ನವದೆಹಲಿ: 2015 ರ ಜನವರಿಯಲ್ಲಿ : ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 'ಸುಕನ್ಯಾ ಸಮೃದ್ಧಿ ಯೋಜನೆ'ಯನ್ನು ಭಾರತ ಸರ್ಕಾರವು ಪ್ರಾರಂಭಿಸಿತು. ಈ ಯೋಜನೆಯ ಬಗ್ಗೆ ಸಾಕಷ್ಟು ಚರ್ಚಿಸಲಾಗಿದೆ. ಸರ್ಕಾರ ಇತ್ತೀಚೆಗೆ ಈ ಯೋಜನೆಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. 'ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳ-2016'ಕ್ಕೆ ತಿದ್ದುಪಡಿ ತರುವ ಮೂಲಕ ಯೋಜನೆಯ ಷರತ್ತುಗಳನ್ನು ಸಡಿಲಗೊಳಿಸಿದ ಸರ್ಕಾರ. 'ಸುಕನ್ಯಾ ಸಮೃದ್ಧಿ ಯೋಜನೆ'ಯನ್ನು ಮತ್ತಷ್ಟು ಜನರಿಗೆ, ಅದರಲ್ಲೂ ತೀರಾ ಕಡಿಮೆ ಆದಾಯ ಹೊಂದಿರುವವರಿಗೆ ಕೈಗೆಟುಕುವಂತೆ ಮಾಡಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಈ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆಯ ಲಾಭ ಪಡೆಯುವುದು ಇನ್ನೂ ಸುಲಭವಾಗಿದೆ.


COMMERCIAL BREAK
SCROLL TO CONTINUE READING

ಲೈವ್ ಮಿಂಟ್ನ ಸುದ್ದಿ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯಡಿ, ನವೆಂಬರ್ 2017 ರವರೆಗೆ 1.26 ಕೋಟಿ ಖಾತೆಗಳು ಇದ್ದವು, ಅದರಲ್ಲಿ ಸುಮಾರು 19,183 ಕೋಟಿ ರೂ. ಠೇವಣಿ ಮಾಡಲಾಗಿದೆ.


ಕೇವಲ 250 ರೂ. ನಲ್ಲಿ ಖಾತೆ ತೆರೆಯಬಹುದು:
ಸುಕಾನ್ಯಾ ಸಮೃದ್ಧಿ ಯೋಜನೆಗೆ ಸಂಬಂಧಿಸಿದ ನಿಯಮಗಳಲ್ಲಿ ಇದು ಅತ್ಯಂತ ಪ್ರಮುಖ ಬದಲಾವಣೆಯಾಗಿದೆ. ಈ ಯೋಜನೆಯಡಿ ಖಾತೆ ತೆರೆಯಲು ಕಟ್ಟಬೇಕಾಗಿದ್ದ ಕನಿಷ್ಠ ಠೇವಣಿ ಮೊತ್ತವನ್ನು ಈವರೆಗೂ ಇದ್ದ 1,000 ರೂ.ನಿಂದ 250 ರೂ.ಗೆ ಇಳಿಸಿದೆ. 2018 ರ ಸುಕಾನ್ಯಾ ಸಮೃದ್ಧಿ ಯೋಜನೆ (ತಿದ್ದುಪಡಿ) ಕಾಯಿದೆ ಅಡಿಯಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ.


ಠೇವಣಿ ಮೊತ್ತದ ಮಿತಿಯಲ್ಲೂ ಕೂಡ ಕಡಿಮೆ:
ಸರ್ಕಾರದ ಪರವಾಗಿ ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು, ಸುಕಾನ್ಯಾ ಸಮೃದ್ಧಿ  ಯೋಜನೆಯಡಿ ವಾರ್ಷಿಕ ಕಡ್ಡಾಯವಾಗಿ ಕಟ್ಟಬೇಕಾಗಿದ್ದ ಕನಿಷ್ಠ ಠೇವಣಿ ಮೊತ್ತವನ್ನು ಈವರೆಗೂ ಇದ್ದ 1,000 ರೂ.ನಿಂದ 250 ರೂ.ಗೆ ಇಳಿಸಿದೆ. ಹೊಸ ನಿಯಮಗಳು ಜುಲೈ 6, 2018 ರಿಂದ ಜಾರಿಗೆ ಬಂದಿದೆ.


ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿ:
ಆರಂಭದಲ್ಲಿ, ಸುಕನ್ಯಾ ಸಮೃದ್ಧಿ ಯೋಜನೆಯ ವಾರ್ಷಿಕವಾಗಿ ಖಾತೆಯ ಮೇಲೆ ಬಡ್ಡಿ ನೀಡಲಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಈ ಯೋಜನೆಯಡಿಯಲ್ಲಿ ಠೇವಣಿ ಮೊತ್ತದ ಪ್ರತಿ ತ್ರೈಮಾಸಿಕದಲ್ಲಿ ಸರ್ಕಾರವು ಬಡ್ಡಿ ನೀಡಲಿದೆ. ಅಂತಹ ಒಂದು ಅವಕಾಶ ಈಗಾಗಲೇ ಪಿಪಿಎಫ್ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆಗಳಂತಹ ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿದೆ. ಪ್ರಸ್ತುತ, ಸುಕಾನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕವಾಗಿ 8.1% ನಷ್ಟು ಬಡ್ಡಿ ನೀಡಲಾಗುತ್ತಿದೆ.


ತೆರಿಗೆ ವಿನಾಯಿತಿ
ಒಂದೆಡೆ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿಯ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಮತ್ತೊಂದೆಡೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಪೋಷಕರಿಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ಇದು ಸಾಮಾನ್ಯ ಜನರನ್ನು ಹೆಚ್ಚು ಆಕರ್ಷಿಸಿದೆ.


ಈ ಯೋಜನೆಯು ಆದಾಯ ತೆರಿಗೆ ನಿಯಮಗಳ ಸೆಕ್ಷನ್ 80 ಸಿ ಅಡಿಯಲ್ಲಿ ಹಣಕಾಸು ವರ್ಷದ 1.50 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ ರೂ. 250 ರಿಂದ ಗರಿಷ್ಠ 1.5 ಲಕ್ಷದವರೆಗೆ ಡಿಪಾಸಿಟ್ ಮಾಡಬಹುದು.


ಇದೊಂದು ದೀರ್ಘಕಾಲಿನ ಉಳಿತಾಯ ಖಾತೆ:
ಇದೊಂದು ದೀರ್ಘಕಾಲಿನ ಉಳಿತಾಯ ಖಾತೆಯಾಗಿದ್ದು ಸುಕಾನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯು ಆರಂಭಗೊಂಡ ದಿನದಿಂದ 21 ವರ್ಷದವರೆಗೂ ಚಾಲ್ತಿಯಲ್ಲಿರುತ್ತದೆ. ಯಾವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆಗೆ 18 ವರ್ಷ ಪೂರ್ಣಗೊಂಡ ನಂತರ, ಆಕೆಯು ತನ್ನ ಖಾತೆಯಲ್ಲಿ ಜಮಾ ಆದ ಹಣದಲ್ಲಿ ಅರ್ಧ ಭಾಗವನ್ನು ಉನ್ನತ ಶಿಕ್ಷಣ, ಮದುವೆಯ ಉದ್ದೇಶಕ್ಕೆ ಬಳಸಬಹುದು.


10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಅವಕಾಶ:
ಸುಕಾನ್ಯ ಸಮೃದ್ಧಿ ಯೋಜನೆಯಡಿ, ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ. ಪಾಲಕರು ಅಥವಾ ಪೋಷಕರು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. 


ಯಾವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆಗೆ 18 ವರ್ಷ ಪೂರ್ಣಗೊಂಡ ನಂತರ, ಆಕೆಯು ತನ್ನ ಖಾತೆಯಲ್ಲಿ ಜಮಾ ಆದ ಹಣದಲ್ಲಿ ಅರ್ಧ ಭಾಗವನ್ನು ಉನ್ನತ ಶಿಕ್ಷಣ, ಮದುವೆಯ ಉದ್ದೇಶಕ್ಕೆ ಬಳಸಬಹುದು.