Gratuityಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದೆ ಈ ಮಹತ್ವದ ತೀರ್ಪು

 Gratuityಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. 

Written by - Nitin Tabib | Last Updated : Dec 27, 2020, 12:09 PM IST
  • Gratuityಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.
  • ನೌಕರ ಕಂಪನಿಯ ಯಾವುದೇ ರೀತಿಯ ಹಣ ಬಾಕಿ ಉಳಿಸಿಕೊಂಡಿದ್ದರೆ ಆತನ ಗ್ರ್ಯಾಚುಟಿ ತಡೆಹಿಡಿಯಬಹುದು.
  • ನ್ಯಾಯಮೂರ್ತಿ ಕೌಲ್ ನೇತೃತ್ವದ ತ್ರಿಸದಸ್ಯಪೀಠ ಈ ಆದೇಶ ನೀಡಿದೆ.
Gratuityಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದೆ ಈ ಮಹತ್ವದ ತೀರ್ಪು title=
Gratuity(File Image)

ನವದೆಹಲಿ: Gratuityಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಹೌದು, ಯಾವುದೇ ಓರ್ವ ನೌಕರ ಕಂಪನಿಯಿಂದ ಸಾಲ ಪಡೆದು ಮರುಪಾವತಿಸದೆ ಇದ್ದ ಸಂದರ್ಭದಲ್ಲಿ ಆತನ ಗ್ರ್ಯಾಚ್ಯುಟಿ ಹಣವನ್ನು ತಡೆಹಿಡಿಯಬಹುದು ಅಥವಾ ಜಪ್ತಿ ಮಾಡಬಹುದು. ಈ ಕುರಿತು ತೀರ್ಪು ಪ್ರಕಟಿಸಿರುವ ನ್ಯಾ. ಸಂಜಯ್ ಕೌಲ್ ನೇತೃತ್ವದ ನ್ಯಾಯಪೀಠ, ಯಾವುದೇ  ಉದ್ಯೋಗಿಗೆ ಗ್ರ್ಯಾಚ್ಯುಟಿಯಿಂದ ದಂಡ ವಿಧಿಸುವುದು-ನಿವೃತ್ತಿಯ ನಂತರ ಸರ್ಕಾರಿ ವಸತಿಗೃಹದಲ್ಲಿ ಉಳಿಯಲು ದಂಡ ಸೇರಿದಂತೆ ಬಾಡಿಗೆ ಸಂಗ್ರಹಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ನೌಕರರು ಒಂದು ವೇಳೆ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯದವರೆಗೆ ನಿವೇಶವನ್ನು ಆಕ್ರಮಿಸಿಕೊಂಡಿದ್ದಾರೆ ಬಾಡಿಗೆಗೆ ದಂಡ ವಿಧಿಸಬಹುದು. ನೌಕರ ಒಂದು ವೇಳೆ ಸಾಲ ಮರುಪಾವತಿಸದೆ ಇದ್ದಲ್ಲಿ ಆತನ ಗ್ರ್ಯಾಚುಟಿ ಮೊತ್ತದಿಂದ ಸಾಲದ ರಾಶಿಯನ್ನು ಕಡಿತಗೊಳಿಸಬಹುದು ಎಂದು ಪೀಠ ಹೇಳಿದೆ. ನ್ಯಾಯಾಲಯದ ಈ ಬೆಂಚ್ ನಲ್ಲಿ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಹಾಗೂ ಹೃಷಿಕೇಶ್ ರಾಯ್ ಕೂಡ ಶಾಮೀಲಾಗಿದ್ದಾರೆ.

ಇದನ್ನು ಓದಿ- ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ರೈತರ ಹೋರಾಟ ಮುಂದುವರೆಯಲಿ: ಸುಪ್ರೀಂ ಕೋರ್ಟ್​

