ಕೊಲ್ಲಂ(ಕೇರಳ) : ಮಲೆಯಾಳಂ ಸಾಹಿತಿ ಕೆ. ಶ್ರೀಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆರು ಮಂದಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕಳೆದ ರಾತ್ರಿ ಕೇರಳ ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದುತ್ವದ ವಿರುದ್ಧ ಭಾಷಣ ಮಾಡಿ, ಕುರಿತು ಭಾಷಣ ನೀಡಿ ಕಾರಿನಲ್ಲಿ ವಾಪಾಸಾಗಲು ಹೊರಡುತ್ತಿದ್ದ ಸಮಯದಲ್ಲಿ ಸಾಹಿತಿ ಶ್ರೀಕುಮಾರ್ ಅವರ ಕಾರಿನ ಬಳಿ ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಕಾರ್ಯಕರ್ತರು ಅವರಿಗೆ ಬೆದರಿಕೆ ಒಡ್ಡಿ ಹಲ್ಲೆ ಮಾಡಿದ್ದರು.


ಕೇರಳದ ಮುಖ್ಯಮಂತ್ರಿ ಪಿಣರೈ ವಿಜಯನ್ ಈ ದಾಳಿಯನ್ನು ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.