎಮ್ಮೆಯ ಮೇಲೆ ದಾಳಿ ಮಾಡಲು ಮುಂದೆ ಬರುತ್ತದೆ. ಆದರೆ ಎಮ್ಮೆ ಸಿಂಹಕ್ಕೆ ಹೆದರದೆ ಎದೆಯೊಡ್ಡಿ ನಿಲ್ಲುತ್ತದೆ. ಮಾತ್ರವಲ್ಲ ಸಿಂಹದ ಮೇಲೆ ಪ್ರತಿದಾಳಿಗೆ ಮುಂದಾಗುತ್ತದೆ. ಎಮ್ಮೆ ಈ ರೀತಿ ಪ್ರತಿ ದಾಳಿಗೆ ಮುಂದಾದಾಗ ಸಿಂಹಗಳ ಹಿಂಡು ಓಡಿ ಹೋಗುತ್ತವೆ. 

 

ಇಲ್ಲಿ ಗುಂಪು ಗುಂಪಾಗಿ ಬರುತ್ತಿರುವ ಎಮ್ಮೆಗಳನ್ನು ನೋಡಿ ಜಾಗದಿಂದ ಕಾಲ್ಕಿಳುವುದೇ ಒಳಿತು ಎಂದು ಅಲ್ಲಿಂದ ಓಡಿ ಹೋಗುತ್ತವೆ.  ಎಮ್ಮೆಗಳ ಒಗ್ಗಟ್ಟು ನೋಡಿ ಸಿಂಹಗಳ ಕೈ ಕಾಲು ನಡುಗುತ್ತಿರುವುದನ್ನು ಇಲ್ಲಿ ಕಾಣಬಹುದು.   Wildlife_stories_andanimals_powers ಹೆಸರಿನ Instagram ಖಾತೆಯಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋ ಇದುವರೆಗೆ ಸಾವಿರಾರು ವೀಕ್ಷಣೆ ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ : Viral Video : ಗಸ್ತಿನಲ್ಲಿದ್ದಾಗ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ ಕಾಡಾನೆ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News