15 ರಾಜ್ಯಗಳಲ್ಲಿ ವರುಣನ ಅಬ್ಬರ, ಹರಿಯಾಣದಲ್ಲಿ ಶಾಲೆಗಳಿಗೆ ರಜೆ
ಉತ್ತರ ಭಾರತದಲ್ಲಿ ಮತ್ತೊಮ್ಮೆ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ದೇಶದ 15 ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ನವದೆಹಲಿ: ಉತ್ತರ ಭಾರತದಲ್ಲಿ ಮತ್ತೆ ವರುಣ ಅಬ್ಬರಿಸಲಿದ್ದಾನೆ. ಉತ್ತರ ಭಾರತದಲ್ಲಿ ಮತ್ತೊಮ್ಮೆ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ದೇಶದ 13 ರಾಜ್ಯಗಳಲ್ಲಿ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಕೆಲವು ಸ್ಥಳಗಳಲ್ಲಿ, ಇಂದು ಉಷ್ಣಾಂಶ ಉಲ್ಬಣವು ಸಂಭವಿಸಬಹುದು ಎಂದು ಹೇಳಲಾಗಿದೆ. ಆದರೆ ಉತ್ತರಾಖಂಡ್ ಮತ್ತು ಪಂಜಾಬಿನ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಸಲಹೆಯನ್ನು ಉಲ್ಲೇಖಿಸಿ ಗೃಹ ಸಚಿವಾಲಯ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆ ಭಾರೀ ಮಳೆಯಾಗಲಿದೆ. ಪಶ್ಚಿಮ ರಾಜಸ್ತಾನದ ಕೆಲವು ಸ್ಥಳಗಳಲ್ಲಿ ಧೂಳಿನ ಬಿರುಗಾಳಿಗಳು ಉಂಟಾಗಬಹುದು ಮತ್ತು ಮಳೆ ಉಂಟಾಗಬಹುದು ಎಂದು ಹೇಳಿದೆ.
ಹರಿಯಾಣದಲ್ಲಿ ಎಚ್ಚರಿಕೆ, ಶಾಲೆಗಳಿಗೆ ರಜೆ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹರಿಯಾಣ ಸರ್ಕಾರವು ಮೇ 7 ಮತ್ತು 8 ರಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದೆ. ರಾಜ್ಯ ಶಿಕ್ಷಣ ಸಚಿವ ರಾಮ್ವಿಲಾಸ್ ಶರ್ಮಾ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಎರಡು ದಿನಗಳವರೆಗೆ ಶಾಲೆಗಳಿಗೆ ರಜೆ ನೀಡಿ ಆದೇಶ ಹೋರಡಿಸಿದ್ದಾರೆ. ಈ ಹಂತವನ್ನು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಹಿಮಾಚಲ ಪ್ರದೇಶದ ಹವಾಮಾನ ಇಲಾಖೆಯ ನಿರ್ದೇಶಕ ಮನ್ಮೋಹನ್ ಸಿಂಗ್ ಮಾತನಾಡುತ್ತಾ, ರಾಜ್ಯದ ಅನೇಕ ಪ್ರದೇಶಗಳಲ್ಲಿ ಭಾನುವಾರ ಕೂಡ ಮಳೆ ಇತ್ತು. ಮುಂದಿನ 24 ಗಂಟೆಗಳಲ್ಲಿ ಮಳೆ ಮತ್ತು ಎತ್ತರದ ಪ್ರದೇಶಗಳಲ್ಲಿ ಹಿಮಪಾತವು ಬೀಳಲಿದೆ ಎಂದು ಅವರು ಹೇಳಿದರು. ಹವಾಮಾನದ ಚಿತ್ತ ಮುಂದಿನ ಎರಡು ದಿನಗಳವರೆಗೆ ಬದಲಾಗಲಿದೆ ಎಂದು ಅವರು ಹೇಳಿದರು.
ಪಂಜಾಬ್ನಲ್ಲಿ ಮುಂದಿನ 48 ರಿಂದ 72 ಗಂಟೆಗಳ ಕಾಲ ಪಂಜಾಬ್ ಪ್ರಬಲ ಗಾಳಿ ಮತ್ತು ಮಳೆಗೆ ಸಾಕ್ಷಿಯಾಗಲಿದೆ ಎಂದು ಹವಾಮಾನ ಇಲಾಖೆಯ ಮುಖ್ಯಸ್ಥ ಡಾ. ಕುಲ್ವಿಂದರ್ ಸಿಂಗ್ ಗಿಲ್ ಹೇಳಿದ್ದಾರೆ. ಮಾನ್ಸೂನ್ ಈ ಸಮಯದಲ್ಲಿ ಸಮಯಕ್ಕಿಂತ ಮೊದಲೇ ಬರಲಿದೆ ಬದಲಾಗುವ ಋತುವಿನ ಸ್ಪಷ್ಟ ಸೂಚನೆ ಇದೆ ಎಂದು ಅವರು ಹೇಳಿದರು.
ಆಗ್ರಾ ಮತ್ತು ಭರತ್ಪುರದಲ್ಲಿ ಭಾರೀ ನಷ್ಟ
ಕಳೆದ ವಾರ, ಉತ್ತರ ಪ್ರದೇಶದ ಆಗ್ರಾದಲ್ಲಿ ಮತ್ತು ರಾಜಸ್ತಾನದ ಭರತ್ಪುರ್ನಲ್ಲಿ ಹವಾಮಾನ ಸಮಸ್ಯೆಗಳಿಗೆ ಕೆಟ್ಟ ಪರಿಣಾಮ ಕಂಡುಬಂದಿದೆ. ಭರತ್ಪುರದ ಚಂಡಮಾರುತದ ಕಾರಣದಿಂದ ವಿದ್ಯುತ್ ಪೂರೈಕೆಯಲ್ಲೂ ಅಡಚಣೆ ಉಂಟಾಯಿತು, ನಾಲ್ಕು ದಿನಗಳ ನಂತರವೂ ಅದನ್ನು ಪುನಃಸ್ಥಾಪಿಸಲಾಗಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಜನರು ಭಾನುವಾರ ಹಲವು ಸ್ಥಳಗಳಲ್ಲಿ ಪ್ರತಿಭಟಿಸಿದರಲ್ಲದೆ, ರಸ್ತೆ ತಡೆ ಕೂಡ ನಡೆಸಿದರು.
ಕಳೆದ ವಾರ ಭಾರೀ ಬಿರುಗಾಳಿ, ಮಿಂಚು ಹಾಗೂ ಮಳೆಯಿಂದಾಗಿ ಐದು ರಾಜ್ಯಗಳಲ್ಲಿ 124 ಜನರು ಮೃತಪಟ್ಟರು ಮತ್ತು 300ಕ್ಕಿಂತ ಅಧಿಕ ಜನರು ಗಾಯಗೊಂಡಿದ್ದರು.