Facebook-WhatsAppಗೆ ಸುಪ್ರೀಂ ತಪರಾಕಿ, ಜನರ Privacy ಬೆಲೆ 3 ಟ್ರಿಲಿಯನ್ ಗೂ ಅಧಿಕ
WhatsApp Privacy Policy:ಜನರ ಸಂದೇಶಗಳನ್ನು ಓದಲಾಗುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಸುಪ್ರೀಂ ಕೋರ್ಟ್ ವಾಟ್ಸಾಪ್ / ಫೇಸ್ಬುಕ್ಗೆ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮುಂದಿನ ನಾಲ್ಕು ವಾರಗಳ ನಂತರ ನಡೆಯಲಿದೆ. ಯುರೋಪ್ ಮತ್ತು ಭಾರತಕ್ಕೆ ವಿಭಿನ್ನ ಮಾಪಕಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿಯಲ್ಲಿ ಅರ್ಜಿದಾರದು ವಾದಿಸಿದ್ದರು. ಭಾರತದಲ್ಲಿ ಡೇಟಾ ಸಂರಕ್ಷಣಾ ಕಾಯ್ದೆ ಬರುವ ಮೊದಲೇ ವಾಟ್ಸ್ ಆಪ್ ತನ್ನ ನೂತನ ನೀತಿ ಪ್ರಕಟಿಸಿದೆ ಎಂದು ಅರ್ಜಿದಾರರು ಸುಪ್ರೀಂಗೆ ತಿಳಿಸಿದ್ದಾರೆ.
ನವದೆಹಲಿ: WhatsApp Privacy Policy - ವಾಟ್ಸಾಪ್‌ನ ಹೊಸ ಗೌಪ್ಯತಾ ನೀತಿಯ ಕುರಿತು ಎದ್ದಿರುವ ವಿವಾದದ ನಡುವೆ ಸುಪ್ರೀಂ ಕೋರ್ಟ್ ಇಂದು ಫೇಸ್‌ಬುಕ್ ಮತ್ತು ವಾಟ್ಸಾಪ್ ಗೆ ತಪರಾಕಿ ಹಾಕಿದೆ. ಯುರೋಪ್ ಮತ್ತು ಭಾರತದಲ್ಲಿನ ಗೌಪ್ಯತೆ ನೀತಿಯ ಬಗ್ಗೆ ಸುಪ್ರೀಂ ಕೋರ್ಟ್ ( ಇದನ್ನು ಓದಿ-ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ನಾಯಕ'-ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂ.ಆರ್.ಶಾ ವಿಚಾರಣೆಯ ವೇಳೆ ವಾಟ್ಸ್ ಆಪ್/ ಫೇಸ್ಬುಕ್ (Facebook) ಅನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಪೀಠ " ನೀವು 2 ಅಥವಾ 3 ಟ್ರಿಲಿಯನ್ ಮೊತ್ತದ ಕಂಪನಿಯಾಗಿರಬಹುದು, ಆದರೆ, ಜನರಿಗೆ ಅವರ ಖಾಸಗಿತನತ್ವ ಅದಕ್ಕಿಂತಲೂ ಹೆಚ್ಚಾಗಿದೆ ಎಂದು ಭಾವಿಸುತ್ತಾರೆ ಹಾಗೂ ಅದು ಅವರ ಹಕ್ಕಾಗಿದೆ" ಎಂದು ಹೇಳಿದೆ. ಯುರೋಪ್ ಹಾಗೂ ಭಾರತದಲ್ಲಿ ಭಿನ್ನ ಭಿನ್ನ ಮಾನದಂಡಗಳನ್ನು ಅನುಸರಿಸಲಾಗಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಭಾರತದಲ್ಲಿ ಶೀಘ್ರದಲ್ಲಿಯೇ ದತಾಂಶ ಸಂರಕ್ಷಣೆಯ ಕಾನೂನು ಜಾರಿಗೆ ಬರಲಿದೆ. ಅದರ ದಾರಿ ಕಾಯದೆ ವಾಟ್ಸ್ ಆಪ್ (Whatsapp) ತನ್ನ ನೂತನ ನೀತಿ ಪ್ರಕಟಿಸಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ವಾಟ್ಸ್ ಆಪ್ ನ ನೂತನ ಗೌಪ್ಯತಾ ನೀತಿಗೆ (WhatsApp New Privacy Policy 2021) ಸಂಬಂಧಿಸಿದ ಪ್ರಕರಣ ಇದಾಗಿದ್ದು, ವಾಟ್ ಆಪ್ ನ ನೂತನ ಗೌಪ್ಯತಾ ನೀತಿ ಜನವರಿ 5 ರಂದು ಪ್ರಕಟಗೊಂಡಿತ್ತು. ಇದಾದ ಬಳಿಕ ವಾಟ್ಸ್ ಆಪ್ ಬಳಕೆದಾರರು ಮುನಿಸಿಕೊಂಡಿದ್ದಾರೆ. ವಾಟ್ಸ್ ಆಪ್ ತನ್ನ ನೂತನ ಗೌಪ್ಯತಾ ನೀತಿ ಪ್ರಕಟಿಸಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ವೇದಿಕೆಯನ್ನು ತೊರೆದು ಸಿಗ್ನಲ್ ಹಾಗೂ ಟೆಲಿಗ್ರಾಂ ಆಪ್ ಗೆ ಸೇರಿಕೊಂಡಿದ್ದಾರೆ. ವಾಟ್ಸ್ ಆಪ್ ನ ನೂತನ ಪ್ರೈವಸಿ ಪಾಲಸಿಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನಾಗರಿಕರು, ಇದು 'ರೈಟ್ ಟು ಪ್ರೈವೆಸಿ ' (Right To Privacy) ಹಕ್ಕಿನ ಉಲ್ಲಂಘನೆಯಾಗಿದೆ. ಇದಾದ ಬಳಿಕ ವಾಟ್ಸ್ಆಪ್ ತನ್ನ ಪ್ರೈವಸಿ ಪಾಲಸಿಯನ್ನು ಮೇ 15, 2021 ರವರೆಗೆ ತಡೆ ನೀಡಿದೆ. ಇದನ್ನು ಓದಿ-NEET ಪರೀಕ್ಷೆಯಲ್ಲಿ ಫೆಲಾದ್ರೆ ಚಿಂತೆ ಬೇಡ, ಪ್ರಕಟಗೊಂಡಿದೆ Supreme Court ಮಹತ್ವದ ತೀರ್ಪು ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.