ಕಳೆದ ವಾರವಷ್ಟೇ ಹೊರಡಿಸಲಾಗಿರುವ ಈ ಆದೇಶವು ಕಾನೂನಿನ ಒಂದು ವಿವಾದಾತ್ಮಕ ಅಂಶವೊಂದನ್ನು ಬಗೆಹರಿಸುತ್ತದೆ. ಏಕೆಂದರೆ ಈ ಹಿಂದೆ ಇಂತಹುದೇ ಒಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದಕ್ಕೆ ವಿರುದ್ಧವಾದ ತೀರ್ಪು ಪ್ರಕಟಿಸಿತ್ತು. 2017 ರಲ್ಲಿ ಸುಪ್ರೀಂ (Supreme Court) ವಿಭಾಗೀಯ ಪೀಠ ನಿವೃತ್ತಿಯ ನಂತರ ಅಧಿಕೃತ ಕ್ವಾಟರ್ಸ್ ನಲ್ಲಿ ಉಳಿದುಕೊಂಡಿದ್ದರಿಂದ ನೌಕರನ ಗ್ರ್ಯಾಚುಟಿ ಜಪ್ತಿ ಮಾಡುವುದರ ವಿರುದ್ಧ ಪ್ರತಿಕೂಲ ತೀರ್ಪು ಪ್ರಕಟಿಸಿ, ಗ್ರ್ಯಾಚುಟಿಯನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತ್ತು ಹಾಗೂ ಕೇವಲ ಸಾಮಾನ್ಯ ಬಾಡಿಗೆಯನ್ನು ಮಾತ್ರ ವಿಧಿಸಲು ಹೇಳಿ ದಂಡ ವಿಧಿಸಬಾರದು ಎಂದಿತ್ತು.

ಇದನ್ನು ಓದಿ- ಕೊರೊನಾ ಇರುವ ಮನೆಗಳ ಹೊರಗೆ ಪೋಸ್ಟರ್ ಅಂಟಿಸುವುದನ್ನು ನಿಲ್ಲಿಸಲು ಸುಪ್ರಿಂ ಸೂಚನೆ

ಆದರೆ, ನ್ಯಾಯಮೂರ್ತಿ ಕೌಲ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠವು 2017 ರ ಆದೇಶವನ್ನು ಅವಲಂಬಿಸಿ ಯಾವುಎ ತೀರ್ಪು ಪ್ರಕಟಿಸುವುದು ಉಚಿತವಲ್ಲ ಎಂಬುದನ್ನು ಒಪ್ಪಿಕೊಂಡಿದ್ದು,  ಅದೊಂದು ನಿರ್ದಿಷ್ಟ ಸಂಗತಿಗಳ ಮೇಲಿನ ಆದೇಶವಾಗಿತ್ತು ಎಂದಿದೆ.  2017 ರ ಆದೇಶವನ್ನು ಪೂರ್ವನಿದರ್ಶನವೆಂದು  ಈ ಪ್ರಕರಣದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

2005ರಲ್ಲಿ ಸುಪ್ರೀಂ ಕೋರ್ಟ್ ನ ಮಹತ್ವದ ಆದೇಶವೊಂದನ್ನು ಎತ್ತಿ ಹಿಡಿದಿರುವ ಪೀಠ ಸಂಬಂಧಪಟ್ಟ ನೌಕರರ ಒಪ್ಪಿಗೆಯಿಲ್ಲದೆ ಬಾಕಿ ಹಣವನ್ನು ಗ್ರಾಚ್ಯುಟಿಯಿಂದ ವಸೂಲಿ ಮಾಡಬಹುದು ಎಂದು ಹೇಳಿದೆ.

ಇದನ್ನು ಓದಿ- ಹೆಚ್ಚಾಗುತ್ತಿರುವ Covid-19 ಪ್ರಕರಣಗಳಿಗೆ ಅಸಮಾಧಾನ ವ್ಯಕ್ತಪಡಿಸಿದ SC ಕೇಂದ್ರ ಸರ್ಕಾರಕ್ಕೆ ಹೇಳಿದ್ದೇನು?

ಪ್ರಸ್ತುತ ಪ್ರಕರಣ ಇತ್ತೀಚಿಗೆ ಜಾರ್ಖಂಡ್ ಹೈಕೋರ್ಟ್‌ ನೀಡಿದ್ದ ಒಂದು ಆದೇಶದಿಂದ ಉದ್ಭವಿಸಿದೆ.  ಈ ಪ್ರಕರಣದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಸೈಲ್) ತನ್ನ ನೌಕರನಿಂದ  1.95 ಲಕ್ಷ ರೂ.ಗಳ ದಂಡವನ್ನು ವಸೂಲಿ ಮಾಡಲು ಯತ್ನಿಸಿತ್ತು. ಉದ್ಯೋಗಿ 2016 ರಲ್ಲಿ ನಿವೃತ್ತಿಯಾದ ನಂತರವೂ ಕೂಡ ಬೊಕಾರೊದಲ್ಲಿ ಕಂಪನಿಯ  ಅಧಿಕೃತ ವಸತಿಗೃಹದಲ್ಲಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News