ಕೇಂದ್ರ ಸರ್ಕಾರದ ಲಸಿಕಾ ನೀತಿ ಕುರಿತು ಸುಪ್ರೀಂ ಕೋರ್ಟ್ ಗರಂ
45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಉಚಿತ ವ್ಯಾಕ್ಸಿನೇಷನ್ ನೀಡುವ ಮತ್ತು ಅದಕ್ಕಿತ ಕಡಿಮೆ ವಯಸ್ಸಿನವರಿಗೆ ಹಣ ಪಾವತಿಸುವ ಕೇಂದ್ರದ ವ್ಯವಸ್ಥೆಯನ್ನು ಪ್ರೈಮಾ ಫೇಸಿ, ನಿರಂಕುಶ ಮತ್ತು ತರ್ಕಹೀನವಾಗಿದೆ ಎಂದು ಸುಪ್ರೀಂ ಕೋರ್ಟ್ ಗರಂ ಆಗಿದೆ.
ನವದೆಹಲಿ: 45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಉಚಿತ ವ್ಯಾಕ್ಸಿನೇಷನ್ ನೀಡುವ ಮತ್ತು ಅದಕ್ಕಿತ ಕಡಿಮೆ ವಯಸ್ಸಿನವರಿಗೆ ಹಣ ಪಾವತಿಸುವ ಕೇಂದ್ರದ ವ್ಯವಸ್ಥೆಯನ್ನು ಪ್ರೈಮಾ ಫೇಸಿ, ನಿರಂಕುಶ ಮತ್ತು ತರ್ಕಹೀನವಾಗಿದೆ ಎಂದು ಸುಪ್ರೀಂ ಕೋರ್ಟ್ ಗರಂ ಆಗಿದೆ.
ಇದನ್ನೂ ಓದಿ: Sputnik V Vaccines : ಭಾರತಕ್ಕೆ ತಲುಪಿದ 3 ಮಿಲಿಯನ್ ಸ್ಪುಟ್ನಿಕ್ V ಲಸಿಕೆ!
ವ್ಯಾಕ್ಸಿನೇಷನ್ ಸಮಸ್ಯೆಯನ್ನು ಸಂಪೂರ್ಣ ನಿರ್ಣಾಯಕ ಎಂದು ಕರೆದ ನ್ಯಾಯಾಲಯವು,"18-44 ವರ್ಷ ವಯಸ್ಸಿನ ವ್ಯಕ್ತಿಗಳು COVID-19 ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ, ಆದರೆ ದೀರ್ಘಕಾಲದ ಆಸ್ಪತ್ರೆಗೆ ಸೇರಿಸುವುದು ಸೇರಿದಂತೆ ಸೋಂಕಿನ ತೀವ್ರ ಪರಿಣಾಮಗಳಿಂದ ಬಳಲುತ್ತಿದ್ದಾರೆ ಮತ್ತು ದುರದೃಷ್ಟಕರ ಸಂದರ್ಭಗಳಲ್ಲಿ ಸಾವು ಕೂಡ ಸಂಭವಿಸಿತ್ತಿವೆ.
ಇದನ್ನೂ ಓದಿ: ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ಲಸಿಕೆಯನ್ನು ಮಿಶ್ರಣ ಮಾಡುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ
'ಈಗ ಸಾಂಕ್ರಾಮಿಕ ರೋಗದ ಸ್ವರೂಪದಿಂದಾಗಿ, ನಾವು ಈಗ 18-44 ವಯಸ್ಸಿನವರಿಗೆ ಲಸಿಕೆ ಹಾಕಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ, ಆದರೂ ವೈಜ್ಞಾನಿಕ ಆಧಾರದ ಮೇಲೆ ವಿವಿಧ ವಯೋಮಾನದವರ ನಡುವೆ ಆದ್ಯತೆಯನ್ನು ಉಳಿಸಿಕೊಳ್ಳಬಹುದು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈಗ ಭಾರತದಲ್ಲಿ ಮೂರು ಲಸಿಕೆಗಳಿಗೆ ಅನುಮೊದನೆ ನೀಡಲಾಗಿದೆ, ಇದರಲ್ಲಿ ಸಿರಂ ಇನ್ಸ್ಟಿಟ್ಯೂಟ್ ನ ಕೊವಿಶೀಲ್ದ್ (Covishield vaccine) ಹಾಗೂ ಭಾರತ ಬಯೋಟೆಕ್ ನಿರ್ಮಿಸಿರುವ ಕೊವ್ಯಾಕ್ಸಿನ್ ಹಾಗೂ ರಷ್ಯಾದ ಸ್ಪುಟ್ನಿಕ್ ಗೆ ಚಾಲ್ತಿಯಲ್ಲಿವೆ. ಸ್ಪುಟ್ನಿಕ್ ಇನ್ನೂ ಎಲ್ಲಾ ಆಸ್ಪತ್ರೆಗೆಗಳಿಗೆ ಬರಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