Actress Death: ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ಅಭಿನಯಿಸಿದ್ದ ಖ್ಯಾತ ಬಾಲನಟಿ ನಿಗೂಢ ಸಾವು!
Dangal Actress Suhani Bhatnagar Passed Away: ಮಾಧ್ಯಮ ವರದಿಗಳ ಪ್ರಕಾರ, ಕೆಲವು ಸಮಯದ ಹಿಂದೆ ಸುಹಾನಿ ಭಟ್ನಾಗರ್ ಅವರ ಕಾಲಿನಲ್ಲಿ ಮೂಳೆ ಮುರಿತವಾಗಿತ್ತು. ಅದರ ಚಿಕಿತ್ಸೆಗಾಗಿ ಆಕೆ ತೆಗೆದುಕೊಳ್ಳುತ್ತಿದ್ದ ಔಷಧಗಳೇ ಅಡ್ಡ ಪರಿಣಾಮ ಬೀರಿವೆ. ಅಷ್ಟೇ ಅಲ್ಲದೆ, ಆಕೆಯ ದೇಹದಲ್ಲಿ ದ್ರವವು ಶೇಖರಣೆಯಾಗಲು ಪ್ರಾರಂಭಿಸಿದ್ದು, ಇದು ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತದೆ.
Dangal Actress Suhani Bhatnagar Passed Away: ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದಲ್ಲಿ ಬಬಿತಾ ಫೋಗಟ್ ಬಾಲ್ಯದ ಪಾತ್ರದಲ್ಲಿ ನಟಿಸಿದ್ದ ನಟಿ ಸುಹಾನಿ ಭಟ್ನಾಗರ್, ಫೆಬ್ರವರಿ 17 ರಂದು ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಕೇವಲ 19ನೇ ವಯಸ್ಸಿನಲ್ಲಿ ಸುಹಾನಿ ಇಹಲೋಕಕ್ಕೆ ವಿದಾಯ ಹೇಳಿರುವುದು ದುಃಖದ ಸಂಗತಿ. ಮಾಹಿತಿ ಪ್ರಕಾರ, ಕೆಲ ಸಮಯದಿಂದ ಸುಹಾನಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಅವರ ಅಂತಿಮ ಸಂಸ್ಕಾರ ಇಂದು ಫರಿದಾಬಾದ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ:ನಮ್ಮ ಪಾಲಿನ ನ್ಯಾಯಯುತ ಪಾಲು ಬರದಿದ್ದರೂ ರಾಜ್ಯ ಆರ್ಥಿಕವಾಗಿ ಸುಭದ್ರ: ಸಿಎಂ ಸಿದ್ದರಾಮಯ್ಯ
ಔಷಧಿಯ ಅಡ್ಡ ಪರಿಣಾಮವೇ ಸಾವಿಗೆ ಕಾರಣ!
ಮಾಧ್ಯಮ ವರದಿಗಳ ಪ್ರಕಾರ, ಕೆಲವು ಸಮಯದ ಹಿಂದೆ ಸುಹಾನಿ ಭಟ್ನಾಗರ್ ಅವರ ಕಾಲಿನಲ್ಲಿ ಮೂಳೆ ಮುರಿತವಾಗಿತ್ತು. ಅದರ ಚಿಕಿತ್ಸೆಗಾಗಿ ಆಕೆ ತೆಗೆದುಕೊಳ್ಳುತ್ತಿದ್ದ ಔಷಧಗಳೇ ಅಡ್ಡ ಪರಿಣಾಮ ಬೀರಿವೆ. ಅಷ್ಟೇ ಅಲ್ಲದೆ, ಆಕೆಯ ದೇಹದಲ್ಲಿ ದ್ರವವು ಶೇಖರಣೆಯಾಗಲು ಪ್ರಾರಂಭಿಸಿದ್ದು, ಇದು ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತದೆ.
'ದಂಗಲ್' ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ
ಸುಹಾನಿ ಭಟ್ನಾಗರ್ 2016ರಲ್ಲಿ 'ದಂಗಲ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ನಟ ಅಮೀರ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದ ಅವರು, ಬಬಿತಾ ಬಾಲನಟಿಯಾಗಿದ್ದರು. ಚಿತ್ರದಲ್ಲಿ ಅಮೀರ್, ಸಾಕ್ಷಿ ತನ್ವರ್ ಮತ್ತು ಝೈರಾ ವಾಸಿಮ್ ಅವರೊಂದಿಗೆ ಕೆಲಸ ಮಾಡಿದ ಸುಹಾನಿ, ಕೆಲವು ಟಿವಿ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ಆದರೆ, ನಂತರ ಅವರು ನಟನೆಯಿಂದ ವಿರಾಮ ತೆಗೆದುಕೊಂಡು ಅಧ್ಯಯನದತ್ತ ಗಮನ ಹರಿಸಿದ್ದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಸಾವಿರ ಕೋಟಿ ಒಡೆಯ… ಹಾಗಾದ್ರೆ ಅನುಷ್ಕಾ ಶರ್ಮಾ ಎಷ್ಟು ಕೋಟಿ ಆಸ್ತಿಯ ಒಡತಿ?
'ದಂಗಲ್’ನ ಬಾಲನಟಿ ಸುಹಾನಿ ಭಟ್ನಾಗರ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರಲಿಲ್ಲ. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವೇ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್