ನಾಲ್ಕು ದಿವಸಗಳ ಮಾರಿಷಸ್ ಪ್ರವಾಸದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ
Sri Sri Ravi Shankar Guruji Mauritius Tour: ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ರವಿಶಂಕರ ಗುರೂಜಿ, ಮಾರಿಷಸ್ʼನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ʼನ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು.
ಬೆಂಗಳೂರು: ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕ ಗುರುದೇವ್ ಶ್ರೀ ಶ್ರೀ ರವಿಶಂಕರರು ಮಾರಿಷಸ್ʼಗೆ ನಾಲ್ಕು ದಿವಸಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಮಾರಿಷಸ್ ದೇಶದ ಅಧ್ಯಕ್ಷ ಪೃಥ್ವಿರಾಜ್ ಸಿಂಗ್ ರೂಪುನ್ ಮತ್ತು ಪ್ರಧಾನಮಂತ್ರಿ ಪ್ರವೀಣ್ ಕುಮಾರ್ ಜಗನ್ನಾಥ್ ಅವರು ರವಿಶಂಕರ ಗುರೂಜಿಯವರನ್ನು ಸ್ವಾಗತಿಸಿದ್ದಾರೆ.
ಈ ಬಳಿಕ ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ರವಿಶಂಕರ ಗುರೂಜಿ, ಮಾರಿಷಸ್ʼನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ʼನ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು.
ಇದನ್ನೂ ಓದಿ: ಬೇರಿನಿಂದಲೇ ಬಿಳಿಕೂದಲನ್ನು ಕಡುಕಪ್ಪಾಗಿಸಲು ಈ ಹಣ್ಣಿನ ಒಂದೇ ಒಂದು ಪೀಸ್ ತಿನ್ನಿ
ಅಧ್ಯಕ್ಷರನ್ನು ಭೇಟಿ ಮಾಡಿದ ರವಿಶಂಕರ ಗುರೂಜಿಯವರು, ಅವರೊಡನೆ ಯುವ ಸಬಲೀಕರಣದ ಮಹತ್ವದ ಬಗ್ಗೆ, ಒತ್ತಡ ನಿವಾರಣಾ ಕಾರ್ಯಕ್ರಮಗಳ ಮೂಲಕ ಸಾಮರಸ್ಯವನ್ನು ಉತ್ಥಾಪಿಸುವ ಕುರಿತು, ಮಾರಿಷಸ್ʼಗೆ ಆಯುರ್ವೇದದ ಪರಿಚಯ ಹಾಗೂ ವ್ಯಾಪಕ ರೀತಿಯಲ್ಲಿ ಪ್ರಭಾವವನ್ನು ಬೀರುವ ಕೈದಿಗಳ ಪುನಶ್ಚೇತನ ಕಾರ್ಯಕ್ರಮದ ಬಗ್ಗೆಯೂ ಚರ್ಚಿಸಿದರು.
ಕೈದಿಗಳ ಪುನಶ್ಚೇತನ ಕಾರ್ಯಕ್ರಮವು ಬಹಳ ಪರಿಣಾಮಕಾರಿಯಾಗಿರುವುದರಿಂದ ಆರ್ಟ್ ಆಫ್ ಲಿವಿಂಗ್ʼನ, ಕೈದಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಮುಂದುವರಿಸುವ ಸಲುವಾಗಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಈ ಪುನಶ್ಚೇತನ ಕಾರ್ಯಕ್ರಮಗಳು ಕೈದಿಗಳ ಭಾವನಾತ್ಮಕ ಒತ್ತಡವನ್ನು ನಿವಾರಿಸಿ, ಹಿಂಸಾಪ್ರವೃತ್ತಿಯಿಂದ ಹೊರಬಂದು ಕೈದಿಗಳು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡುತ್ತದೆ.
