ಪ್ರಧಾನಿ ಮೋದಿಯವರಿಂದ ಸಾರ್ವಜನಿಕರಲ್ಲಿ `ವಿಶೇಷ ಮನವಿ` : ಅದೇನು ಗೊತ್ತಾ?
ಸಾರ್ವಜನಿಕರಲ್ಲಿ ಮತ್ತೊಂದು ವಿಶೇಷ ಮನವಿ ಇಟ್ಟ ಪ್ರಧಾನಿ ಮೋದಿ
ನವದೆಹಲಿ: ಕೊರೊನಾ(corona) ಆತಂಕ ಶುರುವಾದ ಮೇಲೆ ಪ್ರಧಾನಿ ಮೋದಿ(PM Modi)ಯವರು ಸಾರ್ವಜನಿಕರಿಗೆ ಸುಖಾಸುಮ್ಮನೆ ಮನೆಯಿಂದ ಹೊರ ಬರಬೇಡಿ, ಸಾಮಾಜೀಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಅಂತೆಲ್ಲಾ ಅನೇಕ ಬಾರಿ ಮನವಿ ಮಾಡಿದ್ದಾರೆ. ಸಧ್ಯ ಸಾರ್ವಜನಿಕರಲ್ಲಿ ಮತ್ತೊಂದು ವಿಶೇಷ ಮನವಿ ಇಟ್ಟಿರುವ ಪ್ರಧಾನಿ ಮೋದಿ ಈ ಬಾರಿಯ ದೀಪಾವಳಿಯನ್ನ ಸ್ಥಳೀಯ ವಸ್ತುಗಳೊಂದಿಗೇ ಆಚರಿಸಿ ಎಂದಿದ್ದಾರೆ.
US Election Result 2020: ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಗೆ ಅಭಿನಂದನೆ ಸಲ್ಲಿಸಿದ PM Modi ಹೇಳಿದ್ದೇನು?
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಾರಾಣಸಿಯ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಮೋದಿಯವರು, ದೇಶದ ಜನರಿಗೆ ದೀಪಾವಳಿ ಶುಭಾಶಯ ಹೇಳಿ. ನಂತರ 'ಪ್ರತಿಯೊಬ್ಬರೂ ಹೆಮ್ಮೆಯಿಂದ ಸ್ಥಳೀಯ ಉತ್ಪನ್ನಗಳನ್ನ ಖರೀದಿಸಬೇಕು. ಅದರ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಬೇಕು. ಉಳಿದವರೂ ಸ್ಥಳೀಯ ವಸ್ತುಗಳನ್ನು ಖರೀದಿಸುವಂತೆ ಪ್ರೇರೇಪಿಸಬೇಕು. ಆಗ ಈ ವಸ್ತುಗಳೂ ಬಹುಬೇಗನೇ ಪ್ರಸಿದ್ಧಿ ಪಡೆಯುತ್ತವೆ' ಎಂದರು.
ಮೋದಿ ಸರ್ಕಾರದ ಭರ್ಜರಿ ತಯಾರಿ: ನಿಮ್ಮೂರ ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಸಿಗಲಿದೆ ಕರೋನಾ ಲಸಿಕೆ
ಸಧ್ಯ ಭಾರತ ಆತ್ಮನಿರ್ಭರತೆಯೆಡೆಗೆ ಸಾಗುತ್ತಿದ್ದು, ಸ್ಥಳೀಯ ಉತ್ಪನ್ನಗಳಿಗೆ ಖರೀದಿ, ಬಳಕೆಗೆ ಆದ್ಯತೆ ನೀಡಲು ಪ್ರಧಾನಿ ಮೋದಿ ಪದೇಪದೆ ಕರೆ ನೀಡುತ್ತಿದ್ದಾರೆ. ಇದೀಗ ಈ ದೀಪಾವಳಿಯ ಸಮಯಲ್ಲಿ ನಮ್ಮ 'ವೋಕಲ್ ಫಾರ್ ಲೋಕಲ್' ಅಭಿಯಾನವನ್ನ ಉತ್ತೇಜಿಸಿ. ಸ್ಥಳೀಯವಾಗಿ ಸಿಗುವ ಉತ್ಪನ್ನಗಳನ್ನೇ ಖರೀದಿಸಿ ಎಂದು ಹೇಳಿದರು.