Bihar Cnesus: ಬಿಹಾರದ ಜಾತಿ ಆಧಾರಿತ ಜನಗಣತಿಗೆ ಸಂಬಂಧಿಸಿದಂತೆ ನಿತೀಶ್ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಜಾತಿ ಆಧಾರಿತ ಜನಗಣತಿಗೆ  ಪಾಟ್ನಾ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜುಲೈ 14 ರಂದು ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಕೋರ್ಟ್ ಹೇಳಿದೆ. ಮೇಲ್ನೋಟಕ್ಕೆ ಜನಗಣತಿ  ಅಸಾಂವಿಧಾನಿಕ ಎಂದು ಪರಿಗಣಿಸಿ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಇದರ ವಿರುದ್ಧ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.


COMMERCIAL BREAK
SCROLL TO CONTINUE READING

ಹೈಕೋರ್ಟ್ ಕೆಲವು ಆಕ್ಷೇಪಣೆಗಳನ್ನು ದಾಖಲಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮೊದಲು ಅಲ್ಲಿ ವಿಚಾರಣೆ ನಡೆಸುವುದು ಉತ್ತಮ. ಮುಂದಿನ ದಿನಾಂಕದಂದು ಹೈಕೋರ್ಟ್ ಅದನ್ನು ಆಲಿಸದಿದ್ದರೆ, ನಂತರ ವಿಷಯವನ್ನು ನಮ್ಮ ಮುಂದೆ ಇರಿಸಿ. ಇದಕ್ಕೂ ಮುನ್ನ ಬುಧವಾರ (ಮೇ 17) ನ್ಯಾಯಮೂರ್ತಿ ಸಂಜಯ್ ಕರೋಲ್ ರಾಜೀನಾಮೆ ನೀಡಿದ ಕಾರಣ ವಿಚಾರಣೆಯನ್ನು ನಡೆಸಲಾಗಲಿಲ್ಲ. ನ್ಯಾಯಮೂರ್ತಿ ಅಭಯ್ ಓಕ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ಪೀಠ ಗುರುವಾರ ವಿಚಾರಣೆ ನಡೆಸಿದೆ.


ಇದನ್ನೂ ಓದಿ-Monsoon 2023 Date: ಈ ಬಾರಿಯ ಮಾನ್ಸೂನ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟಿಸಿದ ಐಎಂಡಿ


ಆರಂಭಿಕ ವಿಚಾರಣೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು
ಇದಕ್ಕೂ ಮೊದಲು ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತೀಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ತ್ವರಿತ ಪೂರ್ಣಗೊಳಿಸಲು ಬಿಹಾರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪಾಟ್ನಾ ಹೈಕೋರ್ಟ್ ತಿರಸ್ಕರಿಸುತ್ತು. ಮೇ 4 ರಂದು ಮೇಲಿನ ವಾದಗಳನ್ನು ಆಲಿಸಿದ ಹೈಕೋರ್ಟ್ ಜಾತಿವಾರು ಜನಗಣತಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಜುಲೈನಲ್ಲಿ ವಿಚಾರಣೆಯನ್ನು ಮುಂದೂಡಿತ್ತು.


ಇದನ್ನೂ ಓದಿ-Amarnath Yatra: ಇನ್ಮುಂದೆ ಈ ಜನರು ಅಮರನಾಥ ಯಾತ್ರೆ ನಡೆಸುವ ಹಾಗಿಲ್ಲ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್!


ಹೈಕೋರ್ಟ್‌ನ ಆದೇಶದ ನಂತರ, ಬಿಹಾರ ಸರ್ಕಾರವು ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿತ್ತು. ಮೇ 4ರ ಹೈಕೋರ್ಟ್‌ನ ಆದೇಶವು ಮಧ್ಯಂತರವಾಗಿದೆ ಎಂದು ಬಿಹಾರ ಸರ್ಕಾರ ಹೇಳಿದೆ. ಬಾಕಿ ಇರುವ ಸಮಸ್ಯೆಗಳ ಬಗ್ಗೆ ಶೀಘ್ರವೇ ತೀರ್ಮಾನ ನೀಡಬೇಕು. ವಿಷಯ ಇತ್ಯರ್ಥವಾಗಬೇಕು. ವಿಚಾರವನ್ನು ಬಾಕಿ ಇಡುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಸರ್ಕಾರ ವಾದಿಸಿತ್ತು. ಇದಾದ ಬಳಿಕವೂ ಕೂಡ ಹೈಕೋರ್ಟ್ ತನ್ನ ಹಳೆಯ ಆದೇಶವನ್ನೇ ಎತ್ತಿ ಹಿಡಿದಿತ್ತು. ಇದರ ನಂತರ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