ನವದೆಹಲಿ: ಮೋದಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ ಕಾಂಗ್ರೆಸ್ ಮುಖಸ್ಥ ರಾಹುಲ್ ಗಾಂಧೀ  ಸರ್ದಾರ್ ಪಟೇಲ್ ಅವರ ಮೂರ್ತಿಯೇನೂ ಅನಾವರಣಗೊಂಡಿದೆ ಆದರೆ ಅವರು ನಿರ್ಮಿಸಿದ ಎಲ್ಲ ಸಂಸ್ಥೆಗಳನ್ನು ನಾಶಗೋಳಿಸಲಾಗಿದೆ ಎಂದು ಅವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ರಾಹುಲ್ ಅವರ ಈ ಟೀಕೆ ಪ್ರಮುಖವಾಗಿ ಪ್ರಧಾನಿ ಮೋದಿ ಜಗತ್ತಿನ ಅತಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದ ನಂತರ ಬಂದಿದೆ.ಟ್ವೀಟ್ ಮೂಲಕ ಕಿಡಿಕಾರಿರುವ ರಾಹುಲ್ ಗಾಂಧಿ" ಸರ್ದಾರ್ ಪಟೇಲ್ ಅವರ ಅದ್ಬುತ ಪ್ರತಿಮೆ ಅನಾವರಣಗೊಂಡಿದೆ ಆದರೆ ಅವರ ಸಹಾಯದಿಂದ ನಿರ್ಮಿಸಿದ ಎಲ್ಲ ಸಂಸ್ಥೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ "ಎಂದು ರಾಹುಲ್ ಗಾಂಧೀ ತಿಳಿಸಿದರು.



ಸರ್ದಾರ್ ಪಟೇಲ್ ಅವರು ಭಾರತದ ಮೊದಲ ಗೃಹ ಮಂತ್ರಿಯಾಗಿದ್ದು ದೇಶದ ಸ್ವಾತಂತ್ರ್ಯದ ನಂತರ ಸ್ಥಳೀಯ ಸಂಸ್ಥಾನಗಳನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.ಈ ಹಿನ್ನಲೆಯಲ್ಲಿ ಮೋದಿ ಸರ್ಕಾರ ಅವರ ಸ್ಮರಣೆಗಾಗಿ ಈಗ ಜಗತ್ತಿನ ಅತಿ ಎತ್ತರದ ಮೂರ್ತಿಯನ್ನು ನಿರ್ಮಿಸಿದೆ.ಈ ಹಿಂದೆ ರಾಹುಲ್ ಗಾಂಧೀ ಯವರು  ಮೋದಿ ಸರ್ಕಾರದ ಮೇಡ್ ಇನ್ ಇಂಡಿಯಾ ಕಾರ್ಯಕ್ರಮವನ್ನು ವ್ಯಂಗವಾಡುತ್ತಾ ಏಕತಾ ಮೂರ್ತಿಯು ಚೀನಾದಿಂದ ನಿರ್ಮಿಸಲಾಗಿದೆ ಎಂದು ಕಿಡಿಕಾರಿದ್ದರು.