ತೂತುಕುಡಿ ಘಟನೆ ಖಂಡಿಸಿ ನಾಳೆ ಪ್ರತಿಪಕ್ಷಗಳಿಂದ ತಮಿಳುನಾಡು ಬಂದ್
ಚೆನ್ನೈ: ನಾಳೆ ತಮಿಳುನಾಡಿನಲ್ಲಿ ಪ್ರತಿಪಕ್ಷಗಳು ತೂತುಕುಡಿಯಲ್ಲಿ ನ ಪೋಲೀಸರ ಗೋಲಿಬಾರ್ ಕ್ರಮವನ್ನು ಖಂಡಿಸಿ ರಾಜ್ಯಾವ್ಯಾಪಿ ಬಂದ್ ಗೆ ಕರೆ ಕೊಡಲಾಗಿದೆ.
ಸ್ಸ್ಟೇರ್ಲೈಟ ಪ್ಲಾಂಟ್ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಸುಮಾರು 12 ಜನರು ಅಮಾನುಷವಾಗಿ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಈಗ ತಮಿಳುನಾಡಿನಲ್ಲಿ ಡಿಎಂಕೆ ಸಹಿತ ಹಲವಾರು ಪ್ರತಿಪಕ್ಷಗಳು ನಾಳೆ ತಮಿಳುನಾಡು ಬಂದ್ ಗೆ ಕರೆ ಕೊಟ್ಟಿದ್ದಾರೆ.
ಈ ಘಟನೆಯ ವಿಚಾರವಾಗಿ ಪ್ರತಿಕ್ರಯಿಸಿರುವ ಡಿಎಂಕೆ ನಾಯಕ ಸ್ಟಾಲಿನ್ "12 ಜನರು ಮೃತಪಟ್ಟನಂತರವೂ ಸಹಿತ ಯಾವುದೇ ರೀತಿಯ ಕ್ರಮವನ್ನು ಆರೋಪಿಗಳ ಮೇಲೆ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಗಳು ಅಸಮರ್ಥರಾಗಿದ್ದಾರೆ. ಅವರು ಜಿಲ್ಲೆಗೆ ಭೇಟಿ ನೀಡುವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಆದ್ದರಿಂದ ನಾವು ಮುಖ್ಯಮಂತ್ರಿ ಮತ್ತು ಡಿಜಿಪಿ ತಕ್ಷಣವೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.