ನವದೆಹಲಿ: ಎಸ್ಸಿ/ಎಸ್ಟಿ ನೌಕರರಿಗೆ  ಉದ್ಯೋಗದಲ್ಲಿ ಭಡ್ತಿ ನೀಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಹಲವಾರು ಹೈಕೋರ್ಟ್‌ಗಳ ಆದೇಶ ಹಾಗೂ ಸುಪ್ರೀಂಕೋರ್ಟ್ ಆದೇಶದಿಂದಾಗಿ ಭಡ್ತಿ ಪ್ರಕ್ರಿಯೆ ನಿಂತು ಹೋಗಿದೆ. ಆದರೆ ನಾವು ನಮ್ಮ ನೌಕರರಿಗೆ ಬಡ್ತಿ ನೀಡಬೇಕಾಗಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ನಿಂತು ಹೋದ ಬಡ್ತಿ ಪ್ರಕ್ರಿಯೆಗೆ ಅನುಮತಿ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಆದರ್ಶ ಕುಮಾರ್ ಗೋಯಲ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ವಿಚಾರಣೆ ನಡೆಸಿದ ಬಳಿಕ ಮೀಸಲಾತಿಯ ವಿಚಾರವನ್ನು ಅಂತಿಮವಾಗಿ ಸಾಂವಿಧಾನಿಕ ಪೀಠ ತೀರ್ಮಾನಿಸುವವರೆಗೆ ಎಸ್ ಸಿ/ಎಸ್ ಟಿ ನೌಕರರ ಬಡ್ತಿ ಕೋಟಾ ನೀತಿ ಅನುಸರಿಸುವುದಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿದೆ.


ಈಗಾಗಲೇ ಈ ಬಡ್ತಿ ಮೀಸಲಾತಿಗೆ ಕುರಿತಾಗಿ ದೆಹಲಿ, ಬಾಂಬೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗಳು ಪ್ರತ್ಯೇಕವಾದ ತೀರ್ಪುಗಳನ್ನು ನೀಡಿದೆ, ಇದಲ್ಲದೆ ಸುಪ್ರೀಂಕೋರ್ಟ್ ಸಹ ಈ ಸಂಗತಿ ವಿಭಿನ್ನ ಆದೇಶ ನೀಡಿದೆ ಎಂದು ಕೇಂದ್ರ ಸರ್ಕಾರ ವಿಚಾರಣೆಯ ವೇಳೆ ವಾದಿಸಿತು. ಈ ವಾದವನ್ನು ಆಲಿಸಿದ ನ್ಯಾಯಾಲಯ ಕಾನೂನಿನ ರೀತಿಯಲ್ಲಿ ಎಸ್ ಸಿ/ಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವುದಕ್ಕೆ ಅನುಮತಿ ನೀಡಿದೆ. ಆದರೆ ಮೀಸಲಾತಿ ವಿಚಾರದಲ್ಲಿ ಯಾವ ಕಾನೂನನ್ನು ಅನುಸರಿಸಬೇಕೆಂಬುದರ ಬಗ್ಗೆ ಅದು ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.