ನವದೆಹಲಿ: ಬಾಲಿವುಡ್ ನ ಖ್ಯಾತ ನಟಿ ಸನ್ನಿ ಲಿಯೋನ್ ಉತ್ತರ ಖಂಡದ ರಾಮನಗರ ಜಿಲ್ಲೆಯಲ್ಲಿ ಎಂಟಿವಿ ರಿಯಾಲಿಟಿ ಷೋ ಶೂಟಿಂಗ್ ವೇಳೆ ಪಾಲ್ಗೊಂಡಿದ್ದಾಗ  ಅಸ್ವಸ್ಥ ಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಶೂಟಿಂಗ್ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಉತ್ತರ ಖಂಡದ ಉದಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದ ಬೃಜೇಶ್ ಆಸ್ಪತ್ರೆಯಲ್ಲಿ ಸನ್ನಿ ಲಿಯೋನ್ ಅವರನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 
 
ಇಂಡಿಯನ್ ಎಕ್ಸ್ಪ್ರೆಸ್ ನ ಪತ್ರಿಕೆಯ ವರದಿಯಲ್ಲಿ "ಸನ್ನಿಯು ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.ಈಗ ಅವರ ಮೇಲೆ ನಿಗಾವಹಿಸಲಾಗಿದೆ ಅಲ್ಲದೆ ಅವರು ಕೂಡ ಈಗ ಶೂಟಿಂಗ್ ನ್ನು ಸ್ಥಗೀತಗೊಳಿಸಿದ್ದಾರೆ.ಈಗ ಗುಣಮುಖರಾಗುತ್ತಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.


ಸನ್ನಿ ಲಿಯೋನ್ ಜೊತೆ ಸಹ ನಟ ರಣವಿಜಯ ಸಿಂಗ್ ಸಿಂಘಾ ಅವರು ಸಹ ಉಪಸ್ಥಿತರಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.