ನವದೆಹಲಿ: ಶನಿವಾರದಂದು ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟ ಶ್ರೀದೇವಿ (54), ಭಾರತೀಯ ಸಿನಿಮಾ ರಂಗ ಕಂಡ ಅತ್ಯಂತ ವರ್ಣರಂಜಿತ ನಟಿ. 1963 ಆಗಸ್ಟ್ 13ರಂದು ತಮಿಳುನಾಡಿನ  ಶಿವಕಾಶಿಯಲ್ಲಿ ತಮಿಳು ಕುಟುಂಬದಲ್ಲಿ ಜನಿಸಿದ ಅವರು, ಕೇವಲ ನಾಲ್ಕನೇ ವಯಸ್ಸಿನಲ್ಲೇ ಬಾಲನಟಿಯಾಗಿ ಎಂ.ಎ.ತಿರುಮುಗಂ ರ ಭಕ್ತಿ ಪ್ರಧಾನ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು. ನಂತರ ಹಲವು ವರ್ಷಗಳ ಕಾಲ ತಮಿಳು, ತೆಲುಗು, ಮಲಯಾಳಂ,ಮತ್ತು ಕನ್ನಡ ಚಿತ್ರಗಳಲ್ಲಿ ಬಾಲನಟಿಯಾಗಿಯೇ ನಟಿಸಿದರು.


COMMERCIAL BREAK
SCROLL TO CONTINUE READING

ಶ್ರೀದೇವಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಟಿಯಾಗಿ ಬಿಂಬಿತವಾಗಿದ್ದು ತಮಿಳು ಮತ್ತು ತೆಲುಗು ಸಿನಿಮಾಗಳ ಮೂಲಕ, ಅದರಲ್ಲಿ ಪ್ರಮುಖವಾಗಿ 16 ವಯತಿನಿಲೇ(1977), ಸಿಗಪ್ಪು ರಾಜಕ್ಕಲ್(1978), ವರುಮಾಯಿನ್ ಸಿವಪ್ಪು(1980),ಜಗದೇಕ ವೀರುಡು ಅತಿಲೋಕ ಸುಂದರಿ(1990) ಯಂತಹ ಚಿತ್ರಗಳು ಅವರನ್ನು ಯಶಸ್ವಿ ನಟಿಯಾಗಿ ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವು.


ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ ಡಾ.ರಾಜಕುಮಾರ ಅಭಿನಯದ ಭಕ್ತ ಕುಂಬಾರ(1974), ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹೆಣ್ಣು ಸಂಸಾರದ ಕಣ್ಣು(1975) ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ರಜನೀಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’(1979) ಎಂಬ ಕನ್ನಡ ಚಿತ್ರದಲ್ಲಿ ಅವರು ನಾಯಕಿಯಾಗಿಯೂ ಅಭಿನಯಿಸಿದ್ದರು.