ನವದೆಹಲಿ: 'ಚರ್ಮದಿಂದ ಚರ್ಮಕ್ಕೆ ಸಂಪರ್ಕ ಆಗದ ಹೊರತು ಅದನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುವುದಿಲ್ಲ' ಎಂದು ಬಾಂಬೆ ಹೈ ಕೋರ್ಟ್ ನೀಡಿದ್ದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ಇದಲ್ಲದೆ ಈ ಪ್ರಕರಣದಲ್ಲಿ ಆರೋಪಿಗಳ ಖುಲಾಸೆಗೊಳಿಸಿರುವ ಆದೇಶಕ್ಕೂ ಕೂಡ ಸುಪ್ರೀಂ (Supreme Court) ತಡೆ ನೀಡಿದೆ. ಈ ಕುರಿತು ತೀರ್ಪು ಪ್ರಕಟಿಸಿದ್ದ ಬಾಂಬೆ ಹೈಕೋರ್ಟ್ ನ ನಾಗಪುರ್ ಪೀಠ, "ಚರ್ಮಕ್ಕೆ ಚರ್ಮ ಸ್ಪರ್ಸಿಸದೆಯೇ (Skin To Skin Contact)" ಅಪ್ರಾಪ್ತೆಯ ಸ್ಥನಗಳನ್ನು ಸ್ಪರ್ಶಿಸುವುದು ಲೈಂಗಿಕ ಕಿರುಕುಳದ ವ್ಯಾಖ್ಯೆಯಲ್ಲಿ ಬರುವುದಿಲ್ಲ ಎಂದು ಹೇಳಿತ್ತು. 


COMMERCIAL BREAK
SCROLL TO CONTINUE READING

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂ (Supreme Court) ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಸುಪ್ರೀಂ ಪೀಠ, ಎರಡು ವಾರದೊಳಗೆ ತಮ್ಮ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿದೆ.


Gratuityಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದೆ ಈ ಮಹತ್ವದ ತೀರ್ಪು


ಪ್ರಾಸಿಕ್ಯೂಷನ್ ಹಾಗೂ ಅಪ್ರಾಪ್ತ ಬಾಲಕಿ ನ್ಯಾಯಾಲಯದಲ್ಲಿ ನೀಡಿದ ಸಾಕ್ಷ್ಯದ ಪ್ರಕಾರ, 2016 ರ ಡಿಸೆಂಬರ್‌ನಲ್ಲಿ ಆರೋಪಿ ಸತೀಶ್ ಅವರು ಆಹಾರ ಪದಾರ್ಥಗಳನ್ನು ನೀಡುವ ನೆಪದಲ್ಲಿ ಬಾಲಕಿಯನ್ನು ನಾಗ್ಪುರದ ತನ್ನ ಮನೆಗೆ ಕರೆದೊಯ್ದಿದ್ದ. ತನ್ನ ಮನೆಗೆ ಕರೆದೊಯ್ದ ಸತೀಶ್, ಅವಳ ಎದೆಯನ್ನು ಹಿಡಿದು ಅವಳನ್ನು ನಿರ್ವಸ್ತ್ರಳನ್ನಾಗಿಸಲು ಪ್ರಯತ್ನಿಸಿದ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲಿಸಿದೆ.


ಇದನ್ನು ಓದಿ- ನಿರ್ಭಯಾ ಪ್ರಕರಣ: ನೀವು ಮಾನಸಿಕವಾಗಿ ಸ್ವಸ್ಥರಾಗಿದ್ದೀರಿ ಎಂದು ಹೇಳಿ ವಿನಯ್ ಅರ್ಜಿ ತಿರಸ್ಕರಿಸಿದ SC


ಬಾಲಕಿಯನ್ನು ನಿರ್ವಸ್ತ್ರಳನ್ನಾಗಿ ಮಾಡದೆಯೇ ಆರೋಪಿ ಆಕೆಯ ಎದೆಗೆ ಸ್ಪರ್ಶಿಸಲು ಪ್ರಯತ್ನಿಸಿದ್ದ. ಆದ್ದರಿಂದ ಅಪರಾಧವನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ಶೀಲಕ್ಕೆ ಧಕ್ಕೆ ತಂದ ಅಪರಾಧವಾಗಿದೆ. ಸೆಕ್ಷನ್ 354 ರ ಅಡಿಯಲ್ಲಿ ಕನಿಷ್ಠ ಶಿಕ್ಷೆ ಒಂದು ವರ್ಷ ಜೈಲು ಶಿಕ್ಷೆಯಾಗಿದ್ದರೆ, ಪೋಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯಕ್ಕೆ ಕನಿಷ್ಠ ಶಿಕ್ಷೆ ಮೂರು ವರ್ಷ ಜೈಲು ಶಿಕ್ಷೆ. ಪೋಕ್ಸೊ ಕಾಯ್ದೆ ಮತ್ತು IPC ಸೆಕ್ಷನ್ 354 ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಈ ಎರಡೂ ಶಿಕ್ಷೆಗಳು ಏಕಕಾಲಕ್ಕೆ ನಡೆಯಬೇಕಿದೆ.


ಇದನ್ನು ಓದಿ- ಶಾಹೀನ್ ಬಾಗ್ ಪ್ರತಿಭಟನೆಯನ್ನು ಪ್ರಶ್ನಿಸಿದ ಸರ್ವೋಚ್ಛ ನ್ಯಾಯಾಲಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.