ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿದ್ವಾಂಸ ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ನಂಟು ಇದೆ ಎಂದು ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಕಲಬುರ್ಗಿ ಹತ್ಯೆ ವಿಚಾರವಾಗಿ ಮೂರು ತಿಂಗಳಲ್ಲಿ ಆರೋಪ ಪಟ್ಟಿಯನ್ನು  ಸಲ್ಲಿಸಲಾಗುವುದು ಎಂದು ರಾಜ್ಯ ಪೊಲೀಸರು ಸುಪ್ರಿಂಕೋರ್ಟ್ ಗೆ ತಿಳಿಸಿದ್ದಾರೆ.


2015 ರಲ್ಲಿ ಧಾರವಾಡದಲ್ಲಿ ಹತ್ಯೆಯಾಗಿದ್ದ ಕಲಬುರ್ಗಿ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.


ನವೆಂಬರ್ 26 ರಂದು ಸುಪ್ರಿಂಕೋರ್ಟ್ ತನಿಖೆಯಲ್ಲಿ ಕರ್ನಾಟಕ ಸರ್ಕಾರ ಏನನ್ನೂ ಮಾಡುತ್ತಿಲ್ಲ,ಕೇವಲ ಮೂರ್ಖನನ್ನಾಗಿ ಮಾಡುತ್ತಿದೆ ಎಂದು ತರಾಟೆಗೆ ತಗೆದುಕೊಂಡಿದೆ.ಇನ್ನು ಮುಂದುವರೆದು ಅಗತ್ಯ ಬಿದ್ದಲ್ಲಿ ಪ್ರಕರಣವನ್ನು ಬಾಂಬೆ ಹೈಕೋರ್ಟ್ಗೆ ವರ್ಗಾಯಿಸಬಹುದು ಎಂದು ಹೇಳಿದೆ.