ನವದೆಹಲಿ: ದೇಶದ ಎಲ್ಲ ದೇವಸ್ಥಾನ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡಬೇಕೆಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. 


COMMERCIAL BREAK
SCROLL TO CONTINUE READING

ಪುರಿ ಜಗನಾಥ್ ದೇವಸ್ಥಾನದಲ್ಲಿ ಸ್ವಚ್ಚತೆ ಮತ್ತು ನಿರ್ವಹಣೆ ವಿಚಾರವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್, ಇನ್ನು ಮುಂದೆ ದೇಶದ ಎಲ್ಲ ಧಾರ್ಮಿಕ ಸ್ಥಳಗಳಾದ  ದೇವಸ್ಥಾನ,ಮಸೀದಿ, ಚರ್ಚ್,ಮತ್ತು ಗುರುದ್ವಾರಗಳು ಮತ್ತು ಇತರ ಚಾರಿಟಿ ಸಂಸ್ಥೆಗಳು ಸ್ವಚ್ಚತೆ ಮತ್ತು ಉತ್ತಮ ನಿರ್ವಹಣೆಯನ್ನು ಪಾಲಿಸಬೇಕೆಂದು ತೀರ್ಪಿನಲ್ಲಿ ತಿಳಿಸಿದೆ.ಅಲ್ಲದೆ ಈ ಎಲ್ಲ ದೇವಸ್ಥಾನಗಳ ನಿರ್ವಹಣೆ ವಿಚಾರವನ್ನು ಜಿಲ್ಲ್ಲಾ ನ್ಯಾಯಾಲಯಗಳು ವಹಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಎಲ್ಲ ವರದಿಯನ್ನು ಆಯಾ ಹೈಕೋರ್ಟ್ ಗಳಿಗೆ ಸಲ್ಲಿಸಬೇಕು ಮತ್ತು ಆ ವರದಿ ಆಧಾರದ ಮೇಲೆ ನ್ಯಾಯಾಂಗ ನಿರ್ಧಾರವನ್ನು ಕೈಗೊಳ್ಳಬೇಕೆಂದು ಸುಪ್ರಿಂಕೋರ್ಟ್ ತಿಳಿಸಿದೆ. 


ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು  ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ಮತ್ತು ಎಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠವು ನಡೆಸಿ ಈ ಅಂತಿಮ ತೀರ್ಪನ್ನು ನೀಡಿದೆ. ಈ ವಿಚಾರವಾಗಿ ಮುಂದಿನ ವಿಚಾರಣೆ  ಸೆಪ್ಟೆಂಬರ್ 5 ರಂದು ನಡೆಯಲಿದೆ ಎನ್ನಲಾಗಿದೆ.ಆದ್ದರಿಂದ ಕೇಂದ್ರ ಮತ್ತು ನ್ಯಾಯಾಂಗ ಸಮಿತಿಯು ಜಗನಾಥ್ ದೇವಸ್ಥಾನದ ವಿಚಾರವಾಗಿ ಅಂತಿಮ ವರದಿಯನ್ನು ಅಗಸ್ಟ್ 31 ರ ಒಳಗಾಗಿ ಸಲ್ಲಿಸಬೇಕೆಂದು ತಿಳಿಸಿದೆ.