Statue Of Equality - ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೈದರಾಬಾದ್‌ನಲ್ಲಿ (Hyderabad) 'Statue Of Equality ' ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರ ಇಂದಿನ ಕಾರ್ಯಕ್ರಮದ ಪ್ರಕಾರ, ಸಂಜೆ 5 ಗಂಟೆಗೆ, ಅವರು ಹೈದರಾಬಾದ್‌ನ ಗಡಿ ಪ್ರದೇಶವಾದ ಮುಚ್ಚಿಂತಲ್‌ನಲ್ಲಿ 'ಸಮಾನತೆಯ ಪ್ರತಿಮೆ'ಯನ್ನು ಅನಾವರಣಗೊಳಿಸಲಿದ್ದಾರೆ. ಇದಕ್ಕೂ ಮುನ್ನ, 'ಸಮಾನತೆಯ ಪ್ರತಿಮೆ' ಎಂದರೇನು? ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ತಿಳಿದುಕೊಳ್ಳಿ-


COMMERCIAL BREAK
SCROLL TO CONTINUE READING

ಈ ಕಲ್ಪನೆಯು 2014 ರಲ್ಲಿ ಮುಂದೆ ಬಂದಿದೆ
11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ (Shri Ramanujacharya) ನೆನಪಿಗಾಗಿ 216 ಅಡಿ ಎತ್ತರದ 'ಸಮಾನತೆಯ ಪ್ರತಿಮೆ'ಯನ್ನು ನಿರ್ಮಿಸಲಾಗಿದೆ. ರಾಮಾನುಜಾಚಾರ್ಯರು ನಂಬಿಕೆ ಮತ್ತು ಜಾತಿ ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸಮಾನತೆಯ ಕಲ್ಪನೆಯ ಪ್ರಚಾರ ಮಾಡಿದ್ದರು. 2014 ರಲ್ಲಿ, ರಾಮಾನುಜಾಚಾರ್ಯ ಆಶ್ರಮದ ಶ್ರೀ ಚಿನ್ನ ಜೀಯರ್  (Shri Chinna Jeeyar Swamy) ಅವರು ರಾಮಾನುಜಾಚಾರ್ಯರ 1000 ನೇ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಇಂತಹ ಸ್ಮರಣೀಯ ಪ್ರತಿಮೆಯನ್ನು ಮಾಡುವ ಆಲೋಚನೆಯನ್ನು ಮಾಡಿದ್ದರು. ಇದಾದ ಬಳಿಕ ಕಾಮಗಾರಿ ಆರಂಭವಾಗಿತ್ತು. ಈ ಪ್ರತಿಮೆಗೆ ರಾಮಾನುಜಾಚಾರ್ಯ ಟ್ರಸ್ಟ್‌ನಿಂದಲೇ (Ramanujacharya Trust) 'ಸಮಾನತೆಯ ಪ್ರತಿಮೆ' ಎಂದು ಹೆಸರಿಸಲಾಗಿದೆ.


ಪಂಚಧಾತುವಿನಿಂದ ಮಾಡಿದ ಪ್ರತಿಮೆ
ಈ 216 ಅಡಿಯ ಪ್ರತಿಮೆಯನ್ನು ಶ್ರೀ ಚಿನ್ನ ಜೀಯರ್ ಸ್ವಾಮಿ ಆಶ್ರಮದ 40 ಎಕರೆ ವಿಸ್ತಾರವಾದ ಸಂಕೀರ್ಣದಲ್ಲಿ ಸ್ಥಾಪಿಸಲಾಗಿದೆ. ಇದರ ತಯಾರಿಕೆಯ ಒಟ್ಟು ವೆಚ್ಚ 1,000 ಕೋಟಿ ಎಂದು ಹೇಳಲಾಗುತ್ತಿದೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವುಗಳ ಸಂಯೋಜನೆಯಿಂದ 'ಪಂಚಧಾತು'ಗಳಿಂದ ಮಾಡಲ್ಪಟ್ಟ ಈ ಪ್ರತಿಮೆಯು ವಿಶ್ವದ ಅತಿ ಎತ್ತರದ ಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ.


