ಶ್ರೀ ಗಣೇಶನನ್ನು ಚಳಿಯಿಂದ ಕಾಪಾಡಲು ಅರ್ಚಕರು ಮಾಡುತ್ತಿದ್ದಾರೆ ಈ ಕೆಲಸ
ಶ್ರೀಗಣೇಶನಿಗೆ ಚಳಿಯಿಂದ ಕಾಪಾಡುವ ಉದ್ದೇಶದಿಂದ ವಿಶೇಷ ಎಚ್ಚರಿಕೆ ವಹಿಸಲಾಗುತ್ತಿದೆ. ಭಕ್ತಾದಿಗಳೂ ಕೂಡ ಶ್ರದ್ಧೆಯಿಂದ ಗಣಪತಿ ಬಪ್ಪಾಗೆ ಸ್ವೆಟರ್ ಮತ್ತು ಶಾಲ್ ಗಳನ್ನು ನೀಡುತ್ತಿದ್ದಾರೆ.
ನಾಸಿಕ್(ಮಹಾರಾಷ್ಟ್ರ): ಕಳೆದ ಕೆಲ ದಿನಗಳಿಂದ ಮಾಹಾರಾಷ್ಟ್ರದ ನಾಸಿಕ್ ನಲ್ಲಿ ವ್ಯಾಪಕವಾಗಿ ಚಳಿ ಹರಡುತ್ತಿದೆ. ಈ ಮಧ್ಯೆ ಚಳಿಯಿಂದ ಶ್ರೀಗಣೇಶನನ್ನು ಕಾಪಾಡಲು ಗಣಪತಿ ಬಪ್ಪಾಗೆ ಬೆಚ್ಚಗಿನ ವಸ್ತ್ರಗಳನ್ನು ಧರಿಸಲಾಗುತ್ತಿದೆ. ಹೌದು, ನಾಸಿಕ್ ನ ಬೆಳ್ಳಿಯ ಗಣಪತಿ ದೇವಸ್ಥಾನದಲ್ಲಿ ಅರ್ಚಕರು ಗಣಪತಿಯನ್ನು ಚಳಿಯಿಂದ ರಕ್ಷಿಸುವ ಉದ್ದೇಶದಿಂದ ಈ ವಿಶೇಷ ಎಚ್ಚರಿಕೆ ವಹಿಸುವುದರಲ್ಲಿ ತೊಡಗಿದ್ದಾರೆ. ಈ ದೇವಸ್ಥಾನದಲ್ಲಿ ಅರ್ಚಕರು ಬೆಳ್ಳಿಯ ಗಣೇಶನ ವಿಗ್ರಹಕ್ಕೆ ಸ್ವೆಟರ್ ತೊಡಿಸಿ, ಶಾಲ್ ಹೊದಿಸುತ್ತಿದ್ದಾರೆ. ಗಣಪತಿಯನ್ನು ಚಳಿಯಿಂದ ಕಾಪಾಡಲು ಈ ವಿಶೇಷ ಎಚ್ಚರಿಕೆ ವಹಿಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಮುಖ್ಯ ಅರ್ಚಕರಾಗಿರುವ ನರೇಂದ್ರ ಸೋನಾವಣೆ, ಇತ್ತೀಚಿನ ದಿನಗಳಲ್ಲಿ ನಾಸಿಕ್ ನಲ್ಲಿ ಚಳಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರು ಚಳಿಗೆ ಪರದಾಡುವಂತಾಗಿದೆ. ಹಾಗೂ ಮನುಷ್ಯರ ಹಾಗೆ ಗಣಪತಿ ದೇವರಿಗೂ ಕೂಡ ಚಳಿ ತಗಲುತ್ತದೆ ಎಂಬುದು ಇಲ್ಲಿನ ಭಕ್ತಾದಿಗಳ ಭಾವನೆ ಎನ್ನುತ್ತಾರೆ. ಅಷ್ಟೇ ಅಲ್ಲ ಭಕ್ತಾದಿಗಳೂ ಕೂಡ ಶೃದ್ಧೆಯಿಂದ ಶ್ರೀಗಜಾನನಿಗೆ ಸ್ವೆಟರ್ ಮತ್ತು ಶಾಲ್ ನೀಡುತ್ತಿದ್ದಾರೆ. ಅವರು ನೀಡುವ ಈ ಬೆಚ್ಚನೆಯ ಉಡುಪುಗಳನ್ನು ನಿತ್ಯ ಶ್ರೀಗಣೇಶನಿಗೆ ತೊಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.