Odisha Train Collision Update: ಓಡಿಷಾ ರೈಲು ದುರಂತ, ತುರ್ತು ಸಭೆ ಕರೆದ ಪ್ರಧಾನಿ ಮೋದಿ

Coromondel Express Derail: ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದ ಬಾಲಸೋರ್‌ನಲ್ಲಿ ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಇದಾದ ಬಳಿಕ ಪ್ರಧಾನಿ ಸಂತ್ರಸ್ತರನ್ನು ಕೂಡ ಭೇಟಿ ನಡೆಸಿ ಸಾಂತ್ವನ ಹೇಳಲಿದ್ದಾರೆ.   

Written by - Nitin Tabib | Last Updated : Jun 3, 2023, 01:27 PM IST
  • ಆದರೆ, ಈ ರೈಲು ಅಪಘಾತ ಹೇಗೆ ಸಂಭವಿಸಿತು, ಯಾರು ಹೊಣೆಗಾರರು ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ.
  • ಆದರೆ ಈ ಬೋಗಿಗಳ ಸ್ಥಿತಿ ನೋಡಿದರೆ ಅಪಘಾತದ ದೃಶ್ಯ ಎಷ್ಟು ಭೀಕರವಾಗಿರಬಹುದೆಂದು ಊಹೆಗೂ ಮೀರಿದೆ.
  • ಕೆಲವೇ ಸೆಕೆಂಡುಗಳಲ್ಲಿ, ರೈಲುಗಳ ಡಿಕ್ಕಿಯಲ್ಲಿ, ಅನೇಕ ಜನರ ಪ್ರಯಾಣವು ಅಪೂರ್ಣವಾಗಿ ಸ್ತಬ್ಧಗೊಂಡಿದೆ ಮತ್ತು ಅನೇಕರು ತಮ್ಮ ಸರ್ವಸ್ವವನ್ನು ಕಳೆದುಕೊಂಡರು ಎಂಬುದು ಮಾತ್ರ ಸ್ಪಷ್ಟವಾಗುತ್ತದೆ.
Odisha Train Collision Update: ಓಡಿಷಾ ರೈಲು ದುರಂತ, ತುರ್ತು ಸಭೆ ಕರೆದ ಪ್ರಧಾನಿ ಮೋದಿ title=

Odisha Train Accident: ಒಡಿಶಾದಲ್ಲಿ ಶುಕ್ರವಾರ ಸಂಜೆ ಭೀಕರ ರೈಲು ಅಪಘಾತ ಸಂಭವಿಸಿದೆ. ಬಾಲಸೋರ್‌ನ ನಿಲ್ದಾಣದ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮತ್ತು ಗೂಡ್ಸ್ ರೈಲು ನಡುವೆ ಡಿಕ್ಕಿ ಸಂಭವಿಸಿದೆ. ಈ ಎರಡು ರೈಲುಗಳ ಡಿಕ್ಕಿಯ ರಭಸಕ್ಕೆ ಕೋರಮಂಡಲ್ ರೈಲು ರೈಲು ಹಳಿಯಿಂದ ಕೆಳಗಿಳಿದಿದೆ. ರೈಲಿನ ಹಲವು ಬೋಗಿಗಳು ಸಮಾನಾಂತರದಲ್ಲಿರುವ ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಏನಾಯಿತು ಎಂದು ಯಾತ್ರಿಗಳು ಯೋಚಿಸುವ ಮೊದಲೇ ಯಶವಂತಪುರದಿಂದ ಹೌರಾಕ್ಕೆ ಹೋಗುತ್ತಿದ್ದ ರೈಲು ಈ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಇದಾದ ನಂತರ ಆ ರೈಲಿನ 3-4 ಬೋಗಿಗಳೂ ಸಹ ಹಳಿತಪ್ಪಿವೆ. ಮೂರು ರೈಲುಗಳ ಡಿಕ್ಕಿಯ ನಂತರ, ಬೋಗಿಗಳು ಹಳಿಗಳ ಮೇಲೆ ಇಸ್ಪೀಟ್ ಕಾರ್ಡ್ ನಂತೆ ಚದುರಿಹೋಗಿವೆ. ಬಾಲಸೋರ್ ರೈಲು ಅಪಘಾತದಲ್ಲಿ 288 ಮಂದಿ ಸಾವನ್ನಪ್ಪಿದ ಸುದ್ದಿ ಇದುವರೆಗೆ ಪ್ರಕಟಗೊಂಡಿದೆ. ಇದಲ್ಲದೇ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಒಡಿಶಾದ ಬಾಲಸೋರ್‌ನಲ್ಲಿ ಅಪಘಾತ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸ್ಥಳಕ್ಕೆ ಹೋಗಿ ಪರಿಸ್ಥಿತಿಯನ್ನು ಪರಾಮರ್ಶಿಸಲಿದ್ದಾರೆ. ಇದಾದ ಬಳಿಕ ಪ್ರಧಾನಿ ಸಂತ್ರಸ್ತರನ್ನು ಕೂಡ ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-Edible Oil Price: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ ಈ ರಾಜ್ಯ ಸರ್ಕಾರ, ಇಲ್ಲಿದೆ ಲೇಟೆಸ್ಟ್ ದರ

