ನವದೆಹಲಿ: ಪುಣೆ ಮೂಲದ ದಂಪತಿಗಳು ಮುಸ್ಲಿಂ ಮಹಿಳೆಯರಿಗೆ ಮಸೀದಿಯೊಳಗೆ  ಪ್ರವೇಶಿಸಲು ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಅನುಮತಿ  ಕೇಳಿದ ನಂತರ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಮಹಿಳಾ ಆಯೋಗ, ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಗೆ ನೋಟಿಸ್ ಜಾರಿ ಮಾಡಿದೆ. 


COMMERCIAL BREAK
SCROLL TO CONTINUE READING

ಯಸ್ಮೀನ್ ಝುಬರ್ ಅಹಮದ್ ಪೀರ್ಜಾಡೆ ಮತ್ತು ಅವರ ಪತಿ ಜುಬರ್ ಅಹ್ಮದ್ ನಜೀರ್ ಅಹ್ಮದ್ ಪೀರ್ಜಾಡೆ ಎನ್ನುವವರು ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ  "ಖುರಾನ್ ಮತ್ತು ಹದಿತ್ಗಳಲ್ಲಿ ಲಿಂಗದ ಆಧಾರದ ಮೇಲೆ ಪ್ರತ್ಯೇಕತೆ ಇಲ್ಲ" ಎಂದು ವಾದಿಸಿದರು. ಮಹಿಳೆಗೆ ಹೆಣ್ಣಿನ ಪ್ರವೇಶವನ್ನು ನಿಷೇಧಿಸುವ ಕ್ರಮವು ನಿರರ್ಥಕ ಮತ್ತು ಅಸಂವಿಧಾನಿಕ ಇಂತಹ  ನಿಯಮಗಳು ವ್ಯಕ್ತಿಯ ಮೂಲಭೂತ ಹಕ್ಕುಗಳಾದ ವಿಧಿ 14, 15, 21 ಮತ್ತು 25 ನ್ನು ಉಲ್ಲಂಘಿಸಿವೆ ಎಂದು ಅವರು ವಾದಿಸಿದ್ದಾರೆ.


ನ್ಯಾಯಮೂರ್ತಿಗಳಾದ ಎಸ್.ಎ. ಬ್ಬಾಬ್ಡೆ ಮತ್ತು ಎಸ್.ಅಬ್ದುಲ್ ನಝೀರ್ ಅವರ ಪೀಠವು ಕಲಂ14 ರ ರಕ್ಷಣೆಗೆ ಎಲ್ಲರಿಗೂ ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತದೆಯೇ ಎಂದು ತಿಳಿದುಕೊಳ್ಳಲು ಬಯಸಿದೆ. ಮಸೀದಿ, ದೇವಸ್ಥಾನ ಅಥವಾ ಚರ್ಚ್ ಅನ್ನು ರಾಜ್ಯದ ಅಡಿಯಲ್ಲಿ ಪರಿಗಣಿಸುವುದಾದಲ್ಲಿ ಕಲಂ 14 ರ ಪ್ರಕಾರ ಸರ್ಕಾರದ ಕ್ರಮ ಏನೆಂದು ಸುಪ್ರೀಂ ಕೋರ್ಟ್ ಕೇಳಿದೆ.


ಅರ್ಜಿದಾರರಿಗೆ ಕೌನ್ಸಿಲ್ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ ಎಂದು ಪೀಠ ಹೇಳಿರುವುದಲ್ಲದೆ,ಈಗ ವಿಚಾರಣೆಯನ್ನು ಕೈಗೊಳ್ಳಲು ಪ್ರಮುಖ ಕಾರಣ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಎಂದು ಪೀಠ ಅಭಿಪ್ರಾಯಪಟ್ಟಿದೆ. ಶಬರಿಮಲೆ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಉದಾಹರಿಸುತ್ತಾ, "ಮಹಿಳೆಯರಿಗೆ ಆರಾಧನೆ  ಹಕ್ಕುಗಳನ್ನು ನಿರಾಕರಿಸಲು  ಧರ್ಮವನ್ನು ಮಾರ್ಗವನ್ನಾಗಿ ಬಳಸಬಾರದು" ಎಂದು ನ್ಯಾಯಾಲಯ ಹೇಳಿದೆ, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್, ಸಿಂಗಾಪುರ್.ಯುಎಸ್, ಯುಕೆಗಳಲ್ಲಿ ಮಸೀದಿಗಳಲ್ಲಿ ಮಹಿಳೆಯರಿಗೆ ಅನುಮತಿ ನೀಡಲಾಗಿದೆ ಎಂದು ಅರ್ಜಿದಾರರು ತಿಳಿಸಿದೆ. 


ಮಹಿಳೆಯರನ್ನು ಮಸೀದಿಗೆ ಪ್ರವೇಶಿಸುವ ನಿಷೇಧದ ನಿಯಮಾವಳಿಗಳು ಸಂವಿಧಾನದ ಅಡಿಯಲ್ಲಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.