ರೇಪ್ ಸಂತ್ರಸ್ತೆಯ ಕುಂಡಲಿ ವರದಿ ಕೇಳಿದ ಹೈಕೋರ್ಟ್, ಹುಡುಗಿ ಮಾಂಗಲಿಕಳಾಗಿದ್ದಾಳೆ ತಿಳಿಯುವ ಅವಶ್ಯಕತೆ ಇಲ್ಲ ಎಂದ ಸುಪ್ರೀಂ
Supreme Court: ವಿವಾಹ ಮಾಡಿಕೊಳ್ಳುವುದಾಗಿ ನಂಬಿಸಿ ಸಂಬಂಧ ಬೆಳೆಸಿದ್ದಕ್ಕಾಗಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವೇಳೆ ಆರೋಪಿ ಯುವತಿಯನ್ನು ಮಂಗಳ ದೋಷ ಪೀಡಿತೆ ಎಂದು ಕರೆದು ಮದುವೆಯಾಗಲು ನಿರಾಕರಿಸಿದ್ದಾನೆ.
Supreme Court: ಅತ್ಯಾಚಾರ ಆರೋಪಿಯ ಜಾಮೀನಿನ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ವಿಚಿತ್ರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಸಂತ್ರಸ್ತೆಯ ಜಾತಕದ ಬಗ್ಗೆ ಜ್ಯೋತಿಷ್ಯ ವರದಿಯನ್ನು ಹೈಕೋರ್ಟ್ ಕೇಳಿತ್ತು. ಇದು ಅನಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶನಿವಾರ (ಜೂ.3) ಈ ಕುರಿತು ನಡೆದ ವಿಶೇಷ ವಿಚಾರಣೆಯಲ್ಲಿ ರಜಾಕಾಲದ ಪೀಠ, ‘ಸಂತ್ರಸ್ತ ಮಹಿಳೆ ಮಂಗಳಿಯೋ ಅಲ್ಲವೋ ಎಂಬುದು ತಿಳಿಯಬೇಕಿಲ್ಲ, ವಾಸ್ತವಾಂಶದ ಆಧಾರದ ಮೇಲೆ ಜಾಮೀನು ಕುರಿತು ಹೈಕೋರ್ಟ್ ತೀರ್ಮಾನ ಕೈಗೊಳ್ಳಬೇಕು’ ಎಂದು ಅದು ಹೇಳಿದೆ.
ಅತ್ಯಾಚಾರ ಪ್ರಕರಣ ದಾಖಲಾಗಿದೆ. ಹುಡುಗಿ ಮಂಗಳಿ ಎಂದು ಹೇಳಿ ಮದುವೆಯಾಗಲು ಆಟ ನಿರಾಕರಿಸಿದ್ದ ಎನ್ನಲಾಗಿದೆ. ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಮೇ 23 ರಂದು ವಿಚಾರಣೆಗೆ ತೆಗೆದುಕೊಳ್ಳಲಾಗಿತ್ತು. ಈ ವೇಳೆ ಹೈಕೋರ್ಟ್‌ನ ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಅವರು ಲಕ್ನೋ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರಿಂದ ಹುಡುಗಿಯ ಜನ್ಮ ಕುಂಡಲಿಯಲ್ಲಿ ಮಂಗಳದೋಷವಿದೆಯೇ ಅಥವಾ ಇಲ್ಲವೇ ಎಂಬುದನ್ನೂ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. 3 ವಾರಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಸಿಂಗ್ ಸೂಚಿಸಿ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿದ್ದರು.
ಇದನ್ನೂ ಓದಿ-Train Collision: ಬಾಲಾಸೋರ್ ತಲುಪಿದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?
ಹೈಕೋರ್ಟ್ ಆದೇಶದ ಮೇರೆಗೆ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಶೇಷ ವಿಚಾರಣೆ ನಡೆಸಿದೆ. ಮಧ್ಯಾಹ್ನ 3 ಗಂಟೆಗೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ವಿಶೇಷವಾಗಿ ವಿಚಾರಣೆಗೆ ಹಾಜರಾಗಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಜ್ಯೋತಿಷ್ಯ ಶಾಸ್ತ್ರ ಇದ್ದರೂ ಕೂಡ ನ್ಯಾಯಾಲಯದ ವಿಚಾರಣೆಯಲ್ಲಿ ಅದರ ವರದಿ ಕೇಳುವುದು ಸರಿಯಲ್ಲ ಎಂದರು. ಈ ಕುರಿತು ನ್ಯಾಯಮೂರ್ತಿಗಳು, ತಾವು ಜ್ಯೋತಿಷ್ಯವನ್ನು ಪ್ರಶ್ನಿಸುತ್ತಿಲ್ಲ, ಆದರೆ ನ್ಯಾಯಾಲಯದ ಪ್ರಕರಣಗಳಲ್ಲಿ ಅದರ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ-Train Accident: ರೈಲು ಯಾತ್ರೆಯ ವೇಳೆ ಈ ಸಂಗತಿಗಳನ್ನು ನೆನಪಿನಲ್ಲಿಡಿ, ದುರಂತದ ವೇಳೆ ಪ್ರಾಣ ರಕ್ಷಿಸಿಕೊಳ್ಳಬಹುದು
ನ್ಯಾಯಾಲಯದ ಆದೇಶ
ಆರೋಪಿಯು ಯುವತಿಯನ್ನು ಮಾಂಗ್ಲಿಕ್ ಎಂದು ಉಲ್ಲೇಖಿಸಿದ್ದಾಗಿ ಸಂತ್ರಸ್ತೆಯ ಪರ ಹಾಜರಾದ ವಕೀಲರು ನ್ಯಾಯಾಧೀಶರಿಗೆ ಈ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಹೈಕೋರ್ಟ್ ವರದಿ ಕೇಳಿತ್ತು. ಸಂತ್ರಸ್ತೆ ಕೂಡ ಜ್ಯೋತಿಷ್ಯ ವರದಿಗೆ ಒಪ್ಪಿಗೆ ನೀಡಿದ್ದರು. ಆದರೆ, ಅದರ ಅವಶ್ಯಕತೆ ಇಲ್ಲ ಮತ್ತು ಹೈಕೋರ್ಟ್ ಆದೇಶದ ಮೇಲೆ ತಡೆ ವಿಧಿಸಲಾಗುತ್ತಿದೆ ಎಂದ ನ್ಯಾಯಾಧೀಶರು, ಜೂನ್ 26 ರಂದು ಹೈಕೋರ್ಟ್ ಪ್ರಕರಣದ ಸತ್ಯಾಸತ್ಯತೆಗಳ ಪ್ರಕಾರ ವಿಚಾರಣೆ ನಡೆಸಬೇಕು ಎಂದು ಆದೇಶಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಕಕ್ಷಿದಾರರಿಗೆ ಮತ್ತು ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜುಲೈ 10 ರ ನಂತರ, ಕಾನೂನು ವಿಷಯದಲ್ಲಿ ಜ್ಯೋತಿಷ್ಯ ವರದಿಯನ್ನು ಕೇಳುವುದು ಸರಿಯೇ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.