ನವದೆಹಲಿ: ವರ್ಷದ ಎರಡನೇ ಸೂರ್ಯಗ್ರಹಣ ಮತ್ತು ಮೊದಲ ಪೂರ್ಣ ಸೂರ್ಯಗ್ರಹಣ ಜುಲೈ 2 ರಂದು ರಾತ್ರಿ 10.25ಕ್ಕೆ ಆರಂಭವಾಗಲಿದೆ. ಭಾರತದಲ್ಲಿ ರಾತ್ರಿ ಸಂಭವಿಸುವುದರಿಂದ ಇದನ್ನು ವೀಕ್ಷಿಸಲು ಸಾಧ್ಯವಿಲ್ಲ. ನ್ಯೂಜಿಲೆಂಡ್ ಕರಾವಳಿಯಲ್ಲಿ ಆರಂಭವಾಗಲಿರುವ ಗ್ರಹಣ ಪೆಸಿಫಿಕ್‌ ಸಮುದ್ರ, ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಮಾತ್ರ ಗೋಚರಿಸಲಿದೆ.


COMMERCIAL BREAK
SCROLL TO CONTINUE READING

ಪೂರ್ಣ ಸೂರ್ಯಗ್ರಹಣವನ್ನು ಎಲ್ಲಿ ಕಾಣಬಹುದು?
ಈ ಗ್ರಹಣವು ಪೆಸಿಫಿಕ್ ಮಹಾಸಾಗರ, ಚಿಲಿ ಮತ್ತು ಅರ್ಜೆಂಟೀನಾದ್ಯಂತ ವೀಕ್ಷಕರಿಗೆ ನೇರವಾಗಿ ಗೋಚರಿಸುತ್ತದೆ ಮತ್ತು ಒಟ್ಟು 4 ನಿಮಿಷ 3 ಸೆಕೆಂಡುಗಳ ಕಾಲ ಇರುತ್ತದೆ. ದಕ್ಷಿಣ ಪೆಸಿಫಿಕ್, ಚಿಲಿ ಮತ್ತು ಅರ್ಜೆಂಟೀನಾ ಪ್ರದೇಶಗಳಲ್ಲಿ ಹಗಲು ರಾತ್ರಿಯಾಗಲಿದ್ದು, ಅಪರೂಪದ "ಪೂರ್ಣ ಸೂರ್ಯಗ್ರಹಣ" ಭೂದೃಶ್ಯವನ್ನು ಕತ್ತಲೆಯಲ್ಲಿ ಮುಳುಗಿಸುತ್ತದೆ. 


ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯನ ಗೋಚರ ಬಿಂಬ ಚಂದ್ರನಿಂದ ಆವರಿಸ್ಪಟ್ಟು ಸೂರ್ಯಗ್ರಹಣ ಸಂಭವಿಸುತ್ತದೆ. ಪೆಸಿಫಿಕ್‌ ಸಮುದ್ರ, ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಗ್ರಹಣ ಗೋಚರಿಸಲಿದೆ. 


ಮುಂದಿನ ಸೂರ್ಯಗ್ರಹಣ ಯಾವಾಗ?
ಈ ಸಂಪೂರ್ಣ ಸೂರ್ಯಗ್ರಹಣದ ನಂತರ, ಮುಂದಿನ ಸೂರ್ಯಗ್ರಹಣವು ಡಿಸೆಂಬರ್ 14, 2020 ರಂದು ಸಂಭವಿಸಲಿದೆ.