ಮೊರಾದಾಬಾದ್: ಮೊರಾದಾಬಾದ್‌ನ ಬಿಲಾರಿ ತಹಸಿಲ್ ಪ್ರದೇಶದ ಅಮರಪುರ ಕಾಶಿ ಮಾರ್ಗ ಗ್ರಾಮದ ಖತಾ ಗ್ರಾಮದಲ್ಲಿ 84 ವರ್ಷದ ಮೃತ ತಾಯಿಗೆ ಅಗ್ನಿ ಸ್ಪರ್ಶ ಮಾಡಿದ ಬಳಿಕ ಆಕೆಯ ಏಕೈಕ ಪುತ್ರ ವಿಜೇಂದ್ರ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ನಿಧನರಾದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ತಾಯಿಯ ಸಾವಿನ ಆಘಾತವನ್ನು ತಡೆಯಲಾಗದ ಮಗ ಕೂಡ ಕೊನೆಯುಸಿರೆಳೆದಿದ್ದಾನೆ. 


COMMERCIAL BREAK
SCROLL TO CONTINUE READING

ಮಾಹಿತಿಯ ಪ್ರಕಾರ, ಮೃತ ತಾಯಿಯ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ನೆರವೇರಿಸುತ್ತಿದ್ದಂತೆ ಮಗ ಇದ್ದಕ್ಕಿದ್ದಂತೆ ಚಿತೆಯ ಬಳಿ ಬಿದ್ದರು. ಬೀಳುವ ವೇಳೆ ಆತ ರಕ್ತ ವಾಂತಿ ಮಾಡಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದಾರಿ ಮಧ್ಯೆ ಆತ ಸಾವನ್ನಪ್ಪಿದ್ದಾರೆ.


ಬಳಿಕ ತಾಯಿಯ ಶವ ಸಂಸ್ಕಾರ ಮಾಡಲಾಗಿದ್ದ ಜಾಗದ ಪಕ್ಕದಲ್ಲಿಯೇ ಮಗನ ಅಂತ್ಯಕ್ರಿಯೆ ನೆರವೇರಿಸಲಾಗಿದೆ.


ಮಾಹಿತಿಯ ಪ್ರಕಾರ, ಸುಮಾರು 84 ವರ್ಷದ ತಾಯಿ (ರಾಮ್‌ಕಲಿಯ) ಪತಿ ರತನ್ ಲಾಲ್ ಸುಮಾರು 48 ವರ್ಷಗಳ ಹಿಂದೆ ನಿಧನರಾದರು. ಅವರ ಏಕೈಕ ಪುತ್ರ ವಿಜೇಂದರ್. ಆ ಸಮಯದಲ್ಲಿ ಅವರು ಸುಮಾರು 7 ವರ್ಷ ವಯಸ್ಸಿನವರಾಗಿದ್ದರು. ರಾಮಕಲಿ ಅವರನ್ನು ಬಹಳ ಕಷ್ಟಪಟ್ಟು ಬೆಳೆಸಿದ್ದರು. ತಾಯಿ ಮತ್ತು ಮಗನ ನಡುವೆ ಸಾಕಷ್ಟು ಪ್ರೀತಿ ಇತ್ತು. ಮಗ ತನ್ನ ತಾಯಿಯ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದರು. ತಾಯಿ-ಮಗ ಇಬ್ಬರೂ ಇಡೀ ಗ್ರಾಮಕ್ಕೆ ಮಾದರಿಯಾಗಿದ್ದರು ಎನ್ನಲಾಗಿದೆ.