ನವದೆಹಲಿ: ಶಾರದಾ ಚಿಟ್‌ಫಂಡ್ ಹಗರಣದ ತನಿಖೆಯ ವಿಚಾರವಾಗಿ ಸಿಬಿಐ ಎದುರು ಹಾಜರಾಗಿ ಸಹಕಾರ ನೀಡಬೇಕೆಂದು ಸುಪ್ರೀಂಕೋರ್ಟ್ ಕೋಲ್ಕತ ಪೊಲೀಸ್ ಹೈಕಮಿಷನರ್‌ ರಾಜೀವ್ ಕುಮಾರ್ ಗೆ  ಸೂಚನೆ ನೀಡಿದೆ, ಇದರ ಜೊತೆಗೆ ಕುಮಾರ್ ಅವರನ್ನು ಬಂಧಿಸ ಕೂಡದು ಎಂದು ಸಿಬಿಐಗೆ ಸಲಹೆ ನೀಡಿದೆ.


COMMERCIAL BREAK
SCROLL TO CONTINUE READING

ಸಿಬಿಐ ಮತ್ತು ಮಮತಾ ಬ್ಯಾನರ್ಜೀ ನಡುವೆ ನಡೆದಿದ್ದ ಸಮರ ಸುಪ್ರೀಕೋರ್ಟ್ ವರೆಗೂ ತಲುಪಿತ್ತು ಈಗ ಸುಪ್ರೀಂ ಆದೇಶ ನೀಡಿರುವ ಹಿನ್ನಲೆಯಲ್ಲಿ ಶಾರದ ಚಿಟ್ ಫಂಡ್ ಹಗರಣದ ತನಿಖೆ ವಿಚಾರ ಈಗ ಮತ್ತೊಮ್ಮೆ ಕೂತೂಹಲ ಘಟ್ಟಕ್ಕೆ ತಲುಪಿದೆ.



ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್ "ಸಿಬಿಐ ತನಿಖೆಗೆ ಪೂರ್ಣ ಸಹಕಾರ ಕೊಡುವಂತೆ ಕೊಲ್ಕತ್ತಾ ಹೈ ಕಮಿಶನರ್ ಗೆ ಸೂಚನೆ ನೀಡುತ್ತೇವೆ,ಇದರ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸಹ ಕೈಗೊಳ್ಳುತ್ತೇವೆ ಎಂದು ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.