ಪ್ರಧಾನಿ ಮೋದಿಯವರ ಉನ್ನತ ಮಟ್ಟದ ಸಭೆ
ಒಡಿಶಾ ರೈಲು ಅಪಘಾತದ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅಪಘಾತದ ಅವಲೋಕನ ನಡೆಸಲಾಗಿದೆ. ಬಾಲಸೋರ್ ರೈಲು ಅಪಘಾತವು ಎಷ್ಟು ಭೀಕರವಾಗಿತ್ತು ಎಂದರೆ ಕ್ಷಣಾರ್ಧದಲ್ಲಿ ಕಿರುಚಾಟ-ಚೀರಾಟ ಆರಂಭಗೊಂಡಿದೆ. ಬೋಗಿಯೊಳಗೆ ಕುಳಿತಿದ್ದ ಪ್ರಯಾಣಿಕರಿಗೆ ಏನೂ ಅರ್ಥವಾಗಲಿಲ್ಲ. ಅನೇಕ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಾಯಂಕಾಲದ ಸಮಯದಲ್ಲಿ ನಡೆದ ಕಾರಣ ಸಮಯ ಕಳೆದಂತೆ ಮೃತದೇಹಗಳು ರಾಶಿಯೇ ಬೆಳತೊಡಗಿದೆ. ಜೀವ ಉಳಿಸುವುದೇ ಜನರ ದೊಡ್ಡ ಸವಾಲಾಗಿತ್ತು. ಕೂಡಲೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಸ್ಥಳೀಯರು ಕೂಡ ಇದರಲ್ಲಿ ತಮ್ಮ ಸಹಯೋಗ ನೀಡಿದ್ದಾರೆ. ರೈಲಿನ ಬೋಗಿಗಳಲ್ಲಿ ಸಿಲುಕಿದ್ದ ಜನರನ್ನು ಗ್ಯಾಸ್ ಕಟರ್‌ನಿಂದ ಕಂಪಾರ್ಟ್‌ಮೆಂಟ್‌ ಕತ್ತರಿಸಿ ಹೊರತೆಗೆಯಲಾಗಿದೆ.

ಇದನ್ನೂ ಓದಿ -ICICI ಹಾಗೂ ಪಿಎನ್ಬಿ ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಹೆಚ್ಚಾಗಲಿದೆ ಇಎಂಐ ಹೊರೆ

ಅಪಘಾತಕ್ಕೆ ಯಾರು ಹೊಣೆ?
ಆದರೆ, ಈ ರೈಲು ಅಪಘಾತ ಹೇಗೆ ಸಂಭವಿಸಿತು, ಯಾರು ಹೊಣೆಗಾರರು ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ. ಆದರೆ ಈ ಬೋಗಿಗಳ ಸ್ಥಿತಿ ನೋಡಿದರೆ ಅಪಘಾತದ ದೃಶ್ಯ ಎಷ್ಟು ಭೀಕರವಾಗಿರಬಹುದೆಂದು ಊಹೆಗೂ ಮೀರಿದೆ. ಕೆಲವೇ ಸೆಕೆಂಡುಗಳಲ್ಲಿ, ರೈಲುಗಳ ಡಿಕ್ಕಿಯಲ್ಲಿ, ಅನೇಕ ಜನರ ಪ್ರಯಾಣವು ಅಪೂರ್ಣವಾಗಿ ಸ್ತಬ್ಧಗೊಂಡಿದೆ ಮತ್ತು ಅನೇಕರು ತಮ್ಮ ಸರ್ವಸ್ವವನ್ನು ಕಳೆದುಕೊಂಡರು ಎಂಬುದು ಮಾತ್ರ ಸ್ಪಷ್ಟವಾಗುತ್ತದೆ. ಬಾಲಸೋರ್‌ನಲ್ಲಿ ಇನ್ನೂ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಿಕ್ಕಿಬಿದ್ದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News