ಈ ಬಗ್ಗೆ ಮಾತನಾಡಿದ ರವಿಶಂಕರ ಗುರೂಜಿ, "ಅವರಲ್ಲಿರುವ ನಿಕೃಷ್ಟವಾದ ಗುಣಗಳಿಂದಾಗಿ ಅವರು ಕಾರಾಗೃಹಕ್ಕೆ ಬಂದರು. ಆದರೆ ಆಧ್ಯಾತ್ಮಿಕತೆಯು ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುತ್ತದೆ. ಅವರು ಒಳ್ಳೆಯ ನಾಗರಿಕರಾಗಿ, ಸಮಾಜಕ್ಕೆ ಸಕಾರಾತ್ಮಕವಾದ ರೀತಿಯಲ್ಲಿ ಕಾಣಿಕೆಯನ್ನು ನೀಡುತ್ತಾರೆ" ಎಂದು ಹೇಳಿದರು.
ರವಿಶಂಕರ ಗುರೂಜಿಯವರ ಪ್ರಥಮ ದಿನದ ಭೇಟಿಯಂದು ನಡೆದ ಸಾರ್ವಜನಿಕ ಸಂಜೆಯಲ್ಲಿ ಜ್ಞಾನ, ಸತ್ಸಂಗ ಹಾಗೂ ಧ್ಯಾನ ನಡೆಯಿತು. ಈ ಸಭೆಯಲ್ಲಿ ಮಾರಿಷಸ್ʼನ ಸಾವಿರಾರು ಜನರು ಭಾಗವಹಿಸಿದ್ದಲ್ಲದೆ, ಅಧ್ಯಕ್ಷರು, ವಿಪಕ್ಷ ನಾಯಕರು ಹಾಗೂ ಪ್ರಮುಖ ಸರ್ಕಾರಿ ಅಧಿಕಾರಿಗಳೂ ಭಾಗವಹಿಸಿದ್ದರು. ಸಭೆಗೆ ಆಗಮಿಸಿದ್ದ ಇತರ ಗಣ್ಯರೆಂದರೆ ಅಡ್ರೇನ್ ದುವಲ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್, ಭಾರತದ ದೂತಾವಾಸದ ಕಮಿಷನರ್ ನಂದಿನಿ ಸಿಂಗ್ಲಾ, ಮಾರಿಷಸ್ʼನ ಮಾಜಿ ಅಧ್ಯಕ್ಷರ ಪತ್ನಿ ಸರೋಜಿನಿ ಜಗನ್ನಾಥ್, ವಿಪಕ್ಷ ನಾಯಕ ಅರವಿಂದ್ ಬೂಲೆಲೀ, ಅಲನ್ ಗಣೂ, ವಿದೇಶಾಂಗ ಸಚಿವರು, ಸಾರ್ವಜನಿಕ ಸೌಲಭ್ಯಗಳ ಸಚಿವ ಬಾಬ್ಬಿ ಹುರೀರಾಮ್, ನಾಗರಿಕ ಸೇವಗಳ ಸಚಿವ ಅಂಜೀವ್ ರಾಮ್ಧಾನ್, ಸಹಕಾರ ಸಚಿವ ನವೀನ್ ರಾಮಯ್ಯೆಡ್ ಮತ್ತು ಆರೋಗ್ಯ ಹಾಗೂ ವೆಲ್ನೆಸ್ ನ ಸಚಿವ ಕೈಲಾಶ್ ಜಗತ್ಪಾಲ್ ಆಗಮಿಸಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ರಶ್ಮಿಕಾ ಮಂದಣ್ಣ ಬೆಸ್ಟ್ ಫ್ರೆಂಡ್ ಆಗಮನ: ಫಸ್ಟ್ ಟೈಂ ಅಲ್ಲ.... 2ನೇ ಸಲ
ತಮ್ಮ ನಾಲ್ಕು ದಿವಸಗಳ ಭೇಟಿಯಲ್ಲಿ ರವಿಶಂಕರ ಗುರೂಜಿಯವರು ಅನೇಕ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜ್ಞಾನ, ಸಂಗೀತ ಹಾಗೂ ಸತ್ಸಂಗದ ಕಾರ್ಯಕ್ರಮಗಳು ಪೈಲ್ಲಿಸ್, ಗೂಡ್ಲ್ಯಾಂಡ್ಸ್ ಮತ್ತು ವೂಟಾನ್ʼನಲ್ಲೂ ನಡೆಯಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.