ನವದೆಹಲಿ : ತಮಿಳುನಾಡಿನ ಕುನ್ನೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತೀಯ ವಾಯುಪಡೆ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದ್ದು, ಇಂದು ಬೆಳಗ್ಗೆ ಕ್ಯಾಪ್ಟನ್ ವರುಣ್ ಸಿಂಗ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ. ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

7 ದಿನಗಳಿಂದ ಜೀವನ್ಮರಣದ ಹೋರಾಟ


ವರುಣ್ ಸಿಂಗ್ ಅವರನ್ನು ಉತ್ತಮ ಚಿಕಿತ್ಸೆಗಾಗಿ ತಮಿಳುನಾಡಿನ ವೆಲ್ಲಿಂಗ್ಟನ್ ನಿಂದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಡಿಸೆಂಬರ್ 8 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸತತ 7 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ವರುಣ್ ಸಿಂಗ್ ಸಾವಿನ ನಂತರ ಈ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದೆ.


ಇದನ್ನೂ ಓದಿ : Pralhad Joshi : ರಾಹುಲ್ ಗಾಂಧಿಯನ್ನ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ


ಈ ಮಾಹಿತಿಯನ್ನ ಯು ಆರ್ಮಿ ಟ್ವೀಟ್ ಮಾಡಿದೆ


ಭಾರತೀಯ ವಾಯುಪಡೆ(Indian Air Force) ಟ್ವೀಟ್ ಮಾಡಿ, 'ಡಿಸೆಂಬರ್ 8, 2021 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಧೈರ್ಯಶಾಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಇಂದು ನಿಧನರಾದರು ಎಂದು ತಿಳಿಸಲು ಭಾರತೀಯ ವಾಯುಪಡೆಯು ತೀವ್ರ ದುಃಖದಲ್ಲಿದೆ. ಭಾರತೀಯ ವಾಯುಪಡೆಯು ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳುತ್ತದೆ ಮತ್ತು ಅವರೊಂದಿಗೆ ನಿಂತಿದೆ.


ತಪ್ಪಿದ ಭಾರೀ ಅನಾಹುತ, 2 ಸೆಕೆಂಡ್‌ ತಡವಾಗುತ್ತಿದ್ದರೂ ಸುಟ್ಟು ಕರಕಲಾಗುತ್ತಿದ್ದ ವರ, ಬೆಚ್ಚಿ ಬೀಳಿಸುವ ವಿಡಿಯೋ


ವರುಣ್ ಸಿಂಗ್ ಗೆ ಈ ವರ್ಷದ ಶೌರ್ಯ ಚಕ್ರ 


ಈ ವರ್ಷದ ಸ್ವಾತಂತ್ರ್ಯ ದಿನದಂದು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶೌರ್ಯ ಚಕ್ರವನ್ನು ಪ್ರದಾನ ಮಾಡಿದರು. ಕಳೆದ ವರ್ಷ ಹಾರಾಟದ ಸಮಯದಲ್ಲಿ, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ತೇಜಸ್ ಯುದ್ಧವಿಮಾನವು ತಾಂತ್ರಿಕ ದೋಷವನ್ನು ಹೊಂದಿತ್ತು ಮತ್ತು ಅವರು ತಮ್ಮ ಯುದ್ಧ ವಿಮಾನವನ್ನು ಗಾಳಿಯ ಮಧ್ಯದಲ್ಲಿ ತುರ್ತುಸ್ಥಿತಿಯ ಹೊರತಾಗಿಯೂ ಸುರಕ್ಷಿತವಾಗಿ ಇಳಿಸಿದರು. ಈ ಧೈರ್ಯಶಾಲಿ ಕಾರ್ಯಕ್ಕಾಗಿ, ಅವರಿಗೆ ಶೌರ್ಯ ಚಕ್ರವನ್ನು ನೀಡಲಾಯಿತು.


UP ಡಿಯೋರಿಯಾ ನಿವಾಸಿ ವರುಣ್ ಸಿಂಗ್ 


ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ತಹಸಿಲ್‌ನ ಕನ್ಹೋಲಿ ಗ್ರಾಮದ ನಿವಾಸಿಯಾಗಿದ್ದು, ಈ ಸಮಯದಲ್ಲಿ ವರುಣ್ ಸಿಂಗ್ ಅವರನ್ನು ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ನಿಯೋಜಿಸಲಾಗಿತ್ತು. ವರುಣ್ ಸಿಂಗ್ ಅವರು ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ (ಡಿಎಸ್‌ಎಸ್‌ಸಿ) ನಿರ್ದೇಶನ ಸಿಬ್ಬಂದಿಯಲ್ಲಿದ್ದರು. ವರುಣ್ ಸಿಂಗ್ ಅವರ ತಂದೆ ಕರ್ನಲ್ ಕೆಪಿ ಸಿಂಗ್ ಕೂಡ ಸೇನೆಯಿಂದ ನಿವೃತ್ತರಾಗಿದ್ದಾರೆ ಮತ್ತು ಪ್ರಸ್ತುತ ಅವರ ಕುಟುಂಬವು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಾಸಿಸುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.