ಮೋದಿ ಸರ್ಕಾರದ ಭರ್ಜರಿ ತಯಾರಿ: ನಿಮ್ಮೂರ ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಸಿಗಲಿದೆ ಕರೋನಾ ಲಸಿಕೆ

ಕರೋನಾ ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಅಂಗನವಾಡಿ ಕೇಂದ್ರ, ಶಾಲೆ, ಪಂಚಾಯಿತಿ ಕಟ್ಟಡಗಳನ್ನು ಕೂಡ ಕೋವಿಡ್-19 ಲಸಿಕಾ ತಾಣಗಳಾಗಿ ಬಳಕೆ ಮಾಡಲಾಗುತ್ತದೆ.

Last Updated : Nov 7, 2020, 02:00 PM IST
  • ಆಧಾರ್ ಕಾರ್ಡ್ ಮೂಲಕ ಫಲಾನುಭವಿಗಳ ಗುರುತು ಪತ್ತೆ
  • ಒಂದು ಕೋಟಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ
  • ಕೇಂದ್ರ ಆರೋಗ್ಯ ಸಚಿವಾಲಯ ಡಿಜಿಟಲ್ ಪ್ಲಾಟ್ ಫಾರಂ ಮೂಲಕ ಮೇಲ್ವಿಚಾರಣೆ
ಮೋದಿ ಸರ್ಕಾರದ ಭರ್ಜರಿ ತಯಾರಿ: ನಿಮ್ಮೂರ ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಸಿಗಲಿದೆ ಕರೋನಾ ಲಸಿಕೆ  title=
File Image

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಎಲ್ಲ ಜನರಿಗೂ ಅದನ್ನು ಲಭ್ಯವಾಗುವಂತೆ ಮಾಡಲು ಮೋದಿ ಸರ್ಕಾರ ಭರ್ಜರಿ ಯೋಜನೆ ರೂಪಿಸುತ್ತಿದೆ.  ಕರೋನಾ ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಅಂಗನವಾಡಿ ಕೇಂದ್ರ, ಶಾಲೆ, ಪಂಚಾಯಿತಿ ಕಟ್ಟಡಗಳನ್ನು ಕೂಡ ಕೋವಿಡ್-19 ಲಸಿಕಾ (Covid 19 Vaccine) ತಾಣಗಳಾಗಿ ಬಳಕೆ ಮಾಡಲಾಗುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯ ಡಿಜಿಟಲ್ ಪ್ಲಾಟ್ ಫಾರಂ ಮೂಲಕ ಮೇಲ್ವಿಚಾರಣೆ ಮಾಡಲಿದ್ದು, ಆರಂಭಿಕ ಹಂತದಲ್ಲಿ ಅಗತ್ಯವಿರುವವರಿಗೆ ಲಸಿಕೆ ನೀಡಲಾಗುತ್ತದೆ. ಎಲ್ಲರಿಗೂ ಲಸಿಕೆ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ತಜ್ಞರ ಗುಂಪಿನೊಂದಿಗೆ ಚರ್ಚಿಸಿ ತಯಾರಿಸಲಾಗುತ್ತಿರುವ ನೀಲನಕ್ಷೆಯ ಪ್ರಕಾರ, ರಾಜ್ಯ ಸರ್ಕಾರಗಳು ರೋಗನಿರೋಧಕ ಲಸಿಕೆ ನೀಡುವ ಕಾರ್ಯಕ್ರಮದ ಅಡಿಯಲ್ಲಿ ವ್ಯಾಕ್ಸಿನೇಷನ್ ತಾಣಗಳಾಗಿ ಬಳಸಬಹುದಾದ ಕಟ್ಟಡಗಳನ್ನು ಗುರುತಿಸಲಿವೆ.

ಭಾರತದಲ್ಲಿ ತಯಾರಾಯಿತು covid-19 ಲಸಿಕೆ: ಫೆಬ್ರವರಿಯಲ್ಲಿ ಲಭ್ಯ!

ವ್ಯಾಕ್ಸಿನೇಷನ್ ತಾಣ (covid-19 vaccine sites)ಗಳಾಗಿ ಕೇವಲ ಆರೋಗ್ಯ ಸೌಲಭ್ಯಗಳಿರುವ ಕಟ್ಟಡಗಳನ್ನು ಬಳಸಿಕೊಳ್ಳುವುದಿಲ್ಲ. ಇವುಗಳೊಂದಿಗೆ ಅಂಗನವಾಡಿ ಕೇಂದ್ರ, ಶಾಲೆ (Schools), ಪಂಚಾಯಿತಿ ಕಟ್ಟಡ ಮತ್ತು ರಾಜ್ಯ ಸರ್ಕಾರಗಳು ಗುರುತಿಸುವಂತಹ ಇತರ ಕಟ್ಟಡಗಳಲ್ಲಿಯೂ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ.

