ಕಾಜಲ್‌ ಅಗರ್ವಾಲ್‌ ಸೆಕೆಂಡ್‌ ಇನ್ನಿಂಗ್ಸ್‌, ತೆರೆಗೆ ಬರಲು ಸಜ್ಜಾಯ್ತು 'ಸತ್ಯಭಾಮ'

Kajal Aggarwal Satyabham Movie: ಸತ್ಯಭಾಮ ಸಿನಿಮಾದ ಮೂಲಕ ಸಿನಿಮಾಗೆ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಕಾಜಲ್‌ ಅಗರ್‌ವಾಲ್‌ ಅಭಿನಯದ ಸಿನಿಮಾ ರಿಲೀಸ್‌ಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

Written by - Chetana Devarmani | Last Updated : Jun 5, 2024, 11:12 PM IST
  • ಕಾಜಲ್‌ ಅಗರ್ವಾಲ್‌ ಸೆಕೆಂಡ್‌ ಇನ್ನಿಂಗ್ಸ್‌
  • ಸತ್ಯಭಾಮ ಸಿನಿಮಾದ ಮೂಲಕ ರೀ ಎಂಟ್ರಿ
  • ಕಾಜಲ್‌ ಅಗರ್‌ವಾಲ್‌ ಅಭಿನಯದ ಸಿನಿಮಾ
ಕಾಜಲ್‌ ಅಗರ್ವಾಲ್‌ ಸೆಕೆಂಡ್‌ ಇನ್ನಿಂಗ್ಸ್‌, ತೆರೆಗೆ ಬರಲು ಸಜ್ಜಾಯ್ತು 'ಸತ್ಯಭಾಮ'  title=

Kajal Aggarwal Movie: ಮದುವೆ, ಮಗು ಅಂತ ಸಿನಿಮಾದಿಂದ ದೂರ ಉಳಿದಿದ್ದ ಕಾಜಲ್‌ ಅಗರ್‌ವಾಲ್‌ ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಸತ್ಯಭಾಮ ಸಿನಿಮಾದ ಮೂಲಕ ಸಿನಿಮಾಗೆ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಕಾಜಲ್‌ ಅಗರ್‌ವಾಲ್‌ ಅಭಿನಯದ ಸಿನಿಮಾ ರಿಲೀಸ್‌ಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಕಾಜಲ್‌ ಅಗರ್‌ವಾಲ್‌ ಅಭಿನಯದ 'ಸತ್ಯಭಾಮ' ಚಿತ್ರವನ್ನು ಶಶಿ ಕಿರಣ್ ತಿಕ್ಕ ನಿರ್ಮಿಸಿದ್ದಾರೆ. ಈ ಚಿತ್ರ ಜೂನ್ 7 ರಂದು ರಿಲೀಸ್‌ ಆಗಲಿದೆ. ಸತ್ಯಭಾಮ ಸಿನಿಮಾದಲ್ಲಿ ಕಾಜಲ್‌ ಅಗರ್‌ವಾಲ್‌ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ.

ಇದನ್ನೂ ಓದಿ: ಈ ಖ್ಯಾತ ನಟಿಯ ಮೇಲೆ ಸಮಂತಾ ಫ್ಯಾನ್ಸ್‌ ಗರಂ.. ನಾಗ ಚೈತನ್ಯ ವಿಚ್ಛೇದನ ಪಡೆಯಲು ಕಾರಣ ಇವರೇನಾ?

ಕಾಜಲ್‌ ಅಗರ್‌ವಾಲ್‌ ಫ್ಯಾನ್ಸ್‌ಗೆ ಒಂದು ಬಂಪರ್‌ ಅವಕಾಶವಿದೆ. ಈ ಸಿನಿಮಾವನ್ನು ನೀವು ಕಾಜಲ್‌ ಅಗರ್‌ವಾಲ್‌ ಜೊತೆಗೆ ಕುಳಿತು ವೀಕ್ಷಿಸಬಹದು. ಈ ವಿಶೇಷ ಪ್ರೀಮಿಯರ್ ಟಿಕೆಟ್‌ಗಳನ್ನು ಪಡೆಯಲು ಪ್ಲೇ ಸ್ಟೋರ್‌ನಿಂದ 'ಶೀ ಸೇಫ್' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಇದನ್ನು ಟಿಕೆಟ್ ಕೌಂಟರ್‌ನಲ್ಲಿ ತೋರಿಸಿ ಟಿಕೆಟ್ ಪಡೆದುಕೊಳ್ಳಬಹುದು. 

ನವೀನ್ ಚಂದ್ರ, ಪ್ರಕಾಶ್ ರಾಜ್, ನಾಗಿನೀಡು, ಹರ್ಷವರ್ಧನ್, ರವಿವರ್ಮ, ಅಂಕಿತ್ ಕೋಯಾ, ಸಂಪದ ಎನ್, ಪ್ರಜ್ವಲ್ ಯದ್ಮಾ ಸೇರಿದಂತೆ ಹಲವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಔರಾಮ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಾಬಿ ತಿಕ್ಕ ಮತ್ತು ಶ್ರೀನಿವಾಸ ರಾವ್ ಟಕ್ಕಲಪೆಲ್ಲಿ ನಿರ್ಮಿಸಿದ್ದಾರೆ. ‘ಸತ್ಯಭಾಮಾ’ ಜೊತೆಗೆ ಕಾಜಲ್ ಅಭಿನಯದ ‘ಇಂಡಿಯನ್ 2’ ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ.  

ಇದನ್ನೂ ಓದಿ: ರಜನಿಕಾಂತ್‌ ಆ ಒಂದು ಮಾತು ಆಂಧ್ರ ಆಡಳಿತ ಸರ್ಕಾರದ ಪತನಕ್ಕೆ ಕಾರಣ..! ಹೇಗೆ ಗೊತ್ತಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News