ನವದೆಹಲಿ: ತಮಿಳುನಾಡಿನ ಈರೋಡ್ ನ ಪತ್ರಿಕಾಗೋಷ್ಠಿಯಲ್ಲಿ ಡಿಎಂಕೆ ನಾಯಕ ಸ್ಟಾಲಿನ್  ಮಾತನಾಡುತ್ತಾ ದಕ್ಷಿಣ ರಾಜ್ಯಗಳ ಒಕ್ಕೂಟದ ಬಗ್ಗೆ ಪ್ರಸ್ತಾಪಿಸಿದರು. 


COMMERCIAL BREAK
SCROLL TO CONTINUE READING

ದಕ್ಷಿಣದ ಕರ್ನಾಟಕ, ತಮಿಳುನಾಡು, ಕೇರಳಾ, ಆಂದ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿ ರಾಜ್ಯಗಳು ಮುಂದೆ ಬಂದು  ದ್ರಾವಿಡ ನಾಡು' ನ್ನು ಪ್ರಸ್ತಾಪಿಸಿದರೆ ಅದಕ್ಕೆ ನಮ್ಮ ಬೆಂಬಲವಿದೆ, ಮುಂದೆ ಆ ಪರಿಸ್ಥಿತಿ ಬರುತ್ತದೆ ಎನ್ನುವ ವಿಶ್ವಾಸವಿದೆ ಎಂದರು.


ಇತ್ತೀಚಿಗೆ ದಕ್ಷಿಣದ ರಾಜ್ಯಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಕಡೆಗಣಿಸುತ್ತಿರುವ ಹಿನ್ನಲೆಯಲ್ಲಿ ದಕ್ಷಿಣದ ಬಹುತೇಕ ರಾಜ್ಯಗಳು ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿವೆ.


ದ್ರಾವಿಡ್ ನಾಡು ಪರಿಕಲ್ಪನೆಯು ಮೊದಲ ಬಾರಿಗೆ ಪೆರಿಯಾರ್ ದ್ರಾವಿಡರ ಅಷ್ಮಿತೆಯ ಆಧಾರದ ಮೇಲೆ ಸ್ವತಂತ್ರವಾದ ದೇಶ ಬೇಕು ಎನ್ನುವ ಬೇಡಿಕೆಯನ್ನು  40 ರ ದಶಕದಲ್ಲಿ ಇಟ್ಟಿದ್ದರು.ಇದರ ಆಧಾರದ ಮೇಲೆ ಅವರು ದ್ರಾವಿಡಾರ್ ಕಜ್ಯಗಂ ಎನ್ನುವ ಪಕ್ಷವನ್ನು ಸಹಿತ ಸ್ಥಾಪಿಸಿದ್ದರು.