ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ ಲಿಂಕ್ ಮಾಡದ ರಾಜ್ಯಗಳಿಗೆ `ಸುಪ್ರೀಂ` ದಂಡ
ಸುಪ್ರೀಂಕೋರ್ಟ್ ಈಗ ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ ಲಿಂಕ್ ಮಾಡದ ರಾಜ್ಯಗಳ ಮೇಲೆ ದಂಡ ವಿದಿಸಿದೆ.
ನವದೆಹಲಿ: ಸುಪ್ರೀಂಕೋರ್ಟ್ ಈಗ ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ ಲಿಂಕ್ ಮಾಡದ ರಾಜ್ಯಗಳ ಮೇಲೆ ದಂಡ ವಿದಿಸಿದೆ.
ಈ ಸರ್ಕಾರಿ ಸ್ವಾಮ್ಯದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ ಲಿಂಕ್ ಮಾಡುವಲ್ಲಿ ಸುಪ್ರೀಂಕೋರ್ಟ್ ಆಂಧ್ರಪ್ರದೇಶ,ಅರುಣಾಚಲ ಪ್ರದೇಶ,ಮೇಘಾಲಯ, ಒಡಿಶಾ ಮತ್ತು ಜಮ್ಮು ಮತ್ತು ಕಾಶ್ಮೀರಗಳಿಗೆ 1 ಲಕ್ಷ ರೂ. ಮತ್ತು ದೆಹಲಿ ರೂ 2 ಲಕ್ಷ ರೂ ದಂಡವನ್ನು ಸುಪ್ರೀಂಕೋರ್ಟ್ ವಿಧಿಸಿದೆ.
ಬಿಸಿಯೂಟ ಯೋಜನೆ ಈಗ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿದೆ, ಅದನ್ನು ಆನ್ ಲೈನ್ ಗೆ ಲಿಂಕ್ ಮಾಡಬೇಕೆಂದು ಸೂಚಿಸಲಾಗಿತ್ತು ಆದರೆ ಇದನ್ನು ಜಾರಿಗೆ ತರುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಸುಪ್ರೀಂ ಈಗ ದಂಡ ವಿಧಿಸಿದೆ.