ನವದೆಹಲಿ: ದೇಶದೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ! ಪ್ರತಿಯೊಂದು ಮನೆಯಲ್ಲೂ, ಬೀದಿ ಬಿದಿಯಲ್ಲೂ ಮಂಟಪ ನಿರ್ಮಿಸಿ ಗಣಪತಿ ಮೂರ್ತಿ ಕೂರಿಸಿ ಜನತೆ ಹಬ್ಬ ಆಚರಿಸುತ್ತಾರೆ. ಆದರೆ, ಪುರಿಯ ಕಡಲ ತೀರದಲ್ಲಿ ಮರಳಿನಲ್ಲಿ ರಚಿಸಲಾಗಿರುವ ಪರಿಸರ ಸ್ನೇಹಿ ಗಣಪನ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. 


COMMERCIAL BREAK
SCROLL TO CONTINUE READING

ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರ ಕಲೆ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 'ಪ್ಲಾಸ್ಟಿಕ್ ಬೇಡ, ಪರಿಸರ ಸ್ನೇಹಿ ಗಣಪನನ್ನು ಬಳಸಿ' ಎಂಬ ಸಂದೇಶದೊಂದಿಗೆ ಒಡಿಶಾದ ಪುರಿಯ ಕಡಲ ತೀರದಲ್ಲಿ ಅವರು ನಿರ್ಮಿಸಿರುವ 20 ಅಡಿ ಉದ್ದದ ಗಣಪನ ಕಲಾಕೃತಿ ನಿಜಕ್ಕೂ ಎಲ್ಲರನ್ನು ಆಕರ್ಷಿಸಿದೆ. ಈ ಮೂಲಕ ಗಣೇಶ ಚತುರ್ಥಿಯಂದು ಸುದರ್ಶನ್ ಅವರು ವಿನಾಯಕನಿಗೆ ವಿಶೇಷ ನಮನ ಸಲ್ಲಿಸಿದ್ದಾರೆ. 


ಈ ಮರಳಿನ ಕಲಾಕೃತಿಯ ಫೋಟೋಗಳನ್ನುಸುದರ್ಶನ್ ಪಟ್ನಾಯಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ #SaveEnvironment #BeatPlasticPollution ಎಂಬ ಹ್ಯಾಶ್ ಟ್ಯಾಗ್'ನಡಿ ಹಂಚಿಕೊಂಡಿದ್ದಾರೆ. ಈ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸಿರುವ ಅವರು, ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಪರಿಸರ ಉಳಿಸಿ ಎಂಬ ಸಂದೇಶ ನೀಡಿದ್ದಾರೆ.