ನರ್ಮದಾ: ಎಂಟು ರಾಷ್ಟ್ರಗಳ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಎಸ್‌ಸಿಒ) ವಿಶ್ವದ ಎಂಟನೇ ಅದ್ಭುತದಲ್ಲಿ 'ಏಕತಾ ಪ್ರತಿಮೆ'ಯನ್ನು ಸೇರಿಸಿದೆ. ವಿದೇಶಾಂಗ ಸಚಿವ ಎಸ್.ಜಯಶಂಕರ್ ಅವರು ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಎಸ್‌ಸಿಒದ ಎಂಟು ಸದಸ್ಯ ರಾಷ್ಟ್ರಗಳಲ್ಲಿ ಭಾರತ, ಪಾಕಿಸ್ತಾನ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ರಷ್ಯಾ ಮತ್ತು ಉಜ್ಬೇಕಿಸ್ತಾನ್ ಸೇರಿವೆ.


COMMERCIAL BREAK
SCROLL TO CONTINUE READING

ಎಸ್‌ಸಿಒದ ಎಂಟು ಅದ್ಭುತಗಳಲ್ಲಿ ಗುಜರಾತ್‌ನ ನರ್ಮದಾ ಜಿಲ್ಲೆಯ (ಗುಜರಾತ್) ಕೆವಾಡಿಯಾದಲ್ಲಿ ನೆಲೆಗೊಂಡಿರುವ 'ಏಕತಾ ಪ್ರತಿಮೆ' ಸ್ಥಾನ ಪಡೆದಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಪ್ರತಿಮೆಯ ಎಂಟು ಅತ್ಯುತ್ತಮ ಪ್ರವಾಸಿ ಸ್ಥಳಗಳಿಗೆ ಸೇರಿದ ನಂತರ, ಪ್ರವಾಸೋದ್ಯಮಕ್ಕೆ ಇಲ್ಲಿ ಉತ್ತೇಜನ ಸಿಗುತ್ತದೆ ಮತ್ತು ಕೆವಾಡಿಯಾದ ಜನರಿಗೆ ಸಹ ಉದ್ಯೋಗ ಸಿಗಲಿದೆ. ಶಾಂಘೈ ಸಹಕಾರದ ಸದಸ್ಯರು ದೇಶದಲ್ಲಿ ಏಕತೆಯ ಪ್ರತಿಮೆಯನ್ನು ಉತ್ತೇಜಿಸಲಿದ್ದಾರೆ ಎನ್ನಲಾಗಿದೆ.


ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್ ಅವರು, 'ಎಸ್‌ಸಿಒದ ಎಂಟು ಅದ್ಭುತಗಳು' ಯೋಜನೆಯಲ್ಲಿ ಏಕತೆಯ ಪ್ರತಿಮೆಯನ್ನು ಸೇರಿಸಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಈ ಗೌರವದಿಂದ ಖಂಡಿತವಾಗಿಯೂ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗುತ್ತಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.



ಈ ಕುರಿತ ಮತ್ತೊಂದು ಟ್ವೀಟ್‌ನಲ್ಲಿ, 'ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ರಷ್ಯಾ ಮತ್ತು ಚೀನಾ ಸೇರಿದಂತೆ ಎಂಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ನಮ್ಮ ಪ್ರದೇಶದಲ್ಲಿ ಪರಸ್ಪರ ನಂಬಿಕೆ ಮತ್ತು ಸಂಬಂಧಗಳನ್ನು ಬಲಪಡಿಸುವುದು ಮತ್ತು ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವುದು ಇದರ ಮುಖ್ಯ ಗುರಿಯಾಗಿದೆ.