ಮೊರದಾಬಾದ್: ಟ್ಯಾಪ್ ನೀರು ಬಿಟ್ಟು ಹಲ್ಲುಜ್ಜುತ್ತಾ ಕೂರುವುದು ಅಥವಾ ಬೇರೇನೋ ಕೆಲಸ ಮಾಡುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ನೀರು ನಮ್ಮ ಜೀವನಕ್ಕೆ ಎಷ್ಟು ಮುಖ್ಯ, ನೀರು ಎಷ್ಟು ವ್ಯರ್ಥವಾಗುತ್ತಿದೆ. ದಿನನಿತ್ಯ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಬಳಸುತ್ತಿದ್ದೇವೆ. ನೀರನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಬಗ್ಗೆ ಉಪನ್ಯಾಸಗಳು ನಡೆಯುತ್ತಲೇ ಇವೆ. ಆದರೆ, ನೀರನ್ನು ಸಂರಕ್ಷಿಸಲು ಅನುಸರಿಸಬೇಕಾದ ಕ್ರಮಗಳನ್ನು ಮಾತ್ರ ಹಲವರು ಅಳವಡಿಸಿಕೊಂಡಿಲ್ಲ. 


COMMERCIAL BREAK
SCROLL TO CONTINUE READING

ನಾವು ಮನೆಯಿಂದ ಹೊರಡುವಾಗ ಸಿಂಕ್ ಟ್ಯಾಪ್, ಸ್ನಾನದ ಕೋಣೆಗಳಲ್ಲಿನ ಟ್ಯಾಪ್ ಗಳನ್ನು ಸರಿಯಾಗಿ ಬಂದ್ ಮಾಡದೆ ಹೋಗುವುದು ಸಾಮಾನ್ಯ ವಿಷಯ. ಆದರೆ ಇದರಿಂದಲೇ ನೀರು ಹೆಚ್ಚಾಗಿ ವ್ಯರ್ಥವಾಗುತ್ತದೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ  ಉತ್ತರ ಪ್ರದೇಶದ ಮೊರದಾಬಾದ್ ನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ 'ಸ್ಮಾರ್ಟ್ ವಾಶ್ ಬೇಸಿನ್' ಒಂದನ್ನು ವಿನ್ಯಾಸಗೊಳಿಸಿದ್ದಾರೆ.


ಅಷ್ಟಕ್ಕೂ ಈ 'ಸ್ಮಾರ್ಟ್ ವಾಶ್ ಬೇಸಿನ್' ನಿಂದ ನೀರಿನ ಸಂರಕ್ಷಣೆ ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ... ಕಂಡಿತಾ ಸಾಧ್ಯ. ವಾಶ್ ಬೇಸಿನ್ ನಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೆ ಮೊಬೈಲ್ ಗೆ ಎಚ್ಚರಿಕೆಯ ಸಂದೇಶ ಕಳುಹಿಸುವ ರೀತಿಯಲ್ಲಿ ಈ 'ಸ್ಮಾರ್ಟ್ ವಾಶ್ ಬೇಸಿನ್' ಅನ್ನು ತಯಾರಿಸಲಾಗಿದೆ ಎಂದು ವಿದ್ಯಾರ್ಥಿಗಳು ವಿವರಣೆ ನೀಡಿದ್ದಾರೆ.