ದ್ರಾವಿಡ ಚಳುವಳಿಯ ಗಟ್ಟಿ ಧ್ವನಿ `ಪೆರಿಯಾರ್`
ಪೆರಿಯಾರ್ ಭಾರತದ ಆಧುನಿಕ ಇತಿಹಾಸದಲ್ಲಿ ಅಪ್ರತಿಮ ಹೆಸರು, ದ್ರಾವಿಡ ಚಳುವಳಿ,ಹಿಂದಿ ಹೇರಿಕೆಯ ವಿರುದ್ದದ ಚಳುವಳಿ,ಬ್ರಾಹ್ಮಣೆತರ ಸಮುದಾಯಗಳ ಚಳುವಳಿ,ಇಂತಹ ಹಲವು ಚಳುವಳಿಗಳೊಂದಿಗೆ ಕೈಜೋಡಿಸಿದವರೆಂದರೆ ಅದು ಈರೋಡ್ ವೆಂಕಟಪ್ಪ ರಾಮಾಸ್ವಾಮಿ, ಸಾಮಾನ್ಯವಾಗಿ ಜನರ ಮಧ್ಯದಲ್ಲಿ 'ಪೆರಿಯಾರ್' ಎಂದು ಖ್ಯಾತಿ ಗಳಿಸಿದವರು. ಇಂದು ಈ ಮಹಾನ್ ವ್ಯಕ್ತಿಯ ಸ್ಮರಣ ದಿನ, ಆದ್ದರಿಂದ ಈ ದಿನದಂದು ಇವರ ಆದರ್ಶ ಮತ್ತು ಚಳುವಳಿಯ ಮಾರ್ಗಗಳನ್ನು ನೆನೆಯಬೇಕಾಗಿದೆ,
ಸೆಪ್ಟೆಂಬರ್ 17 .1879 ರಂದು ಈಗಿನ ತಮಿಳುನಾಡಿನಲ್ಲಿರುವ ಈರೋಡ್ ಜಿಲ್ಲೆಯಲ್ಲಿ ಶ್ರೀಮಂತ ಬಲಿಜ ಕುಟುಂಬದಲ್ಲಿ ಜನಿಸಿದ ಪೆರಿಯಾರ್ ,ಬಾಲ್ಯದಲ್ಲಿಯೇ ಜಾತಿ ಮತ್ತು ಲಿಂಗ ತಾರತಮ್ಮ್ಯವನ್ನು ನೋಡಿದವರು ಇದರ ಫಲವಾಗಿ 1919 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಗೆ ಸೇರಿದರು. ಆದರೆ ಆ ಪಕ್ಷವು ಕೇವಲ ಬ್ರಾಹ್ಮಣರ ಹಿತಾಸಕ್ತಿಯನ್ನು ಕಾಪಾಡುತ್ತದೆ ಎಂದು ತಿಳಿದು 1925ರಲ್ಲಿ ಕಾಂಗ್ರೆಸ್ ಗೆ ವಿಧಾಯ ಹೇಳಿದರು. ಅಲ್ಲದೆ ದ್ರಾವಿಡರನ್ನು ಬ್ರಾಹ್ಮ್ನತ್ವದಲ್ಲಿ ಒಳಗೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸಿದರು.
1924 ರಲ್ಲಿ ವೈಕೋಮ ಸತ್ಯಾಗ್ರಹದ ಮೂಲಕ ಮುಖ್ಯ ಪರದೆಗೆ ಬಂದ ಪೆರಿಯಾರ್ ನಂತರದ ದಿನಗಳಲ್ಲಿ ಮಲೇಷ್ಯಾ, ರಷ್ಯಾ ,ಯುರೋಪ್ ದೇಶಗಳಿಗೆ ಪ್ರಯಾಣವನ್ನು ಬೆಳೆಸಿದರು. ಪಾಶ್ಚಾತ್ಯರ ವಿಚಾರಗಳಿಂದ ಪ್ರಭಾವಿತರಾದ ಪೆರಿಯಾರ್ ಮುಂದೆ 1939 ರಲ್ಲಿ ಜಸ್ಟಿಸ್ ಪಾರ್ಟಿಯನ್ನು ಸ್ಥಾಪಿಸಿ ಮುಂದೆ ಅದನ್ನೇ 1944ರಲ್ಲಿ ಅದನ್ನು ದ್ರಾವಿಡ ಕಜಗಂ ಎಂದು ಮರು ನಾಮಕರಣ ಮಾಡಿದರು.
ಆದರೆ ಅದು ನಂತರದ ದಿನಗಳಲ್ಲಿ ಅಣ್ಣಾದೊರೈ ಮೂಲಕ ದ್ರಾವಿಡ ಮುನ್ನೇತ್ರ ಕಜಗಂ ಎಂದು ಹೆಸರಾಯಿತು. ಇಂತಹ ವಿಭಜನೆಗಳ ನಡುವೆಯೂ ಹಿಂದುಳಿದ ಶೋಷಿತ ವರ್ಗಗಳ ಸ್ವ ಗೌರವ ಚಳುವಳಿಯನ್ನು ಮುಂದುವರೆಸಿದರು. ಮುಂದೆ ದ್ರಾವಿಡರಿಗಾಗಿ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರತ್ಯೇಕ ದ್ರಾವಿಡ ನಾಡು ರಾಷ್ಟ್ರವಾಗಬೇಕೆಂದು ಆಗ್ರಹಿಸಿದರು. ಪೆರಿಯಾರ್ ತಮ್ಮ ಜೀವಿತಾವಧಿಯಲ್ಲಿ ವಿಚಾರವಾದ, ಸ್ವಗೌರವ, ಮಹಿಳೆಯರ ಹಕ್ಕುಗಳು,ಮತ್ತು ದ್ರಾವಿಡರ ಮೇಲಿನ ವೈದಿಕ ಪರಂಪರೆಯ ಹೇರಿಕೆ ,ಹಿಂದಿ ಹೇರಿಕೆ ಹೀಗೆ ನಿರಂತರವಾಗಿ ಪೆರಿಯಾರ್ ಶೋಷಿತ ವರ್ಗಗಳ ವಿಷಯಕ್ಕೆ ಸಂಬಂಧಿಸಿದ ವಿಚಾರಗಳಿಗೆ ಗಟ್ಟಿ ಧ್ವನಿಯಾಗಿ ಭಾರತೀಯ ಉಪಖಂಡದ ಇತಿಹಾಸದಲ್ಲಿ ದಾಖಲಾಗಿದ್ದಾರೆ.
ಹೀಗೆ ಸಮಾಜದ ಹಲವು ರೀತಿಯ ದೌರ್ಜನ್ಯ ಹಾಗೂ ತಾರತಮ್ಯಗಳನ್ನು ಹಿಮ್ಮಟ್ಟಿಸಿದ ಪೆರಿಯಾರ್ 1973 ರಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಈಗಿನ ತಮಿಳುನಾಡಿನ ವೆಲ್ಲೂರ್ ನಲ್ಲಿ ಕೊನೆಯುಸಿರೆಳೆದರು.