ಈ ಪ್ರತಿಮೆಯನ್ನು (Shri Ramanujachrya Statue) 54 ಅಡಿ ಎತ್ತರದ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ, ಇದರ ಹೆಸರು 'ಆಧಾರ್ ಭವನ್ '. ಇದು ವೈದಿಕ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಗ್ರಂಥಗಳು, ರಂಗಮಂದಿರ, ಶೈಕ್ಷಣಿಕ ಗ್ಯಾಲರಿಯನ್ನು ಹೊಂದಿದೆ, ಇದು ಸಂತ ರಾಮಾನುಜಾಚಾರ್ಯರ ಅನೇಕ ಕೃತಿಗಳ ವಿವರಗಳನ್ನು ಪ್ರಸ್ತುತಪಡಿಸುತ್ತದೆ.


ಇದನ್ನೂ ಓದಿ-ಹಿಜಾಬ್ ಹೆಸರಿನಲ್ಲಿ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿಯುತ್ತಿದ್ದೇವೆ: ರಾಹುಲ್ ಗಾಂಧಿ


ರಾಮಾನುಜಾಚಾರ್ಯ ಯಾರು?
1017 ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಜನಿಸಿದ ಸಂತ ರಾಮಾನುಜಾಚಾರ್ಯರು ಮಹಾನ್ ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು. ಅವರು ಭಕ್ತಿ ಚಳುವಳಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಅವರು 120 ವರ್ಷಗಳ ಕಾಲ ಬದುಕಿದ್ದರು ಮತ್ತು ದೇಶಾದ್ಯಂತ ಸಂಚರಿಸಿದರು ಎಂದು ಹೇಳಲಾಗುತ್ತದೆ. ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಮತ್ತು ಲಿಂಗ ಸಮಾನತೆಯ ಬಗ್ಗೆ ಮಾತನಾಡಿದ ಮೊದಲ ವ್ಯಕ್ತಿ ಎಂದು ಅವರನ್ನು ಪರಿಗಣಿಸಲಾಗುತ್ತದೆ. ಅವರು ಶಿಕ್ಷಣವನ್ನು ಎಲ್ಲರಿಗೂ ಸಮಾನವನ್ನಾಗಿಸಿದರೆ  ಮತ್ತು ವಾಸುದೇವ್ ಕುಟುಂಬಕಂ ಪರಿಕಲ್ಪನೆಯನ್ನು ಸಹ ಪ್ರಾರಂಭಿಸಿದರು.


ಇದನ್ನೂ ಓದಿ-ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದ ತುರುಕಲು ಸಿದ್ದರಾಮಯ್ಯ ಪ್ರಯತ್ನ: ಬಿಜೆಪಿ ಆರೋಪ


ಅಷ್ಟೇ ಅಲ್ಲ, ದೇವಸ್ಥಾನಕ್ಕೆ ಎಲ್ಲ ಧರ್ಮ, ಜಾತಿ, ವರ್ಗದವರ ಭೇಟಿಯನ್ನು ಖಾತ್ರಿಪಡಿಸಿದ್ದರು. ಈ ಹಿಂದೆ ಕೆಳವರ್ಗದವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿರುತ್ತಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಪ್ರಕೃತಿ, ಗಾಳಿ, ನೀರು ಮತ್ತು ಮಣ್ಣಿನ ಸಂಪನ್ಮೂಲಗಳನ್ನು ಸಂರಕ್ಷಿಸಲು ಮೊಟ್ಟಮೊದಲ ಬಾರಿಗೆ ಅವರು ತತ್ವಗಳನ್ನು ಸಾರಿದರು.  ಕಬೀರ, ಮೀರಾಬಾಯಿಯಂತಹ ಕವಿಗಳು ಮತ್ತು ದಾರ್ಶನಿಕರಿಗೂ ಕೂಡ ಅವರು ಪ್ರೇರಣೆಯಾಗಿದ್ದರು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ: ಸಿಎಂ ಬೊಮ್ಮಾಯಿ ಸಂತಾಪ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.