ನವದೆಹಲಿ: ತೀವ್ರ ವಾಯುಮಾಲಿನ್ಯವನ್ನು ಎದುರಿಸುತ್ತಿರುವ ದೆಹಲಿ-ಎನ್‌ಸಿಆರ್ ಪ್ರದೇಶದ ಕೋಟ್ಯಂತರ ಜನರ ಜೀವನದ ಪ್ರಶ್ನೆಯಾಗಿದೆ ಮತ್ತು ಅದನ್ನು ತಡೆಯುವಲ್ಲಿ ವಿಫಲವಾದ ಕಾರಣ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.  


COMMERCIAL BREAK
SCROLL TO CONTINUE READING

'ಮಾಲಿನ್ಯದಿಂದಾಗಿ ಜನರು ಈ ರೀತಿ ಸಾಯಲು ನೀವು ಅನುಮತಿ ನೀಡಬಹುದೇ? ದೇಶವನ್ನು 100 ವರ್ಷಗಳ ಹಿಂದಕ್ಕೆ ಹೋಗಲು ನೀವು ಅನುಮತಿಸಬಹುದೇ" ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


'ನಾವು ಇದಕ್ಕೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕಾಗಿದೆ' ಎಂದು ನ್ಯಾಯಪೀಠ ಹೇಳಿದೆ ಮತ್ತು ' ಸರ್ಕಾರದ ಅಧಿಕಾರಿ ವರ್ಗ ಏಕೆ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ? ಎಂದು ರಾಜ್ಯ ಸರ್ಕಾರವನ್ನು ಕೋರ್ಟ್ ತರಾಟೆಗೆ ತಗೆದುಕೊಂಡಿದೆ.ಜನರ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೆ, ಅಧಿಕಾರದಲ್ಲಿರಲು ಯಾವುದೇ ಹಕ್ಕಿಲ್ಲ. ನೀವು ಕಲ್ಯಾಣ ಸರ್ಕಾರದ ಪರಿಕಲ್ಪನೆಯನ್ನು ಮರೆತಿದ್ದೀರಿ.ಬಡ ಜನರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಇದು ತುಂಬಾ ದುರದೃಷ್ಟಕರ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರಳನ್ನೊಳಗೊಂಡ ನ್ಯಾಯಪೀಠ ರಾಜ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದೆ.


ರಾಜ್ಯ ಸರ್ಕಾರಗಳು ರೈತರಿಂದ ಕಳೆಯನ್ನು ಸಂಗ್ರಹಿಸಿ ಖರೀದಿಸಲು ಏಕೆ ಸಾಧ್ಯವಿಲ್ಲ ? ಎಂದು ಅದು ಪ್ರಶ್ನಿಸಿದೆ.ಇದು ಕೋಟ್ಯಂತರ ಜನರ ಜೀವನ ಮತ್ತು ಸಾವಿನ ಪ್ರಶ್ನೆಯಾಗಿದೆ. ಇದಕ್ಕೆ ನಾವು ಸರ್ಕಾರವನ್ನು ಜವಾಬ್ದಾರರನ್ನಾಗಿ ಮಾಡಬೇಕಾಗಿದೆ' ಎಂದು ಕೋರ್ಟ್ ಹೇಳಿದೆ.