ತಾಜ್ ಮಹಲ್ ಸಂರಕ್ಷಣೆಗೆ `ಸುಪ್ರೀಂ` ಸೂಚನೆ
ನವದೆಹಲಿ: ವಿಶ್ವವಿಖ್ಯಾತ ತಾಜ್ ಮಹಲ್ ಸ್ಮಾರಕದ ಸಂರಕ್ಷಣೆಗೆ ಸೂಕ್ತವಾದ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸುಪ್ರಿಂ ಕೋರ್ಟ್ ಭಾರತೀಯ ಪ್ರಾಚ್ಯವಸ್ತು ಇಲಾಖೆಗೆ ಸೂಚನೆ ನೀಡಿದೆ.
ಇದೆ ವರ್ಷದ ಪ್ರಾರಂಭದಲ್ಲಿ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ತಾಜ್ ಮಹಲ್ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ಉತ್ತರಪ್ರದೇಶದ ಸರ್ಕಾರಕ್ಕೆ ಒಂದು ಸಮಗ್ರ ದೃಷ್ಟಿಕೋನ ಹೊಂದಿರುವ ದಾಖಲೆಯನ್ನು ಒದಗಿಸಬೇಕೆಂದು ಅದು ಕೇಳಿಕೊಂಡಿತ್ತು.
ಈ ಐತಿಹಾಸಿಕ ಸ್ಮಾರಕದ ರಕ್ಷಣೆಗಾಗಿ ಪರಿಸರವಾದಿ ಎಮ್.ಸಿ.ಮೆಹ್ತಾ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಾಜ್ ಹತ್ತಿರವಿರುವ ಕಾರ್ ಪಾರ್ಕಿಂಗ್ ಕೆಡುವಲು ಆದೇಶಿಸಿದೆ. ಇದೇ ಸಂದರ್ಭದಲ್ಲಿ 17 ನೇ ಶತಮಾನದ ಮೊಘಲ್ ಭವ್ಯ ಕಟ್ಟಡವನ್ನು ರಕ್ಷಿಸಲು ಸಮಗ್ರ ಕ್ರಮ ಯೋಜನೆಯನ್ನು ರೂಪಿಸಲು ತಾಜ್ ಟ್ರಾಪಜಿಯಾಮ್ ವಲಯ (ಟಿಟಿಝಡ್) ಪ್ರಾಧಿಕಾರಕ್ಕೆ ಆದೇಶ ನೀಡಿದೆ.