ದಿನಾಂಕ ಮತ್ತು ಸ್ಥಳವನ್ನು ಲಸಿಕೆ ಪಡೆಯುವವರಿಗೆ SMS ಮೂಲಕ ನೀಡಲಾಗುವುದು. ಆಧಾರ್ ಕಾರ್ಡ್ (Aadhaar Card) ಗಳೊಂದಿಗೆ ಫಲಾನುಭವಿಗಳನ್ನು ಗುರುತಿಸಲಾಗುವುದು. ಆಧಾರ್ ಇಲ್ಲದವರು ಸರ್ಕಾರದ ಯಾವುದೇ ಗುರುತಿನ ಚೀಟಿಯನ್ನು ಬಳಕೆ ಮಾಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಮಹಾಮಾರಿ ಕರೋನಾಗೆ ಆಯುರ್ವೇದ ಮದ್ದು

ರೋಗ ನಿರೋಧಕ ಪಟ್ಟಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ನಕಲು ಮಾಡುವುದನ್ನು ತಪ್ಪಿಸಲು ಮತ್ತು ಫಲಾನುಭವಿಗಳನ್ನು ಪತ್ತೆ ಹಚ್ಚಲು ಅವರ ಆಧಾರ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡಲಾಗುವುದು. ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಸರ್ಕಾರದ ಫೋಟೋ ಗುರುತಿನ ಚೀಟಿ ಬಳಸಬಹುದು ಎಂದು ಮೂಲಗಳು ತಿಳಿಸಿವೆ.

ಎಲೆಕ್ಟ್ರಾನಿಕ್ ಲಸಿಕೆಯ ಗುಪ್ತಚರ ಜಾಲ (eVIN - The Electronic Vaccine Intelligence Network) ವ್ಯವಸ್ಥೆಯು ಯುಐಪಿ ಅಡಿಯಲ್ಲಿ ದೇಶದ ಎಲ್ಲಾ ಕೋಲ್ಡ್ ಚೈನ್ ಪಾಯಿಂಟ್ ಗಳಲ್ಲಿ ಲಸಿಕೆ ದಾಸ್ತಾನು ಮತ್ತು ಶೇಖರಣಾ ತಾಪಮಾನದ ಬಗ್ಗೆ ಮಾಹಿತಿ ಒದಗಿಸಲಿವೆ.

ಗುಡ್ ನ್ಯೂಸ್: ಕರೋನಾ ಲಸಿಕೆಯನ್ನು ಫ್ರೀ ಆಗಿ ನೀಡಲಿದೆಯೇ ಮೋದಿ ಸರ್ಕಾರ?

ಎಲ್ಲರಿಗೂ ಲಸಿಕೆಯನ್ನು ನೀಡುವ ಉದ್ದೇಶದೊಂದಿಗೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಸ್ವಯಂಸೇವಕರು, ನಾಗರಿಕರು, ಸಾಮಾಜಿಕ ಸಂಸ್ಥೆಗಳು ಸೇರಿದಂತೆ ಎಲ್ಲರನ್ನೂ ಒಳಗೊಂಡ ಲಸಿಕೆ ವಿತರಣಾ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ದಾದಿಯರು, ಆಶಾ ಕಾರ್ಯಕರ್ತೆಯರು ಸೇರಿ ಸುಮಾರು ಒಂದು ಕೋಟಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಇವರೊಂದಿಗೆ ಪುರಸಭೆ ಕಾರ್ಮಿಕರು, ಪೊಲೀಸರು, ಸಶಸ್ತ್ರ ಪಡೆ ಸಿಬ್ಬಂದಿ ಸೇರಿದಂತೆ 2 ಕೋಟಿ ಮುಂಚೂಣಿ ಕಾರ್ಮಿಕರು ಅಲ್ಲದೇ, ಅಗತ್ಯವಿರುವ ಸುಮಾರು 25 ಕೋಟಿ ಜನರಿಗೆ ಲಸಿಕೆ ನೀಡಲಿದ್ದು, ನಂತರದ ಹಂತದಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುವುದು ಎನ್ನಲಾಗಿದೆ.
 

Trending News