ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ನಡೆದ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೇಳಿಕೆ ನೀಡಿದ್ದು, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಧಾರ್ಮಿಕ ಶಕ್ತಿಗಳ ತಪ್ಪು ವಿನ್ಯಾಸಗಳನ್ನು ತಡೆಯಬೇಕು ಎಂದು ಅವರು ದೆಹಲಿ ಜನರಿಗೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೆಡ್ ಕಾನ್‌ಸ್ಟೆಬಲ್ ರತನ್ ಲಾಲ್ ಅವರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸೋನಿಯಾ ಗಾಂಧಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.


ಯಾವುದೇ ರೀತಿಯ ಹಿಂಸಾಚಾರಕ್ಕೆ ಮಹಾತ್ಮ ಗಾಂಧಿಯವರ ಭಾರತದಲ್ಲಿ ಸ್ಥಾನವಿಲ್ಲ ಎಂದು ಅವರು ದೇಶವಾಸಿಗಳಿಗೆ ಕರೆ ನೀಡಿದರು. ತಮ್ಮ ಕೋಮು ಮತ್ತು ವಿಭಜಕ ಸಿದ್ಧಾಂತವನ್ನು ಭಾರತದ ಮೇಲೆ ಹೇರಲು ಬಯಸುವ ಆ ಶಕ್ತಿಗಳಿಗೆ ದೇಶದಲ್ಲಿ ಸ್ಥಾನವಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದರು.


ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act)ಗೆ ಸಂಬಂಧಿಸಿದಂತೆ ಈಶಾನ್ಯ ದೆಹಲಿಯಲ್ಲಿ ಸೋಮವಾರ ತೀವ್ರ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರದಲ್ಲಿ ಈವರೆಗೆ ಪೊಲೀಸ್ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಐಪಿಎಸ್ ಅಧಿಕಾರಿ ಎಸಿಪಿ ಗೋಕುಲ್ಪುರಿ ಅನುಜ್ ಕುಮಾರ್ ಕೂಡ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಮ್ಯಾಕ್ಸ್ ಪಟ್ಪರ್ಗಂಜ್ಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಡಿಸಿಪಿ ಶಹದಾರಾ ಅಮಿತ್ ಶರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.


ದೆಹಲಿ ಪೊಲೀಸ್ ಆಯುಕ್ತರು ದೆಹಲಿಯ ಎಲ್ಲಾ ಜಿಲ್ಲೆಗಳ ಡಿಸಿಪಿಗಳಿಗೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದಲ್ಲದೆ ದೆಹಲಿಯ ಎಲ್ಲಾ ಪಡೆಗಳನ್ನು ಜಾಗರೂಕತೆಯಿಂದ ಇರಿಸಲಾಗಿದೆ. ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲು ಆದೇಶ ನೀಡಲಾಗಿದೆ. ದುಷ್ಕರ್ಮಿಗಳೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸಲು ದೆಹಲಿ ಪೊಲೀಸರು ತನ್ನ ಪಡೆಗೆ ಆದೇಶ ಹೊರಡಿಸಿದ್ದಾರೆ.


ಹಿಂಸಾಚಾರದಲ್ಲಿ ಈವರೆಗೆ ಓರ್ವ ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು ಡಿಸಿಪಿ-ಎಸಿಪಿ ಸೇರಿದಂತೆ 10 ಪೊಲೀಸರನ್ನು ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈಶಾನ್ಯ ಜಿಲ್ಲೆಯಲ್ಲಿ ಹಿಂಸಾಚಾರದ ನಂತರ ಜಫರಾಬಾದ್, ಮೌಜ್ಪುರ್-ಬಾಬರ್ಪುರ್, ಗೋಕುಲ್ಪುರಿ, ಜೋಹಾರಿ ಎನ್ಕ್ಲೇವ್ ಮತ್ತು ಶಿವ ವಿಹಾರ್ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಈಶಾನ್ಯ ಜಿಲ್ಲೆಯ ಪೀಡಿತ ಪ್ರದೇಶಗಳಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ.