ಹೈದರಾಬಾದ್: ಇಲ್ಲಿನ ಓಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಮೊದಲ ವರ್ಷದ ಎಂಎಸ್ಸಿ ಭೌತಶಾಸ್ತ್ರದಲ್ಲಿ ಓದುತ್ತಿದ್ದ ಮುರಳಿ ಎನ್ನುವ ವಿದ್ಯಾರ್ಥಿ ವಿಶ್ವವಿದ್ಯಾನಿಲಯದ ಶೌಚಗೃಹದಲ್ಲಿ  ಆತ್ಮಹತ್ಯೆಗೆ ಶರಣಾಗಿದ್ದಾನೆ. ನೇಣುಹಾಕಿಕೊಂಡ ಸ್ಥಳದಲ್ಲಿ ಡೆತ್ ನೋಟ್ ದೊರೆತಿದ್ದು ಪರೀಕ್ಷೆಯ ಫಲಿತಾಂಶದದ ಬಗ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ವಿದ್ಯಾರ್ಥಿಯು ಸಿದ್ದಿಪೇಟ್ ಜಿಲ್ಲೆಯ ದೌಲಾಪುರ ಗ್ರಾಮದರಾಗಿದ್ದು ಎಂದು ತಿಳಿದು ಬಂದಿದೆ.ಈ ವಿಷಯವಾಗಿ ಪೊಲೀಸರು ಈಗಾಗಲೇ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಇದಕ್ಕೆ ಪ್ರತಿಕ್ರಿಯಿಸಿರುವ ನಿರುದ್ಯೋಗಿ ಯುವಕರ ಸಂಘದ ಅಧ್ಯಕ್ಷ  ಕೆ ಮಾನವತಾ ರೈ ನಿರುದ್ಯೋಗದ ವಿಷಯವಾಗಿ ಮುರಳಿ ಆತ್ಮಹತ್ಯೆ  ಮಾಡಿಕೊಂಡಿದ್ದು, ರಾಜ್ಯ ಸರ್ಕಾರವು ಈ ಆತ್ಮಹತ್ಯೆಗೆ ಕಾರಣವಾಗಿದ್ದು ಆದ್ದರಿಂದ ಅವರು ಆ ವಿಧ್ಯಾರ್ಥಿಯ ಕುಟುಂಬಕ್ಕೆ  50 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.